/newsfirstlive-kannada/media/media_files/2025/08/13/school-bus-2025-08-13-08-08-34.jpg)
ಬೆಂಗಳೂರು: ಬಾಣಸವಾಡಿಯ OMBR ಲೇಔಟ್ನಲ್ಲಿ ಪಾರ್ಕ್ ಮಾಡಿದ್ದ ಸ್ಕೂಲ್ ಬಸ್ ಹೊತ್ತಿ ಉರಿದಿದ್ದು, ಓರ್ವ ವ್ಯಕ್ತಿ ಸಜೀವ ದಹನವಾಗಿದ್ದಾನೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ಅರುಣ್ ಎಂಬುವವರಿಗೆ ಸೇರಿದ ಖಾಸಗಿ ಶಾಲೆ ಬಸ್ ಮೂರು ತಿಂಗಳಿಂದ ಕೆಟ್ಟು ನಿಂತಿತ್ತು.
ಇದನ್ನೂ ಓದಿ:ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದಲ್ಲಿ ಮತ್ತೆ ಎರಡು ಹುಲಿ ಮರಿಗಳು ದುರಂತ ಅಂತ್ಯ
14 ವರ್ಷದ ಹಳೆ ಬಸ್‌ಗೆ ಎಫ್.ಸಿ ಇನ್ಯೂರೆನ್ಸ್ ಮುಗಿದಿದ್ದರಿಂದ, ನಿರ್ಜನ ಪ್ರದೇಶದಲ್ಲಿ ಬಸ್‌ನ ನಿಲ್ಲಿಸಲಾಗಿತ್ತು. ಖಾಸಗಿ ಬಸ್‌ನಲ್ಲಿ ಮಲಗಲು ಬಂದಿದ್ದ ವ್ಯಕ್ತಿ ಬೆಂಕಿಯಲ್ಲಿ ಸುಟ್ಟು ಹೋಗಿದ್ದಾನೆ. ಬಸ್‌ನಲ್ಲಿ ಮಲಗಲು ಚಾಪೆ ದಿಂಬು ತಂದಿರೋದು ಪೊಲೀಸರ ಪರಿಶೀಲನೆಯಲ್ಲಿ ಪತ್ತೆಯಾಗಿದೆ.
ಇನ್ನೂ, ಬಸ್‌ನ ಒಳಗೆ ಹೋಗಿ ಧೂಮಪಾನ ಮಾಡಿ ವ್ಯಕ್ತಿ ಮಲಗಿದ್ದನಂತೆ. ಪರಿಶೀಲನೆ ವೇಳೆ ಬಸ್‌ನಲ್ಲಿ ಕೆಲ ಬಿಡಿ ತುಂಡುಗಳು ಪತ್ತೆಯಾಗಿದೆ. ಬೀಡಿ ಸೇದಿದ ತುಂಡಿನಿಂದ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ಯಾ ಅಥವಾ ಬೇರೆ ಯಾರಾದ್ರೂ ಬಸ್‌ಗೆ ಬೆಂಕಿ ಹಚ್ಚಿ ಕೊ*ಲೆ ಮಾಡಿದ್ರಾ ಅಂತಾ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. 30 ವರ್ಷ ಆಸುಪಾಸಿನ ವ್ಯಕ್ತಿ ದುರಂತದಲ್ಲಿ ಮೃತಪಟ್ಟಿದ್ದು, ಇನ್ನೂ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ