/newsfirstlive-kannada/media/media_files/2026/01/04/yallapura-ranjita-2026-01-04-09-37-57.jpg)
ಶಿರಸಿ: ರಂಜಿತಾ ಹತ್ಯೆ ಖಂಡಿಸಿ ಇಂದು ಯಲ್ಲಾಪುರ ಬಂದ್‌ಗೆ ಕರೆ ನೀಡಲಾಗಿದೆ. ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದ ಆರೋಪಿ ಯಲ್ಲಾಪುರದ ರಾಮಾಪುರ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಳಮ್ಮನಗರದ ಆರೋಪಿ ಮಹಮ್ಮದ್ ರಫೀಕ್ ಇಮಾಮ್‌ಸಾಬ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಮಾಪುರ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರಫಿಕ್‌ನ ಮೃತದೇಹ ಪತ್ತೆಯಾಗಿದೆ. ನಿನ್ನೆ ಆಶ್ರಯ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಎಂಬ ಮಹಿಳೆಯ ಕೊಲೆಯಾಗಿತ್ತು. ಆರೋಪಿ ಮಹಮ್ಮದ್ ರಫೀಕ್ ಇಮಾಮ್‌ಸಾಬ್ ಕೊಲೆ ಮಾಡಿ ಪರಾರಿಯಾದ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ರಂಜಿತಾ ಹತ್ಯೆ ಖಂಡಿಸಿ ಇಂದು ಯಲ್ಲಾಪುರ ಬಂದ್..!
/filters:format(webp)/newsfirstlive-kannada/media/media_files/2026/01/04/ranjita-yallapura-2026-01-04-08-19-50.jpg)
ರಾಮಾಪುರ ಶಾಲೆಯಲ್ಲಿ ಅಡಿಗೆ ಸಹಾಯಕಿಯಾಗಿ ರಂಜಿತಾ ಕೆಲಸ ಮಾಡುತ್ತಿದ್ದರು. ಈಗಾಗಲೇ ಗಂಡನಿಂದ ವಿಚ್ಛೇದನ ಪಡೆದು ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಆರೋಪಿ ಮಹಮ್ಮದ್ ರಫೀಕ್ ರಂಜಿತಾಳನ್ನು ಮದುವೆಯಾಗಲು ಒತ್ತಾಯಿಸಿ ಟಾರ್ಚರ್ ನೀಡುತ್ತಿದ್ದ. ರಂಜಿತಾ ನಿರಾಕರಿಸಿದ ಹಿನ್ನೆಲೆ ನಿನ್ನೆ ಮಧ್ಯಾಹ್ನ ಶಾಲೆಯಿಂದ ಹಿಂತಿರುಗುತ್ತಿದ್ದಾಗ ದಾರಿಯಲ್ಲಿ ಅಡ್ಡಗಟ್ಟಿದ್ದ. ರಂಜಿತಾಳ ಕುತ್ತಿಗೆಗೆ ಚಾಕು ಇರಿದು ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಆಕೆಯ ಕುತ್ತಿಗೆಯ ಮೂರು ನರಗಳು ತುಂಡಾಗಿದ್ದು, ಹುಬ್ಬಳ್ಳಿ ಕಿಮ್ಸ್‌ಗೆ ಒಯ್ಯುವಾಗ ಮಾರ್ಗಮಧ್ಯೆ ಸಾವಾಗಿತ್ತು. ಪ್ರಕರಣ ಸಂಬಂಧ ಮೃತಳ ಸಹೋದರಿಯಿಂದ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಯಲ್ಲಾಪುರ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಪ್ರಕರಣ ಬೆನ್ನಲ್ಲೇ ಯಲ್ಲಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಇಂದು ಯಲ್ಲಾಪುರ ಬಂದ್‌ಗೆ ಕರೆ ನೀಡಲಾಗಿತ್ತು. ಆದ್ರೆ ಇಂದು ಆರೋಪಿ ರಫೀಕ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಗಿಲ್ಲಿ ವೈರಲ್ ಹಾಡನ್ನು ಕ್ಯೂಟ್ ಆಗಿ ಹಾಡಿದ ಪುಟಾಣಿ - VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us