ನಾಳೆಯಿಂದ ಜನರಿಗೆ ಡಬ್ಬಲ್ ಸಂಭ್ರಮ.. ಖುಷಿಯೋ ಖುಷಿ..! ಫುಲ್ ಲಿಸ್ಟ್
ಜನ ಸಾಮಾನ್ಯರಿಗೆ ನಾಳೆಯಿಂದ ಡಬ್ಬಲ್ ಸಂಭ್ರಮ. ದಸರಾ ಜೊತೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯ ಲಾಭ ಕೂಡ ಸಿಗಲಿದೆ. ಯಾಕೆಂದರೆ ದೇಶದಲ್ಲಿ ನಾಳೆಯಿಂದ ಹೊಸ ಜಿಎಸ್ಟಿ ದರ ಜಾರಿಗೆ ಬರ್ತಿದೆ. ಯಾವೆಲ್ಲ ವಸ್ತುಗಳ ಬೆಲೆ ಕಮ್ಮಿ ಆಗಲಿದೆ ಅನ್ನೋದ್ರ ವಿವರ ಇಲ್ಲಿದೆ.
ಬೆಂಗಳೂರು: ಜನ ಸಾಮಾನ್ಯರಿಗೆ ನಾಳೆಯಿಂದ ಡಬ್ಬಲ್ ಸಂಭ್ರಮ. ದಸರಾ ಜೊತೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯ ಲಾಭ ಕೂಡ ಸಿಗಲಿದೆ. ಯಾಕೆಂದರೆ ದೇಶದಲ್ಲಿ ನಾಳೆಯಿಂದ ಹೊಸ ಜಿಎಸ್​ಟಿ ದರ ಜಾರಿಗೆ ಬರ್ತಿದೆ.
Advertisment
ಆ ಮೂಲಕ ಹಬ್ಬದ ಸಂಭ್ರಮದ ನಡುವೆ ದೇಶವಾಸಿಗಳಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ ಸಿಗಲಿದೆ. ದರ ಏರಿಕೆಯಿಂದ ಕಂಗೆಟ್ಟಿದ್ದ ದೇಶವಾಸಿಗಳ ಜೇಬಿನ ಭಾರ ಕೊಂಚ ಇಳಿಕೆ ಆಗಲಿದೆ. ಶಾಂಪೂ, ಪೇಸ್ಟ್​ನಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್​​ವರೆಗೂ ಜಿಎಸ್ಟಿ ಸ್ಲ್ಯಾಬ್ ಪರಿಷ್ಕರಣೆ ಆಗಲಿದೆ.