ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದಲ್ಲಿ ಮತ್ತೆ ಎರಡು ಹುಲಿ ಮರಿಗಳು ದುರಂತ ಅಂತ್ಯ

ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಪ್ರಾಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಕಿರುಬನಕಲ್ಲು ಎಂಬ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ.

author-image
Ganesh
Tiger cub

ಹುಲಿ ಮರಿಗಳು Photograph: (AI)

Advertisment

ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಪ್ರಾಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಕಿರುಬನಕಲ್ಲು ಎಂಬ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ.

ಅರಣ್ಯ ರಕ್ಷಣಾ ಸಿಬ್ಬಂದಿ ನಿನ್ನೆ ಗಸ್ತು ತಿರುಗುವಾಗ ಒಂದು ಹುಲಿ ಮರಿಯ ಕಳೇಬರ ಪತ್ತೆ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿ ಆ ಪ್ರದೇಶದ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹುಲಿ ಮರಿಯು ಮೃತಪಟ್ಟ ಸಮೀಪ ಇರುವ ಕಲ್ಲು ಬಂಡೆಯ ಗುಹೆಯೊಳಗೆ ಮತ್ತೊಂದು ಹುಲಿ ಮರಿಯು ಮೃತಪಟ್ಟಿರೋದು ಪತ್ತೆಯಾಗಿದೆ. 

ಇದನ್ನೂ ಓದಿ: ನಾಯಿಗಳಿಂದ ಬಚಾವ್ ಆಗೋದಕ್ಕೆ ಹೋಗಿದ್ದ ಟೆಕ್ಕಿಗೆ ಸಿಕ್ತು ಕಳ್ಳನ ಪಟ್ಟ.. ಅಸಲಿಗೆ ಆಗಿದ್ದೇನು?

NTCA ಸದಸ್ಯರನ್ನೊಳಗೊಂಡ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮೃತ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷಾ ಪ್ರಕ್ರಿಯೆಯಲ್ಲಿ ಸದರಿ ಎರಡೂ ಹುಲಿ ಮರಿಗಳು ಸುಮಾರು 8 ರಿಂದ 10 ದಿನಗಳ ಮರಿಗಳಾಗಿರೋದು ಗೊತ್ತಾಗಿದೆ. 

ತನಿಖೆ ನಡೀತಿದೆ

ಮೃತ ಹುಲಿ ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟು ಹಸಿವಿನಿಂದ ನಿತ್ರಾಣಗೊಂಡು ಮೃತಪಟ್ಟಿರುತ್ತದೆ ಎಂದು ಪಶು ವೈದ್ಯರು ಸ್ಥಳದಲ್ಲಿಯೇ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಹಾಗೂ ಮೃತ ಹುಲಿ ಮರಿಗಳ ಸಾವಿನ ನಿಖರ ಮಾಹಿತಿಗಾಗಿ ಮೃತ ಹುಲಿ ಮರಿಗಳ ದೇಹದಿಂದ ಕೆಲವು ಮಾದರಿ ತುಣುಕುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿರುತ್ತದೆ. ಮರಣೋತ್ತರ ಪರೀಕ್ಷೆಯ ನಂತರ, ಎನ್.ಟಿ.ಸಿ.ಎ ಸದಸ್ಯರನ್ನೊಳಗೊಂಡ ತಂಡದವರ ಸಮ್ಮುಖದಲ್ಲಿ ಹುಲಿ ಮರಿಗಳ ಮೃತ ದೇಹವನ್ನು ಬೆಂಕಿಯಿಂದ ಸುಡಲಾಗಿರುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೆ.ಎನ್‌.ರಾಜಣ್ಣ ವಜಾ ಹಿಂದೆ ತೆರೆಯ ಹಿಂದೆ ನಡೆದಿದ್ದೇನು? ಸಿದ್ದರಾಮಯ್ಯ ಮಾಡಿದ ಪ್ರಯತ್ನ ವಿಫಲವಾಗಿದ್ದೇಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Tiger tiger cub carcasses found
Advertisment