/newsfirstlive-kannada/media/media_files/2026/01/04/ranjita-yallapura-2026-01-04-08-19-50.jpg)
ರಂಜಿತಾ, ಆರೋಪಿ ರಫಿಕ್
ಶಿರಸಿ: ರಂಜಿತಾ ಹತ್ಯೆ ಖಂಡಿಸಿ ಇಂದು ಯಲ್ಲಾಪುರ ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಹಿಂದೂಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ 5 ಕೆ.ಎಸ್.ಆರ್.ಪಿ, ಆರು ಡಿ.ಆರ್ ತುಕಡಿ, ಹೆಚ್ಚುವರಿ ಹೊರಜಿಲ್ಲಾ ಪೊಲೀಸರ ನಿಯೋಜನೆ ಮಾಡಲಾಗಿದೆ. ಇಬ್ಬರು ಡಿ.ವೈ.ಎಸ್.ಪಿ, ಮೂರು ಸಿಪಿಐ ನೇತ್ರತ್ವದಲ್ಲಿ ರಫಿಕ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇನ್ನು ಯಲ್ಲಾಪುರ ನಗರದ ರಫಿಕ್ ಹಾಗೂ ರಂಜಿತಾ ನಿವಾಸದ ಕಾಳಮ್ಮ ನಗರದಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಸ್.ಪಿ ದೀಪನ್ ಹಾಗೂ ಎ.ಎಸ್.ಪಿ ಜಗದೀಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಏನು ಪ್ರಕರಣ..?
ಕಳೆದ ಶನಿವಾರ ಮಧ್ಯಾಹ್ನ ರಫೀಕ್, ದಲಿತ ಮಹಿಳೆ ರಂಜಿತಾ ಹತ್ಯೆ ಮಾಡಿದ್ದಾನೆ. ರಫಿಕ್ ತನ್ನನ್ನು ಮದುವೆ ಆಗುವಂತೆ ರಂಜಿತಾಗೆ ಪೀಡಿಸುತ್ತಿದ್ದ. ಇದಕ್ಕೆ ರಂಜಿತಾ ಒಪ್ಪಿರಲಿಲ್ಲ. ಅಂತೆಯೇ ಶನಿವಾರ ಕೂಡ ಕಿರಿಕ್ ಮಾಡಿ ಚಾಕುವಿನಿಂದ ಕುತ್ತಿಗೆ ಸೀಳಿ ಪರಾರಿಯಾಗಿದ್ದ. ಈ ಪ್ರಕರಣವನ್ನು ಹಿಂದೂಪರ ಸಂಘಟನೆಗಳು ಖಂಡಿಸಿವೆ. ಅಲ್ಲದೇ ಇಂದು ಯಲ್ಲಾಪುರ ಬಂದ್‌ಗೆ ಕರೆ ನೀಡಿವೆ. ಬೆಳಗ್ಗೆ ಯಲ್ಲಾಪುರ ಬಸವೇಶ್ವರ ವೃತ್ತದಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡಲಿದ್ದಾರೆ.
ಇದನ್ನೂ ಓದಿ: ಗಿಲ್ಲಿ ವೈರಲ್ ಹಾಡನ್ನು ಕ್ಯೂಟ್ ಆಗಿ ಹಾಡಿದ ಪುಟಾಣಿ - VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us