/newsfirstlive-kannada/media/media_files/2026/01/04/yash-mother-2026-01-04-11-23-25.jpg)
ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ವಿರುದ್ಧ ಅಕ್ರಮ ಒತ್ತುವರಿ ಆರೋಪ ಕೇಳಿಬಂದಿದೆ. ಬೆನ್ನಲ್ಲೇ, ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದ್ದು ಜೆಸಿಬಿಗಳ ಘರ್ಜನೆ ಜೋರಾಗಿ ನಡೆದಿದೆ.
ಏನಿದು ಆರೋಪ..?
ವಿದ್ಯಾನಗರದ ಸತ್ಯಮಂಗಲ ಬಡಾವಣೆಯಲ್ಲಿ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ಮನೆ ಇದೆ. ಹಲವು ವರ್ಷಗಳ ಹಿಂದೆ ಈ ಮನೆಯನ್ನ ಖರೀದಿಸಲಾಗಿದೆ. ಆಗಾಗ ಯಶ್ ಮತ್ತು ಅವರ ತಾಯಿ ಪುಷ್ಪಾ ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಇತ್ತೀಚೆಗೆ 50*100 ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಇದೆ. ಒತ್ತುವರಿ ಜಾಗದಲ್ಲಿ ಕಾಂಪೌಂಡ್ ಜೊತೆ ಶೌಚಾಲಯ ಸೇರಿದಂತೆ ಸಣ್ಣಪುಟ್ಟ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣ ಏನು?
ಇದು ತುಂಬಾನೇ ದುಬಾರಿ ಬೆಲೆಯ ಜಾಗವಾಗಿದೆ. ಆರೋಪದ ಪ್ರಕಾರ, ಒತ್ತುವರಿ ಮಾಡಿದ್ದಾರೆ ಎನ್ನಲಾಗುತ್ತಿರುವ ಜಾಗದ ಮೂಲ ಮಾಲೀಕರು ಮೈಸೂರು ಮೂಲದ ಲಕ್ಷ್ಮಮ್ಮ ಹಾಗೂ ಜಿಪಿಎ ಹೋಲ್ಡರ್ ದೇವರಾಜು ಅನ್ನೋರು. ಒತ್ತುವರಿ ಸಂಬಂಧ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಕೋರ್ಟ್​ ಮೆಟ್ಟಿಲೇರಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ನೀಡಿದ್ದರೂ ಯಶ್ ಅವರ ತಾಯಿ ಹಾಜರಾಗಿಲ್ಲ ಎಂಬ ಆರೋಪವನ್ನು ದೇವರಾಜು ಮಾಡಿದ್ದಾರೆ.
ದೇವರಾಜು ಹೇಳೋದೇನು..?
ಇದರ ಮೂಲ ಮಾಲೀಕರು ಲಕ್ಷ್ಮಮ್ಮ ಎಂದು. ಅವರಿಗೆ ವಯಸ್ಸಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರಿಗೆ ಈಗ ಸುಮಾರು 94 ವರ್ಷ. ಇಲ್ಲಿನ ಜಾಗವನ್ನು ನೋಡಿಕೊಳ್ಳುವ ಉದ್ದೇಶದಿಂದ 2020ರಲ್ಲಿ ನನಗೆ ಜಿಪಿಎ ಹೋಲ್ಡರ್​​ಗಾಗಿ ಮೈಸೂರಿನ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಮಾಡಿಸಿಕೊಟ್ಟರು. ಅವರ ಪ್ರಾಪರ್ಟಿಯನ್ನು ನಾನು ನೋಡಿಕೊಳ್ಳುತ್ತಿದ್ದೆ.
ಈ ನಡುವೆ ಅವರು ಕಂಪೌಂಡ್ ಹಾಕಲು ಶುರುಮಾಡಿದ್ದರು. ಅದು ನನಗೆ ಗೊತ್ತಾಗಿದೆ. ನಾನು ಅಲ್ಲಿಗೆ ಹೋಗಿ ಕಾರ್ಮಿಕರನ್ನು ಪ್ರಶ್ನೆ ಮಾಡಿದೆ. ಅದಕ್ಕೆ ಅವರು, ಇಲ್ಲ ಓನರ್ ಹೇಳಿದ್ದಾರೆ ಎಂದರು. ಅವರ ಓನರ್​ಗೆ ಬರುವಂತೆ ಕೇಳಿಕೊಂಡೆ. ಆಗ ಯಶ್ ತಂದೆ ಬಂದರು. ಯಾಕೆ ಸರ್, ನನ್ನ ಜಾಗದಲ್ಲಿ ಕಾಂಪೌಂಡ್ ಹಾಕುತ್ತಿದ್ದೀರಾ ಎಂದು ಕೇಳಿದೆ. ಅದಕ್ಕೆ ನಿಮ್ಮ ಜಾಗ ಅನ್ನೋದಕ್ಕೆ ಏನು ಪುರಾವೆ ಇದೆ ಎಂದು ಕೇಳಿದರು. ಆಗ ನಾನು, ಪೊಲೀಸರಿಗೆ ದೂರು ನೀಡಿದೆ. ಯಾವುದೇ ಪ್ರಯೋಜನ ಆಗಲಿಲ್ಲ. ಕೆಲವು ಅಧಿಕಾರಿಗಳ ಸೂಚನೆ ಮೇರೆಗೆ ಕೋರ್ಟ್​ ಮೆಟ್ಟಿಲೇರಿದ್ದೆ ಎಂದಿದ್ದಾರೆ.
ಇದನ್ನೂ ಓದಿ: ಯಲ್ಲಾಪುರ ರಂಜಿತಾ ಹತ್ಯೆ ಕೇಸ್‌ಗೆ ಟ್ವಿಸ್ಟ್; ಆರೋಪಿ ರಫಿಕ್ ಆತ್ಮಹತ್ಯೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us