/newsfirstlive-kannada/media/media_files/2025/08/12/dog-attack-2025-08-12-17-32-09.jpg)
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗಿದೆ. ಕಂಡ ಕಂಡಲ್ಲಿ, ಸಿಕ್ಕ ಸಿಕ್ಕವರ ಮೇಲೆ ನಾಯಿಗಳು ಅಟ್ಯಾಕ್ ಮಾಡುತ್ತಿವೆ. ನಾಯಿ ದಾಳಿಗೆ ಒಳಗಾದವರು ರೇಬಿಸ್ಗೆ ಬಲಿ ಆಗುತ್ತಿದ್ದಾರೆ.
ಈ ಸಂಬಂಧ ಬೀದಿ ನಾಯಿಗಳನ್ನು ಹಿಡಿದು ಅವುಗಳ ಆಶ್ರಯ ಕೇಂದ್ರಕ್ಕೆ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆ ಬೆನ್ನಲ್ಲೇ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಎರಡು ಶ್ವಾನಗಳು ಟೆಕ್ಕಿಯ ಮೇಲೆ ದಾಳಿಗೆ ಯತ್ನಿಸಿರೋ ಘಟನೆ ಬೆಳಕಿಗೆ ಬಂದಿದೆ. ಆದ್ರೆ ಬೀದಿ ನಾಯಿಗಳಿಂದ ಬಚಾವ್ ಆಗೋದಕ್ಕೆ ಹೋಗಿದ್ದ ಟೆಕ್ಕಿಗೆ ಕಳ್ಳನ ಪಟ್ಟ ಸಿಕ್ಕಿದೆ.
ಇದನ್ನೂ ಓದಿ: ಬಿಗ್ಬಾಸ್ಗೆ ಎಂಟ್ರಿ ಕೊಡ್ತಿದ್ದಾರಾ ಪಹಲ್ಗಾಮ್ ಸಂತ್ರಸ್ತೆ ಹಿಮಾಂಶಿ ನರ್ವಾಲ್? ಇದರ ಅಸಲಿಯತ್ತೇನು?
ಹೌದು, ಬೀದಿ ನಾಯಿಗಳ ಅಟ್ಯಾಕ್ನಿಂದ ಬಚಾವ್ ಆಗಲು ಹೋಗಿದ್ದ ಟೆಕ್ಕಿ ನಿವಾಸಿಗಳ ಕೈಗೆ ಲಾಕ್ ಆಗಿದ್ದಾನೆ. ಹೆಚ್ಎಸ್ಆರ್ ಲೇಔಟ್ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಕೆಲಸ ಮುಗಿಸಿ ನಡೆದುಕೊಂಡು ಟೆಕ್ಕಿ ಹೋಗುತ್ತಿದ್ದ. ಇದೇ ವೇಳೆ ಬೀದಿ ನಾಯಿಗಳು ಟೆಕ್ಕಿಯನ್ನ ಅಟ್ಟಿಸಿಕೊಂಡು ಬಂದಿವೆ. ಕೂಡಲೇ ಕೆಲ ದೂರ ಓಡಿದ ಟೆಕ್ಕಿ, ಪಕ್ಕದಲ್ಲೇ ಇದ್ದ ಮನೆಯೊಂದರ ಕಾಂಪೌಂಡ್ ಹಾರಿದ್ದಾನೆ.
ಆಗ ಕಾಂಪೌಂಡ್ ಹಾರುತ್ತಿದ್ದಂತೆ ಮನೆಯಿಂದ ಆಚೆ ಬಂದ ಕುಟುಂಬ ಟೆಕ್ಕಿಯನ್ನ ಕಳ್ಳ ಎಂದು ಭಾವಿಸಿ ಹಿಡಿದುಕೊಂಡಿದ್ದಾರೆ. ಬಳಿಕ ಆತನ ಪೋನ್ ಕಿತ್ತುಕೊಂಡು ಪರಿಶೀಲನೆ ಮಾಡಿದ್ದಾರೆ. ನಂತರ ನೆರೆ ಹೊರೆಯವರೆಯಲ್ಲ ಸೇರಿ ಸಿಸಿಟಿವಿ ಪರಿಶೀಲನೆ ಮಾಡಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ವಿಚಾರ ತಿಳಿದ ಮೇಲೆ ಟೆಕ್ಕಿಯನ್ನ ನಿವಾಸಿಗಳು ಬಿಟ್ಟು ಕಳುಹಿಸಿದ್ದಾರೆ. ಇನ್ನೂ, ಈ ಬಗ್ಗೆ ತನ್ನ ರೆಡ್ ಇಟ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಸಿನಿಮೀಯ ರೀತಿಯಲ್ಲಿ ನಾನು ಬಚಾವ್ ಆಗಿ ಬಂದೆ ಎಂದು ಟೆಕ್ಕಿ ಸುವಿವರವಾಗಿ ತಿಳಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ