/newsfirstlive-kannada/media/media_files/2025/08/06/dk-shikumar1-2025-08-06-10-53-13.jpg)
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಓಡಿಸಿದ ಸ್ಕೂಟರ್ ಮೇಲೆ ಬರೋಬ್ಬರಿ ₹18,500 ರೂಪಾಯಿ ದಂಡ ವಿಧಿಸಲಾಗಿದೆ. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.
ಇದನ್ನೂ ಓದಿ:ಧರ್ಮಸ್ಥಳ ಕೇಸ್ಗೆ ಅತಿದೊಡ್ಡ ಟ್ವಿಸ್ಟ್.. ನಿನ್ನೆ ಸಿಕ್ಕಿದ್ದು ಒಂದಲ್ಲ.. ಬರೋಬ್ಬರಿ 3 ಅಸ್ಥಿಪಂಜರ..!
ಹೌದು, ನಿನ್ನೆ ಡಿಕೆ ಶಿವಕುಮಾರ್ ಅವರು ಹೆಬ್ಬಾಳ ಬಳಿ ಬಿಡಿಎ ವತಿಯಿಂದ ನಿರ್ಮಿಸುತ್ತಿರುವ ಹೊಸ ಮೇಲ್ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆಗೆಂದು ಬಂದಿದ್ದರು. ಹೆಲ್ಮೆಟ್, ಕಪ್ಪು ಕನ್ನಡಕ ಹಾಕಿಕೊಂಡು ಹೊಸ ಫ್ಲೈಓವರ್ ಮೇಲೆ ಡಿಯೋ ಸ್ಕೂಟರ್ನಲ್ಲಿ ಒಂದು ರೌಂಡ್ ಹೋಗಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ.
ಆದ್ರೆ, ಡಿಕೆ ಶಿವಕುಮಾರ್ ಅವರು ಹೆಬ್ಬಾಳದ ಹೊಸ ಮೇಲ್ಸೇತುವೆ ಮೇಲೆ ಓಡಿಸಿದ ಸ್ಕೂಟರ್ ಮೇಲೆ ಬರೋಬ್ಬರಿ ₹18,500 ರೂಪಾಯಿ ದಂಡ ಇದೆ. KA04JZ2087 ನಂಬರಿನ ಸ್ಕೂಟರ್ 34 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಟನೆ ಮಾಡಿದೆ.
ಈ ಹಿಂದೆ ಇದೇ ಸ್ಕೂಟರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದರ ಮಾಲೀಕ ಪದೇ ಪದೇ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದ. ಅದರ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದ್ರೆ, ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಡಿಯೋ ಸ್ಕೂಟರ್ ಮೇಲೆ ಡಿಕೆ ಶಿವಕುಮಾರ್ ಅವರು ರೌಂಡ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ