/newsfirstlive-kannada/media/media_files/2025/10/01/kr_market-1-2025-10-01-07-55-08.jpg)
ಬೆಂಗಳೂರು: ದೇಶದೆಲ್ಲೆಡೆ ದಸರಾ ಸಡಗರ, ಸಂಭ್ರಮ ಹೊಸ ಸಂತಸ, ಖುಷಿ ತಂದಿದೆ. ಹಾಗೇ ಆಯುಧ ಪೂಜೆಯೂ ಮೈಸೂರು ಸೇರಿ ರಾಜ್ಯಾದ್ಯಂತ ಕಳೆಗಟ್ಟಿದೆ. ಮಾಲೀಕರು ಬೈಕ್​, ಕಾರು ಸೇರಿ ತಮ್ಮ ತಮ್ಮ ವಾಹನಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆಗೆ ರೆಡಿಯಾಗಿದ್ದಾರೆ. ಮನೆಯಲ್ಲಿ ಆಯುಧಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಮಾರ್ಕೆಟ್​ನಲ್ಲಿ ಕನಕಾಂಬರ, ಮಲ್ಲಿಗೆ ಸೇರಿದಂತೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿವೆ.
ನಾಡಿನೆಲ್ಲೆಡೆ ಇಂದು ಎಲ್ಲರೂ ಆಯುಧ ಪೂಜಾ ಮಾಡುವುದರಿಂದ ಮಾರ್ಕೆಟ್​ನಲ್ಲಿ ಪೂಜಾ ವಸ್ತುಗಳನ್ನು ಖರೀದಿ ಮಾಡುವುದು ಸಾಮಾನ್ಯ. ಸಿಲಿಕಾನ್ ಸಿಟಿಯ ಮಾರ್ಕೆಟ್​ನಲ್ಲೂ ಜನರು ಕಿಕ್ಕಿರಿದು ಸೇರಿದ್ದು ಹೂವು, ಹಣ್ಣು, ಕಾಯಿ ಸೇರಿ ಇತರೆ ವಸ್ತುಗಳ ಬೆಲೆ ದುಪ್ಪಟ್ಟು ಆದರೂ ಖರೀದಿ ಮಾಡುತ್ತಿದ್ದಾರೆ. ಬೆಳ್​ ಬೆಳಗ್ಗೆಯೇ ಹಬ್ಬದ ಸಾಮಗ್ರಿಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ:ಚೆನ್ನೈನಲ್ಲಿ 9 ಜನ ಜೀವ ಬಿಟ್ಟ ಘಟನೆ; ಪ್ರಧಾನಿ ಮೋದಿ ಕಚೇರಿಯಿಂದ ಪರಿಹಾರ ಘೋಷಣೆ
ಕೆ.ಆರ್​ ಮಾರ್ಕೆಟ್​ನಲ್ಲಿ ಎತ್ತ ನೋಡಿದರೂ ಜನವೋ ಜನ. ಇದರಿಂದ ಮಾರ್ಕೆಟ್​ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಬೆಲೆ ಏರಿಕೆ ನಡುವೆಯೂ ಹಬ್ಬದ ಖರೀದಿ ಭರಾಟೆ ಮತ್ತಷ್ಟು ಜೋರಾಗಿದೆ. ಹೂವಿನ ಹಾರಗಳ ಬೆಲೆಯು ಸಾವಿರ ರೂಪಾಯಿ ಗಡಿ ದಾಟಿವೆ. ಮಲ್ಲಿಗೆ, ಗುಲಾವಿ ಹಾರ ಹಾಗೂ ಕನಕಾಂಬರದ ಬೆಲೆ ಕೇಳಿದರೆ ಫುಲ್ ಶಾಕ್ ಆಗುತ್ತದೆ.
ಹಬ್ಬದ ಬಿಸಿ.. ಹೂವುಗಳ ಬೆಲೆ ಭಾರೀ ಏರಿಕೆ
ಪ್ರತಿ ಕೆ.ಜಿ ಹೂವುಗಳು | ಹೂವುಗಳ ದರ |
ಸೇವಂತಿ | 200- 300 ರೂ |
ಕನಕಾಂಬರ | 2000- 2500 ರೂ |
ಮಲ್ಲಿಗೆ | 1,500- 2000 ರೂ |
ಗುಲಾಬಿ | 400- 450 ರೂ |
ಕಾಕಡ | 800- 900 ರೂ |
ಜೋಡಿ ಬಾಳೆಕಂಬ | 50- 70 ರೂ |
ಬೂದುಕುಂಬಳ ಕಾಯಿ | 40- 60 ರೂ |
ಗುಲಾವಿ ಹಾರ | 4,000 ರೂ |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ