Advertisment

ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ವಿಕೃತಿ.. ಪ್ರಸಿದ್ಧ ಬೇಲೂರಿನಲ್ಲಿ ನೀಚತನ

ಐತಿಹಾಸಿಕ ಬೇಲೂರಿನಲ್ಲಿ ವಿಕೃತ ಕುಕೃತ್ಯವೊಂದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ನೀಚತನ ಮೆರೆದಿದ್ದಾರೆ. ಪಟ್ಟಣದ ಹೃದಯಭಾಗದಲ್ಲಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.

author-image
Ganesh Kerekuli
hassana Ganesha
Advertisment

ಹಾಸನ: ಐತಿಹಾಸಿಕ ಬೇಲೂರಿನಲ್ಲಿ ವಿಕೃತ ಕುಕೃತ್ಯವೊಂದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ನೀಚತನ ಮೆರೆದಿದ್ದಾರೆ. 

Advertisment

ಪಟ್ಟಣದ ಹೃದಯಭಾಗದಲ್ಲಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಬೇಲೂರಿನ ಪುರಸಭೆ ಆವರಣದಲ್ಲಿರುವ ಶ್ರೀ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಘಟನೆ ನಡೆದಿದೆ. ವಿಘ್ನ ನಿವಾರಕನಿಗೆ ಎರಡು ಚಪ್ಪಲಿಗಳಿಗೆ ದಾರಕಟ್ಟಿ ಹಾರದಂತೆ ಹಾಕಿದ್ದಾರೆ. 

ಇಂದು ಮುಂಜಾನೆ ಭಕ್ತರು ದೇವರ ದರ್ಶನಕ್ಕೆ ಹೋಗಿದ್ದಾರೆ. ಈ ವೇಳೆ ಗಣೇಶನ ಮೂರ್ತಿ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಅಪಮಾನಿಸಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಿಡಿಗೇಡಿಗಳ ಬಂಧನಕ್ಕೆ ‌ಸ್ಥಳೀಯರು ಆಗ್ರಹಿಸಿದ್ದಾರೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೆ ಸ್ಟಾರ್​ ವೇಗಿ ಕಂಬ್ಯಾಕ್.. ಇವತ್ತು ತಂಡದಲ್ಲಿ ಎರಡು ಬದಲಾವಣೆ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News
Advertisment
Advertisment
Advertisment