/newsfirstlive-kannada/media/media_files/2025/10/10/gba_under-2025-10-10-22-31-40.jpg)
ಬೆಂಗಳೂರಿನ ಟ್ರಾಫಿಕ್ ಜಾಮ್​​ಗೆ ಮದ್ದೆರೆಯಲು ಜಿಬಿಎ ಹೊಸ ಹೊಸ ಪ್ಲ್ಯಾನ್ ಮಾಡುತ್ತಿದೆ. ಇನ್ಮುಂದೆ ಬೆಂಗಳೂರಿನಲ್ಲಿ ಅನುಷ್ಠಾನಕ್ಕೆ ಬರುವ ಯೋಜನೆಗಳಿಗೆ ಜಿಬಿಎ ಅದೊಂದು ಕಂಡೀಷನ್ ಹಾಕಲು ಮುಂದಾಗಿದೆ.ಅಷ್ಟಕ್ಕೂ ಜಿಬಿಎ ಪ್ಲ್ಯಾನ್ ಏನು, ಕಂಡೀಷನ್ ಏನು?.
ಗ್ರೇಟರ್ ಬೆಂಗಳೂರು ಅಥಾರಿಟಿ ಇದೀಗ ಹೊಸ ಪ್ಲಾನ್‌ಗೆ ಕೈ ಹಾಕಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೊಸ ಹೊಸ ಫ್ಲೈ ಓವರ್​ಗಳು, ಅಂಡರ್ ಪಾಸ್​ಗಳ ನಿರ್ಮಾಣಕ್ಕೆ ಬ್ಲೂ ಪ್ರಿಂಟ್ ರೆಡಿ ಮಾಡಿದೆ. ನಗರದಲ್ಲಿ ಹಲವು ಹೊಸ ಫ್ಲೈಓವರ್ ಹಾಗೂ ಅಂಡರ್ ಪಾಸ್ ಯೋಜನೆಗಳನ್ನ ಜಾರಿ ತರಲು ಹೊರಟಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ನೂತನ ಫ್ಲೈಒವರ್ ಬಳಕೆ ಮಾಡುವ ವಾಹನಗಳಿಗೆ ಟೋಲ್ ಕಡ್ಡಾಯಗೊಳಿಸಲು ಸಜ್ಜಾಗಿದೆ. ಫ್ಲೈ ಓವರ್​ಗಳ ಕಿಲೋ ಮೀಟರ್ ಆಧಾರದ ಮೇಲೆ ಟೋಲ್ ದರ ನಿಗದಿ ಮಾಡಲು ಪ್ಲ್ಯಾನ್ ಮಾಡ್ಕೊಂಡಿದ್ದು, ಈ ಮೂಲಕ ಬೆಂಗಳೂರಿಗರ ಹೆಗಲಿಗೆ ಮತ್ತೊಂದು ದರದ ಮೂಟೆ ಹೊರಿಸಲು ರೆಡಿಯಾಗಿದೆ.
ಇದನ್ನೂ ಓದಿ: BIGG BOSS 12; ಈ ಸೀಸನ್​ನಲ್ಲಿ ಮೊದಲಿಗೆ ಜೈಲಿಗೆ ಹೋದ ಇಬ್ಬರು ಕಂಟೆಸ್ಟೆಂಟ್​ ಇವರೇ!
ಈ ಬಗ್ಗೆ ನ್ಯೂಸ್ ಫಸ್ಟ್ ಜೊತೆ ಮಾತ್ನಾಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷ ಎಂ ಮಹೇಶ್ವರರಾವ್, ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರದ ಅನುಮೋದನೆಗೆ ಕಾಯ್ತಿದ್ದೇವೆ ಅನ್ನೋ ಮೂಲಕ ಜನರ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್ ಅನ್ನೋದನ್ನ ಮತ್ತೊಮ್ಮೆ ಖಚಿತ ಪಡಿಸಿದ್ದಾರೆ.
ಪಾರ್ಕಿಂಗ್ ನಿಂದ ಹಿಡಿದು ಪ್ರತಿಯೊಂದರಲ್ಲೂ ಹಣದ ಲೆಕ್ಕ ಹಾಕ್ತಿರುವ ಜಿಬಿಎ ನಡೆ ಈಗಾಗಲೇ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಜಿಬಿಎ ಈ ಟೋಲ್ ಅಸ್ತ್ರ ಮುಂದೆ ಅದ್ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ