Advertisment

ಡಾ.ಕೃತಿಕಾ ಪ್ರಕರಣ; ಮಹೇಂದ್ರ ರೆಡ್ಡಿ ಮನೆಯಲ್ಲಿ ಮಹಜರು.. ಆರೋಪಿ ಪ್ಲಾನ್​ ಹೇಗೆಲ್ಲಾ ಇತ್ತು?

ಪ್ಯಾರಸಿಟಮಾಲ್ ಹಾಗೂ ಪ್ರಪೋಪೋಲ್ ಡ್ರಗ್ ಕೊಟ್ಟಿದ್ದನು. ಇದು ಅಲ್ಲದೇ ರಾತ್ರಿ ಮಲಗುವಾಗ ಮಾತ್ರವೇ ಪತ್ನಿಗೆ ಐವಿ ಹಾಕಿ ಡ್ರಿಪ್ಸ್ ಹಾಕ್ತಿದ್ದನು. ಬಲಗಾಲಿನ ಪಾದಕ್ಕೆ ಐವಿ ಮೂಲಕ ರಕ್ತನಾಳಗಳಿಗೆ ನೇರವಾಗಿ ಡ್ರಿಪ್ಸ್ ಹಾಕಿ ಇಂಜೆಕ್ಷನ್‌ ನೀಡುತ್ತಿದ್ದನು.

author-image
Bhimappa
BNG_DOCTOR
Advertisment

ಬೆಂಗಳೂರು: ಡಾಕ್ಟರ್​ ಕೃತಿಕಾ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಗಂಡ ಡಾಕ್ಟರ್​ ಮಹೇಂದ್ರ ರೆಡ್ಡಿಯನ್ನ ಮಾರತ್ತಹಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಸದ್ಯ ಇದರ ಬೆನ್ನಲ್ಲೇ ಗುಂಜೂರಿನಲ್ಲಿರುವ ಮಹೇಂದ್ರ ರೆಡ್ಡಿ ನಿವಾಸದಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ. 

Advertisment

ವಿಕ್ಟೋರಿಯಾ ಆಸ್ಪತ್ರೆಯ ಸರ್ಜನ್ ಆಗಿದ್ದ ಮಹೇಂದ್ರ ರೆಡ್ಡಿ ತನ್ನ ಹೆಂಡತಿ ಕೃತಿಕಾಗೆ ಅನಸ್ತೇಶಿಯಾ ನೀಡಿ ಜೀವ ತೆಗೆದಿದ್ದನು. ಇದು ಎಫ್​​​ಎಸ್​ಎಲ್​ ವರದಿ ಮೂಲಕ ಸತ್ಯ ಬಹಿರಂಗವಾಗಿತ್ತು. ಇದಾದ ಮೇಲೆ ಪೊಲೀಸರು ಮಹೇಂದ್ರ ರೆಡ್ಡಿಯನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದರು. ಇದರ ಬೆನ್ನಲ್ಲೇ ನಿನ್ನೆ ಗುಂಜೂರಿನ ನಿವಾಸದಲ್ಲಿ ಪೊಲೀಸರು 3 ಗಂಟೆಗಳ ಕಾಲ ಮಹಜರು ಮಾಡಿದ್ದಾರೆ. ಇನ್ನು ಇದೇ ವೇಳೆ ನಿವಾಸದಲ್ಲಿ ಕೃತಿಕಾ ರೆಡ್ಡಿ ಮೆಡಿಕಲ್ ಸರ್ಟಿಫಿಕೆಟ್ಸ್, ಮೊಬೈಲ್, ಐಪ್ಯಾಡ್ ಹಾಗೂ ಮಹೇಂದ್ರ ರೆಡ್ಡಿ ಮೊಬೈಲ್, ಲ್ಯಾಪ್ ಟಾಪ್ ಸೀಜ್ ಮಾಡಿದ್ದಾರೆ. 

BNG_DOCTOR_1

ಡಾಕ್ಟರ್ ಕೃತಿಕಾಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದು ಮಹೇಂದ್ರ ರೆಡ್ಡಿ ಚಿಕಿತ್ಸೆ ಕೊಡುತ್ತಿದ್ದನು. ಏಪ್ರಿಲ್ 21 ರಿಂದ ಏ.23 ರವರೆಗೂ 4 ದಿನ ಡ್ರಿಪ್ಸ್ ಹಾಕಿದ್ದನು. ಏಪ್ರಿಲ್ 21 ರಂದು ಗುಂಜೂರಿನ ತನ್ನ ಮನೆಯಲ್ಲಿ ಐವಿ ಡ್ರಿಪ್ ಹಾಕಿ ಇಂಜೆಕ್ಷನ್ ನೀಡಿದ್ದನು. ಏ.22 ರಂದು ಗುಂಜೂರಿನ ಮನೆಯಿಂದ ಕೃತಿಕಾ ನಿವಾಸಕ್ಕೆ ಕರೆತಂದಿದ್ದನು. ಏ.22 ರಿಂದ 23 ರವರೆಗೂ ಪ್ರತಿದಿನ ರಾತ್ರಿ ಡ್ರಿಪ್ಸ್ ಹಾಕಿ ಇಂಜೆಕ್ಷನ್ ಮಾಡಿದ್ದನು. ಪ್ಯಾರಸಿಟಮಾಲ್ ಹಾಗೂ ಪ್ರಪೋಪೋಲ್ ಡ್ರಗ್ ಕೊಟ್ಟಿದ್ದನು. ಇದು ಅಲ್ಲದೇ ರಾತ್ರಿ ಮಲಗುವಾಗ ಮಾತ್ರವೇ ಪತ್ನಿಗೆ ಐವಿ ಹಾಕಿ ಡ್ರಿಪ್ಸ್ ಹಾಕ್ತಿದ್ದನು. ಬಲಗಾಲಿನ ಪಾದಕ್ಕೆ ಐವಿ ಮೂಲಕ ರಕ್ತನಾಳಗಳಿಗೆ ನೇರವಾಗಿ ಡ್ರಿಪ್ಸ್ ಹಾಕಿ ಇಂಜೆಕ್ಷನ್‌ ನೀಡುತ್ತಿದ್ದನು. ಪ್ಯಾರಸಿಟಮಾಲ್ ಹಾಗೂ ಪ್ರೊಪೋಪೋಲ್ ಇಂಜೆಕ್ಷನ್ ನೀಡಿರೋದು ಗೊತ್ತಾಗಿದೆ. 

ಜೀವ ಹೋಗುವ ಕೆಲ ನಿಮಿಷಕ್ಕೂ ಮೊದಲು ಗಂಡಗೆ ವಾಟ್ಸ್​ಅಪ್ ಮೆಸೇಜ್

ಏಪ್ರಿಲ್ 23 ರಂದು ಕೃತಿಕಾರೆಡ್ಡಿ ಮಹೇಂದ್ರಗೆ ವಾಟ್ಸ್​ಅಪ್​ ಸಂದೇಶ ಮಾಡಿರುವುದು ಲಭ್ಯವಾಗಿದೆ. ಏ.21 ರಿಂದ ಏ.23 ರವರೆಗೂ ಮೂರು ದಿನಗಳ ಕಾಲ ಪತ್ನಿಗೆ ಐವಿ ಡ್ರಿಪ್ಸ್ ಹಾಕಿ ಇಂಜೆಕ್ಷನ್ ಕೊಟ್ಟಿದ್ದನು. 3 ದಿನಗಳ ಕಾಲ ಕಾಲಿನ ನರಕ್ಕೆ ಹಾಕಿದ್ದ ಡ್ರಿಪ್ಸ್ ತೆಗೆಯದೇ ಚಿಕಿತ್ಸೆ ನೀಡಿದ್ದನು. ಡ್ರಿಪ್ಸ್ ಹಾಕಿದ್ದ ನೋವನ್ನ ತಡೆಯಲಾರದೇ ಪತಿ ಮಹೇಂದ್ರಗೆ ಕೃತಿಕಾ ಮೆಸೇಜ್ ಮಾಡಿದ್ದಳು. 

Advertisment

ಕೃತಿಕಾ ರೆಡ್ಡಿ- ನನ್ನ ಕೈಯ್ಯಲ್ಲಿ ನೋವನ್ನ ತಡೆಯಲಿಕ್ಕೆ ಆಗುತ್ತಿಲ್ಲ. ನಾನು ಡ್ರಿಪ್ಸ್​​ನ ರಿಮೂವ್ ಮಾಡುತ್ತೇನೆ. ತುಂಬಾ ನೋವಾಗುತ್ತದೆ.

ಮಹೇಂದ್ರ ರೆಡ್ಡಿ- ಇವತ್ತು ಡ್ರಿಪ್ಸ್​​ನ ತೆಗೆಯುತ್ತೇನೆ. ಇದೊಂದು ಡ್ರಿಪ್ಸ್ ಹೋಗಲಿ ಮತ್ತೆ ನಿನಗೆ ಈ ರೀತಿಯಾದ ನೋವು ಇರದಂತೆ ಮಾಡ್ತೀನಿ.

ಮಹೇಂದ್ರ ಸಿನಿಮಾ ಮಾದರಿಯಲ್ಲಿ ಪ್ಲಾನ್ ಮಾಡಿದ್ದನು. ತನಿಖೆ ಆದರೂ ಸಿಕ್ಕಿಬೀಳದಂತೆ ಅನಸ್ತೇಶಿಯಾ ಬಗ್ಗೆ ಸಂಪೂರ್ಣ ಮಾಹಿತಿ ಅರಿತಿದ್ದನು. ಮನುಷ್ಯನ ದೇಹದಲ್ಲಿ ಅನಸ್ತೇಶಿಯ ಹೆಚ್ಚು ಸಮಯ ನಿಲ್ಲಲ್ಲ. ಮನುಷ್ಯನ ದೇಹದಲ್ಲಿ ಅನಸ್ತೇಶಿಯಾ ಕೊಟ್ಟರೇ 4 ಗಂಟೆಯಲ್ಲಿ ಶೇ.50 ಕಡಿಮೆಯಾಗಿತ್ತದೆ. 24 ಗಂಟೆ ಕಳೆದರೆ ಅನಸ್ತೇಶಿಯಾ ಅಂಶ ಸಂಪೂರ್ಣವಾಗಿ ನಾಶವಾಗುತ್ತದೆ. ನಂತರ ಪೋಸ್ಟ್ ಮಾರ್ಟಮ್ ಮಾಡಿದರೂ ಅದು ಪತ್ತೆ ಆಗುವುದು ವಿರಳ. ಇದನ್ನೇ ಪ್ಲಾನ್ ಮಾಡಿ ಕೃತಿಕಾ ಜೀವ ತೆಗೆದಿದ್ದನು. 

Advertisment

ಡಾಕ್ಟರ್ ಮಹೇಂದ್ರ ರೆಡ್ಡಿ ಕೊಟ್ಟಿರುವ ಅನಸ್ತೇಶಿಯಾದ ಹೆಸರು ಪ್ರೊಪೊಫೋಲ್ ಆಗಿದೆ. ಕೃತಿಕಾ ಸಾವನ್ನಪ್ಪಿದ 4 ಗಂಟೆಯಲ್ಲಿ ಮೃತದೇಹ ಆಸ್ಪತ್ರೆಗೆ ತಲುಪಿತ್ತು. ಅಷ್ಟೊತ್ತಿಗೆ ಶೇ.50 ಅನಸ್ತೇಶಿಯಾ ದೇಹದಲ್ಲಿ ಕಡಿಮೆ ಆಗಿತ್ತು. ಹೀಗಾಗಿ ಪೋಸ್ಟ್ ಮಾರ್ಟಮ್ ಮಾಡೋದು ಬೇಡ ಎಂದು ಮಹೇಂದ್ರ ಹಠ ಹಿಡಿದಿದ್ದನು. ಸಹೋದರಿ ನಿಖಿತಾ ಒತ್ತಾಯ ಮಾಡಿದಾಗ ಪೋಸ್ಟ್ ಮಾರ್ಟಮ್​ಗೆ ನಿರ್ಧರಿಸಲಾಗಿತ್ತು. ಆಗ ಮತ್ತೊಂದು ಹೊಸ ಪ್ಲಾನ್ ಮಾಡಿದ್ದನು.

ಇದನ್ನೂ ಓದಿ: QR ಕೋಡ್​​ ಸ್ಕ್ಯಾನ್​ಗೆ ಇನ್ಮುಂದೆ ಮೊಬೈಲ್​ ಬೇಕಿಲ್ಲ.. ನಿಮ್ಮ ಕಣ್ಣುಗಳಿಂದಲೇ​ ಮಾಡಬಹುದು, ಹೇಗೆ?

pr

ಪೋಸ್ಟ್ ಮಾರ್ಟಮ್ ಮುಂದಕ್ಕೆ ಹಾಕಲು ಪ್ಲಾನ್

ಮೃತದೇಹ ಫ್ರೀಜರ್​ನಲ್ಲಿ ಇಟ್ಟು ನಾಳೆ ಪೋಸ್ಟ್ ಮಾರ್ಟಮ್ ಮಾಡೋಣ ಎಂದಿದ್ದನು. ಅಷ್ಟೊತ್ತಿಗೆ 24 ಗಂಟೆ ಕಳೆದಿರುತ್ತೆ. ಅನಸ್ತೇಶಿಯಾ ಅಂಶ ದೇಹದಲ್ಲಿ ಕಡಿಮೆಯಾಗುತ್ತದೆ. ಇದಕ್ಕೆ ಮನೆಯವರು ಒಪ್ಪದೇ ಪೋಸ್ಟ್ ಮಾರ್ಟಮ್ ‌ಮಾಡಿಸಿದ್ದರು. ಇದರಿಂದ ಮಹೇಂದ್ರ ಪ್ಲಾನ್ ಎಲ್ಲವೂ ಪ್ಲಾಪ್ ಆಗಿತ್ತು. …

Advertisment

ಡಾಕ್ಟರ್ ಕೃತಿಕಾ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಲಾಗುತ್ತಿದೆ. ಜಸ್ಟೀಸ್ ಫಾರ್ ಕೃತಿಕಾ ಎನ್ನುವ ಪೋಸ್ಟರ್ ಹರಿದಾಡುತ್ತಿವೆ. ನ್ಯಾಯಕ್ಕಾಗಿ ಪೋಷಕರು ಹಾಗೂ ಕುಟುಂಬಸ್ಥರ ಹೋರಾಟ ಮುಂದುವರೆಸಿದ್ದಾರೆ. ಕೃತಿಕಾ ಸಾವಿಗೆ ನ್ಯಾಯ ಸಿಗಬೇಕು. ಆರೋಪಿ ಮಹೇಂದ್ರ ರೆಡ್ಡಿಗೆ ಶಿಕ್ಷೆ ಆಗಬೇಕು ಎಂದು ಮೃತ ಕೃತಿಕಾ ಕುಟುಂಬಸ್ಥರು ಆಗ್ರಹಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore Dr Kruthika M Reddy
Advertisment
Advertisment
Advertisment