/newsfirstlive-kannada/media/media_files/2026/01/12/gadaga-nidhi-5-2026-01-12-13-04-34.jpg)
ಅದು ಐತಿಹಾಸಿಕ ಗ್ರಾಮ.. ದೇವಾಲಯಗಳ ಸ್ವರ್ಗ.. ಶಿಲ್ಪ ಕಲೆ ತೂಗುವ ತೊಟ್ಟಿಲು.. 101 ದೇವಸ್ಥಾನ, 101 ಬಾವಿಗಳ ಐತಿಹಾಸಿಕ ಪ್ರತೀತಿ ಇರೋ ಊರು. ಆ ಗ್ರಾಮದಲ್ಲಿ ಮನೆ ಕಟ್ಟಬೇಕು ಅಂತ ಪಾಯ ತೆಗೆಯೋ ವೇಳೆ ಹೊನ್ನಿನ ನಿಧಿ ಸಿಕ್ಕಿದೆ. ಅಷ್ಟಕ್ಕೂ ಆ ಗ್ರಾಮ ಯಾವುದು ಅಂತೀರಾ? ಅದು ಬೇರಾವುದು ಅಲ್ಲ, ಗದಗ ಐತಿಹಾಸಿಕ ಲಕ್ಕುಂಡಿ ಗ್ರಾಮ.
ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ ರಿತ್ತಿ ಅನ್ನೋ ಈ ಮಹಿಳೆಯ ಮನೆ ಜಾಗದಲ್ಲಿ ಸಿಕ್ಕ ನಿಧಿ ಇದು. ಇವ್ರ ಮಗ ಪ್ರಜ್ವಲ್ ರಿತ್ತಿ ಕೂಡ ಈ ನಿಧಿ ಸಿಕ್ಕಾಗ ಅಲ್ಲೆ ಇದ್ದ. ಬಟ್​ ಈ ಕುಟುಂಬಕ್ಕೆ ನಿಧಿ ಸಿಕ್ಕಾಗ ಖುಷಿ ಆಗಿಲ್ಲ.. ನಿಧಿ ಕೊಡ ಸಿಕ್ತು ಅಂತ ಅರ್ಧ ರಾತ್ರ ಕೊಡೆ ಹಿಡಿಯುವ ಆಸೆ ಮಾಡ್ಲಿಲ್ಲ. ಆ ನಿಧಿಯನ್ನ ಅಲ್ಲೆ ಇದ್ದ ಮಂದಿರದೊಳಗೆ ಇಟ್ಟು ವಿಷ್ಯವನ್ನ ಇಡೀ ಊರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮನೆ ಕಟ್ಟಲು ಅಗೆಯುತ್ತಿದ್ದಾಗ ಸಿಕ್ಕೇ ಬಿಡ್ತು ನಿಧಿ.. ಪ್ರಾಮಾಣಿಕತೆ ಮೆರೆದರೂ ಕುಟುಂಬಕ್ಕೆ ಎದುರಾಯ್ತು ಗಂಡಾಂತರ..!
/filters:format(webp)/newsfirstlive-kannada/media/media_files/2026/01/12/gadaga-nidhi-3-2026-01-12-13-10-13.jpg)
ಕುಟುಂಬದ ಹಿನ್ನೆಲೆ
ಪ್ರಜ್ವಲ್ ರಿತ್ತಿ ಹಾಗೂ ತಾಯಿ ಇಬ್ಬರೇ ವಾಸವಾಗಿದ್ದಾರೆ. ತಂದೆ ಬಸವರಾಜ್ ತೀರಿಕೊಂಡಿದ್ದು ಈತ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಬಡತನದ ಹಿನ್ನೆಲೆ ತಾಯಿ ಸಾಕಿ ಸಲುಹಿತ್ತಿದ್ದಾಳೆ. ತಾಯಿ ಮಗ ಇಬ್ಬರೂ ವಿಕಲಚೇತರು. ಮನೆ ಇಲ್ಲದ ಕಾರಣ ಸಂಬಂಧಿಕರ ಮನೆಯಲ್ಲಿ ಬಾಡಿಗೆ ಇದ್ದರು. ಸಂಬಂಧಿಕರ ಮನೆಯನ್ನು ಕಲೆ ದಿನಗಳ ಹಿಂದೆ ಖರೀದಿ ಮಾಡಿದ್ದಾರೆ. ಇದೇ ಜಾಗದಲ್ಲಿ ಮನೆ ಕಟ್ಟಲು ಹೊರಟಿದ್ದರು.
ಇದನ್ನೂ ಓದಿ: ಇಸ್ರೋದ PSLV-C62 ವಿಫಲ: 16 ಸ್ಯಾಟಲೈಟ್ ಗಳನ್ನು ಬಾಹ್ಯಾಕಾಶಕ್ಕೆ ಸೇರ್ಪಡೆ ಮಾಡುವಲ್ಲಿ ಇಸ್ರೋ ವಿಫಲ
/filters:format(webp)/newsfirstlive-kannada/media/media_files/2026/01/12/gadaga-nidhi-2-2026-01-12-13-10-33.jpg)
ಗಂಗವ್ವನ ಪತಿ ಮೃತರಾಗಿದ್ರು.. ಆಕೆ ಇದ್ದ ಮಗನನ್ನ ಚೆನ್ನಾಗಿ ಓದಿಸ್ತಾ ಇದ್ರು. ಇರೋಕೆ ಮನೆ ಇರ್ಲಿಲ್ಲ, ಇರೋ ಸಣ್ಣ ಜಾಗದಲ್ಲಿ ಮನೆ ಕಟ್ಕೊಂಡಿರೋಣ ಅಂತ ಅಂದುಕೊಂಡಿದ್ರು. ಮನೆ ಕಟ್ಟೋ ಪ್ರಾಸಸ್​ಗೆ ಇಳಿದಿದ್ರು. ಆ ದಿನ ಪಾಯ ಅಗೆಯುವಾಗ ಏಕಾಏಕಿ ನಿಧಿಯ ಕೊಡ ಪ್ರತ್ಯಕ್ಷವಾಗಿದೆ. ನಿಜಕ್ಕೆ ಅವ್ರಿಗಿರೋ ಕಷ್ಟಕ್ಕೆ ಆ ಬಂಗಾರದಿಂದ ಬಂಗಾರದಂತ ಬಾಳು ಬಾಳ್ಬೋದಿತ್ತು. ಬಟ್​ ಅವ್ರು ಹಾಗೆ ಮಾಡಿಲ್ಲ. ಆ ನಿಧಿ ನಮಗೆ ಸೇರಿದ್ದಲ್ಲ ಸೇರಬೇಕಾದ ಸ್ಥಳಕ್ಕೆ ಸೇರ್ಬೇಕು ಅನ್ನೋ ಪ್ರಾಮಾಣಿಕತೆ ಅವ್ರದ್ದು. ಮತ್ತೊಂದು ಬೇಸರದ ವಿಷ್ಯ ಏನಂದ್ರೆ ಆ ತಾಯಿ ಮಗನಿಗೆ ಮಾತು ಸರಿಯಾಗಿ ಬರೋದಿಲ್ಲ.
ಇದು ಅವ್ರ ಪರಿಸ್ಥಿತಿ. ಮಾತು ಕಷ್ಟ.. ಬದುಕು ಕಷ್ಟ.. ಮನೆ ಇಲ್ಲ.. ಆಧಾರ ಇಲ್ಲ. ಇಷ್ಟು ಕಷ್ಟದ ಬದುಕಲ್ಲಿದ್ರೂ.. ಅವ್ರಿಗೆ ಸಿಕ್ಕ ನಿಧಿ ಮೇಲೆ ಆಸೆ ಇಲ್ಲ. ಹತ್ತು ಇಪ್ಪತ್ತು ರೂಪಾಯಿ ಸಿಕ್ರೇನೇ ನಮ್ದು ಅಂತ ಧಬಾಯಿಸೋ ಕಾಲ ಇದು. ಅಂತದ್ರಲ್ಲಿ ಇವ್ರ ಪ್ರಾಮಾಣಿಕತೆಗೆ, ಇಡಿ ಊರು.. ನಾಯಕರು ಅವ್ರಿಬ್ಬರನ್ನ ಹಾರೈಸಿದ್ದಾರೆ.
ಇದನ್ನೂ ಓದಿ:ಫೋನ್ ಸಂಪರ್ಕ ಇರಲಿಲ್ಲ, CCTV ಕೂಡ ಇರಲಿಲ್ಲ -ಟೆಕ್ಕಿ ಜೀವ ತೆಗೆದ ಆರೋಪಿ ಟ್ರೇಸ್ ಆಗಿದ್ದು ಹೇಗೆ..?
/filters:format(webp)/newsfirstlive-kannada/media/media_files/2026/01/12/gadaga-nidhi-1-2026-01-12-13-10-45.jpg)
ನೆಲ ಅಗೆಯುವಾಗ ಪ್ರಜ್ವಲ್​ಗೆ ಮೊದಲು ಆ ಬಿಂದಿಗೆ ಕಾಣಿಸಿದೆ. ಒಂದು ಹಿತ್ತಾಳೆ ತಂಬಿಗೆಯಲ್ಲಿ ಚಿನ್ನಾಭರಣಗಳಿದ್ವು. ಅದನ್ನ ಕಂಡು ಅವ್ರಿಗೆ ಗಾಬರಿ ಆಗಿತ್ತಂತೆ, ಕೂಡ್ಲೆ ಅವ್ರು ಗ್ರಾಮದ ಹಿರಿಯರಿಗೆ, ಪಂಚಾಯಿತಿ ಸದಸ್ಯರಿಗೆ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ವಿಷ್ಯ ತಿಳಿಸಿದ್ರಂತೆ. ಕೆಲವೇ ಕ್ಷಣಗಳಲ್ಲಿ ಈ ಸುದ್ದಿ ಇಡೀ ರಾಜ್ಯಕ್ಕೆ ಹಬ್ಬಿತ್ತು. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಲಕ್ಕುಂಡಿ ಗ್ರಾಮಕ್ಕೆ ದೌಡಾಯಿಸಿ, ವಾಸ್ತವಾಂಶ ಪರಿಶೀಲಿಸಿದ್ರು.
ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿದ್ದು ಒಂದು ಸೋಜಿಗವನ್ನ ಹುಟ್ಟಾಕಿದ್ರೆ.. ಗಂಗವ್ವ ಮತ್ತು ಪ್ರಜ್ವಲ್​​ನ ಪ್ರಾಮಾಣಿಕತೆ ಮತ್ತೊಂದು ಬಗೆಯ ಸೋಜಿಗವನ್ನ ಹುಟ್ಟಾಕಿದೆ. ಬಹುಶಃ ಕೆಲವರು ಅದೆ ನಮ್ಗೆ ಸಿಕ್ಕಿದ್ರೆ ಕಥೆನೇ ಬೇರೆ ಇತ್ತು ಅಂತ ಅಂದುಕೊಂಡಿದಿರ್ಬೋದು. ಅದೇ ಭಯಕ್ಕೆ.. ಜನ ಹೆಚ್ಚಾಗ್ತಾ ಇದ್ದಂತೆ ಆ ಕುಟುಂಬ ಆ ನಿಧಿ ಕೊಡವನ್ನ ದೇವಸ್ಥಾನದೊಳಗೆ ಇಟ್ಟು ಪೊಲೀಸರನ್ನ ಕರೆಸಿತ್ತು.
/filters:format(webp)/newsfirstlive-kannada/media/media_files/2026/01/12/gadaga-nidhi-2026-01-12-13-11-04.jpg)
ನಮ್ಮ ಭಾರತ ದೇಶದಲ್ಲಿ ನಿಧಿಗಳ ನೆಲೆ ಕಮ್ಮಿಯೇನಿಲ್ಲ. ಸದ್ಯಕ್ಕೆ ಸಿಕ್ಕ ಈ ಚಿಕ್ಕ ನಿಧಿ, ರಾಜರದ್ದಲ್ಲ.. ರಾಣಿಯರದ್ದೂ ಅಲ್ಲ ಅಂತನಿಸಿದೆ. ಇದೊಂದು ಮಾಮೂಲಿ ಜನ ಯಾವುದೋ ಸಮಯದಲ್ಲಿ ಮಡಿಕೆಯಲ್ಲಾಕಿ ಹೂತಿಟ್ಟಿರ್ಬೋದು ಅಂತ ಅಂದಾಜಿಸಿದಾರೆ. ಆದ್ರೆ ಆ ಕೊಡದಲ್ಲಿ ಸಿಕ್ಕ ಒಡವೆ ಏನೇನು? ಇದು ಯಾವ ಕಾಲದ್ದು ಅಂತ ತಿಳಿದು ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಇದೊಂದು ಶತಮಾನಗಳ ಇತಿಹಾಸಕ್ಕೆ ಕುರುಹಾಗಿ.. ಚರಿತ್ರೆಯ ಪುಟಗಳನ್ನ ತಿರುವಿ ಹಾಕುವಂತೆ ಮಾಡಿದೆ.
ಇದನ್ನೂ ಓದಿ:ಭಾರತಕ್ಕೆ EOS-N1 ಅನ್ವೇಷಾ ಶಕ್ತಿ; ನಭಕ್ಕೆ ನೆಗೆದ ಈ ಉಪಗ್ರಹದ ತಾಖತ್ತು ಎಂಥದ್ದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us