/newsfirstlive-kannada/media/media_files/2025/10/11/hsn_hasanambe-2025-10-11-11-20-19.jpg)
ಹಾಸನ: ಪ್ರಸಿದ್ಧ ಹಾಸನಾಂಬೆ ದರ್ಶನ ಶುಕ್ರವಾರದಿಂದ ಆರಂಭವಾಗಿದ್ದು ಸಾಕಷ್ಟು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆಯ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಶಾಸ್ತ್ರೋಕ್ತವಾಗಿ ವಿಧಿವಿಧಾನಗಳೊಂದಿಗೆ ಗುರುವಾರ ತೆರೆಯಲಾಗಿದೆ. ಎರಡನೇ ದಿನವೇ ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/11/hsn_hasanambe_2-2025-10-11-11-23-21.jpg)
ವೀಕೆಂಡ್ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡು ಹಾಸನಾಂಬೆ ದರ್ಶನಕ್ಕೆ ಹರಿದು ಬಂದಿದೆ. ಇಂದು ಹಾಸನಾಂಬೆ ದರ್ಶನದ ಎರಡನೇ ದಿನ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ದಿನ ಮಧ್ಯಾಹ್ನ ಹಾಗೂ ರಾತ್ರಿ ನೈವೇದ್ಯದ ಕೆಲ ಗಂಟೆ ಹೊರತು ಪಡಿಸಿ ಉಳಿದ ಅವಧಿಯಲ್ಲಿ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿರುತ್ತದೆ.
ನಿನ್ನೆ ಒಂದೇ ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ 70 ಸಾವಿರಕ್ಕೂ ಅಧಿಕ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಇವತ್ತಿನಿಂದ ಅಕ್ಟೋಬರ್ 22ರ ವರೆಗೆ ದೇವಿಯನ್ನು ಎಲ್ಲರೂ ಕಣ್ತುಂಬಿಕೊಳ್ಳಬಹುದು. ಅ.22ರವರೆಗೆ ನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ನೈವೇದ್ಯದ ಸಮಯ ಹೊರತು ಪಡಿಸಿ, ಉಳಿದೆಲ್ಲಾ ಅವಧಿಯಲ್ಲಿ ದರ್ಶನ ನಿರಂತರವಾಗಿರುತ್ತದೆ.
ಈ ಹಿಂದೆ ಇದ್ದಂತಹ ವಿಐಪಿ, ವಿವಿಐಪಿ ಪಾಸ್​ಗಳನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಸಾಮಾನ್ಯ ಭಕ್ತರು ದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೂರದ ಊರುಗಳಿಂದ ಬರುವವರು ಅರಾಮಾದಾಯಕವಾಗಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬಹುದು. ಆದರೆ ಗೋಲ್ಡ್ ಕಾರ್ಡ್ ಹಾಗೂ ಗಣ್ಯರ ಖೋಟಾದಡಿ ಬರುವರಿಗಾಗಿ ಸಮಯ ನಿಗದಿ ಆಗಿರುತ್ತದೆ.
/filters:format(webp)/newsfirstlive-kannada/media/media_files/2025/10/11/hsn_hasanambe_1-2025-10-11-11-23-30.jpg)
ಯಾರು ಯಾರು ಗೋಲ್ಡ್ ಕಾರ್ಡ್ ಪಡೆದಿರುತ್ತಾರೋ ಅಂತಹವರು ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ದರ್ಶನದ ಅವಕಾಶ ಇರುತ್ತದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12-30ರ ವರೆಗೆ ಶಿಷ್ಟಾಚಾರದ ಗಣ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಉಳಿದ ಸಂಪೂರ್ಣ ಅವಧಿಯಲ್ಲಿ ಸಾಮಾನ್ಯ ಭಕ್ತರ ದರ್ಶನ ಪಡೆಯಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us