ಕಾಂಗ್ರೆಸ್​ ಶಾಸಕ ಸತೀಶ್ ಸೈಲ್​ ಅರೆಸ್ಟ್​.. ಇಡಿ ಅಧಿಕಾರಿಗಳಿಂದ ಬಂಧನ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕ ಸತೀಶ್ ಸೈಲ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಾಂತರ ರೂಪಾಯಿ ಹಣ ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದರು.

author-image
Bhimappa
Satish_Sail_Arrest
Advertisment

ಉತ್ತರ ಕನ್ನಡ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಶಾಸಕ ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. 

ಅಕ್ರಮ ಅದಿರು ಸಾಗಾಟ ಕೇಸ್​​ನಲ್ಲಿ ಆಗಸ್ಟ್ 13, 14 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕ ಸತೀಶ್ ಸೈಲ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಾಂತರ ರೂಪಾಯಿ ಹಣ ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ಶಾಸಕ ಸತೀಶ್ ಸೈಲ್​ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಶೋಧ ಕಾರರ್ಯ ನಡೆದಿತ್ತು.

ಇದನ್ನೂ ಓದಿ:ಬೆಂಕಿ ಕೆಂಡವಾದ ನೇಪಾಳ; ರಕ್ತ ಬರುವಂತೆ ಹಲ್ಲೆ.. ಮಾಜಿ ಪ್ರಧಾನಿಯ ಹೆಂಡತಿ ಸಜೀವ ದಹನ

ಆಗ ಕಾರವಾರ ಶಾಸಕ ಸತೀಶ್ ಸೈಲ್​ಗೆ ಸಂಬಂಧಿಸಿದ 14 ಕೋಟಿ ಠೇವಣಿ, ಚಿನ್ನಾಭರಣವನ್ನು ಇಡಿ ವಶಕ್ಕೆ ಪಡೆದಿತ್ತು. 1.68 ಕೋಟಿ ರೂಪಾಯಿ ಹಾಗೂ 6.75 ಕೆಜಿ ಚಿನ್ನಾಭರಣ ವಶಕ್ಕೆ ಪಡೆದು ಸತೀಶ್​ ಸೈಲ್​ರನ್ನ ಅಧಿಕಾರಿಗಳು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಬೆಂಗಳೂರಿಗೆ ಬಂದ ಮೇಲೆ ರಾತ್ರಿ 11 ಗಂಟೆಗೆ ಕೋಗಿಲ್ ಕ್ರಾಸ್​ನಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.  

ಸತೀಶ್ ಸೈಲ್​​ಗೆ ಸಂಬಂಧಿಸಿದ ಕಾರವಾರ, ಗೋವಾ, ಮುಂಬೈ, ದೆಹಲಿಯಲ್ಲಿರುವ ಸ್ಥಳಗಳ ಮೇಲೆ ಇಡಿ ದಾಳಿ ಮಾಡಿತ್ತು. ದಾಳಿ ವೇಳೆ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಪತ್ತೆಯಾಗಿತ್ತು. ಇವುಗಳನ್ನು ಇಡಿ ಅಧಿಕಾರಿಗಳು 2 ಟ್ರಂಕ್​ಗಳಲ್ಲಿ ಚಿನ್ನ, ಹಣ, ದಾಖಲೆ ಸಮೇತ ಪ್ಯಾಕ್​ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Congress MLA
Advertisment