/newsfirstlive-kannada/media/media_files/2025/09/30/hassan-blast-2025-09-30-10-08-13.jpg)
ಅದು ಎಲ್ಲರು ಮಲಗೋ ಟೈಂ ಆಗಿತ್ತು.. ಕೆಲವ್ರು ಟಿವಿ ನೋಡ್ತಾ ಇದ್ರು.. ಕೆಲವರು ಮೊಬೈಲ್​ ನೋಡೋದ್ರಲ್ಲಿ ಬ್ಯುಸಿ ಇದ್ರು.. ಆಗ ಅದೊಂದು ಸ್ಫೋಟದ ಶಬ್ದ ಹಾಸನದ ಆಲೂರು ಜನರ ಒಂದೆಡೆಗೆ ಓಡಿ ಬರುವಂತೆ ಮಾಡಿತ್ತು. ನಂತರ ನೋಡಿದರೆ ದೊಡ್ಡ ಅನಾಹುತವೇ ಆಗಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳೇ ಆಲೂರು ಗ್ರಾಮದ ಮನೆಯೊಂದರಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿದೆ. ಸ್ಫೋಟದ ರಭಸಕ್ಕೆ ಮನೆ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿವೆ, ಮನೆಯ ಗೋಡೆ ಕೂಡ ಬಿದ್ದು ಹೋಗಿದೆ.
ಮಾವನ ಮನೆಗೆ ಬಂದಿದ್ದ ಬಾಲಕನಿಗೆ ಪೆಟ್ಟು
ಈ ಭಯಾನಕ ಸ್ಫೋಟದಲ್ಲಿ ಪತಿ ಸುದರ್ಶನ್ ಆಚಾರ್. ಪತ್ನಿ ಕಾವ್ಯಗೂ ಗಂಭೀರ ಗಾಯಗಳಾಗಿವೆ. ಸುದರ್ಶನ್​ ಆಚಾರ್​ ಅವರ ಎರಡು ಕಾಲುಗಳಿಗೂ ಭಾರೀ ಪೆಟ್ಟು ಬಿದ್ದಿದೆ. ದಂಪತಿಯನ್ನೂ ಹಾಸನ ಜಿಲ್ಲಾಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಮತ್ತೆ ಮನೆ ಯಲ್ಲಿದ್ದ 11 ತಿಂಗಳು ಹೆಣ್ಣು ಮಗುಗೆ, ರಜಾ ಕಾರಣ ಮಾವನ ಮನೆಗೆ ಬಂದಿದ್ದ ಸುದರ್ಶನ್ ಅಕ್ಕನ ಮಗ ಗೌತಮ್​ಗೆ ಸಣ್ಣ ಪುಟ್ಟ ಗಾಯಗಳಾಗಿ ಯಾವುದೇ ತೊಂದರೆಗಳಾಗಿಲ್ಲ.
ಒಟ್ಟಾರೆ, ಪತಿ.. ಪತ್ನಿ ಇಬ್ಬರೂ ಸಾವು ಬದುಕಿನ ಮಧ್ಯೆ ಹೋರಾಟದಲ್ಲಿದ್ದಾರೆ. ಸ್ಫೋಟಗೊಂಡ ಮನೆಗೆ ಭೇಟಿ ನೀಡಿದ ಜನರಲ್ಲಿ ಕೆಲವ್ರು ಸಿಲಿಂಡರ್​ ಅಂತಿದ್ರೆ.. ಇನ್ನೂ ಕೆಲವ್ರು ಗೀಸರ್ ಅಂತಿದ್ರು.. ಆದ್ರೆ ಈ ನಿಗೂಡ ಸ್ಫೋಟದ ಸತ್ಯ ಆಲೂರು ಪೊಲೀಸರ ತನಿಖೆ ಬಳಿಕವಷ್ಟೇ ಹೊರ ಬರಬೇಕಿದೆ.
ಇದನ್ನೂ ಓದಿ:ಬಯಕೆ ತೋಟಕ್ಕೆ ಬೇಲಿ ಏಕೆ ಎಂದು 30 ಲಕ್ಷ ಮಂದಿ.. ಗ್ಲೀಡೆನ್ ಬಳಕೆಯಲ್ಲಿ ಬೆಂಗಳೂರು ಟಾಪ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ