/newsfirstlive-kannada/media/media_files/2025/10/29/gdg_news-2025-10-29-14-44-32.jpg)
ಗದಗ: ಚರ್ಚ್​​ ಬಿಲ್ಡಿಂಗ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಶಾಲೋಮ್ ಚರ್ಚ್ ಬಳಿ ನಡೆದಿದೆ.
ಮುಂಡರಗಿಯ ಹಾರೊಗೇರಿ ಗ್ರಾಮದ ತಿಪ್ಪಣ್ಣ ವಡ್ಡರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಡೆತ್ ನೋಟ್​ನಲ್ಲಿ ಚರ್ಚ್ ವ್ಯವಸ್ಥಾಪಕರ ಹೆಸರು ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ತಿಪ್ಪಣ್ಣ 5 ವರ್ಷದ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಕನ್ವರ್ಟ್​ ಅಗಿದ್ದ. ಹಾಗೆಯೇ ಪ್ರತಿ ಭಾನುವಾರ ಪ್ರಾರ್ಥನೆ ಮಾಡುವುದಕ್ಕೆ ಬೆಳ್ಳಟ್ಟಿಗೆ ಬರುತ್ತಿದ್ದನು. ಬೆಳಗ್ಗೆ ಪ್ರಾರ್ಥನೆ ಮುಗಿಸಿಕಕೊಂಡು ರಾತ್ರಿ ನೇಣಿಗೆ ಶರಣಾಗಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾಕ್ ಲಿಂಕ್, ಗೂಢಚಾರಿಕೆ ಆರೋಪದಡಿ ಜಾರ್ಖಂಡ್ ವ್ಯಕ್ತಿ ದೆಹಲಿಯಲ್ಲಿ ಬಂಧನ : ಸತ್ತವನು ಜೀವಂತ! ನಕಲಿ ಪಾಸ್ ಪೋರ್ಟ್ ವಶಕ್ಕೆ
/filters:format(webp)/newsfirstlive-kannada/media/media_files/2025/10/29/gdg_news_1-2025-10-29-14-45-25.jpg)
ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್​ನಲ್ಲಿ ಚರ್ಚ್ ವ್ಯವಸ್ಥಾಪಕ ವಿನಯ್ ಗಜಾನನ್ ಹಾಗೂ ಇವರ ತಾಯಿ ಭಾರತಿ ಹೆಸರು ಇದೆ. ಪ್ರಾರ್ಥನೆ ಸಮಯದಲ್ಲಿ ತಿಪ್ಪಣ್ಣನನ್ನು ಕುರಿತು ಫಾಸ್ಟರ್ ವಿನಯ್ ಅಸಹ್ಯ ವರ್ತನೆ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ. ಇವರಿಬ್ಬರೇ ವ್ಯಕ್ತಿಯ ಸಾವಿಗೆ ಕಾರಣ ಆಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಘಟನೆಯ ನಂತರ ಶಾಲೋಮ್ ಚರ್ಚ್ ಎದುರು ಶ್ರೀರಾಮ ಸೇನೆ ಸಂಘಟನೆ ಆಕ್ರೋಶ ಹೊರ ಹಾಕಿದೆ. ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಪ್ರಾರ್ಥನೆ ನಡೆಸುತ್ತಿದ್ದಾರೆ. ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಅರೋಪಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us