/newsfirstlive-kannada/media/media_files/2025/10/18/hsn_hasanambe-1-2025-10-18-07-04-18.jpg)
ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವಕ್ಕೆ ಅಂತಿಮ ಘಟ್ಟ ತಲುಪಿದೆ. ದೀಪಾವಳಿ ಹಬ್ಬ.. ಮನೆಯಲ್ಲಿ ಪೂಜೆ ಇದ್ದರೂ.. ದೇವಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ಈ 10 ದಿನದ ದರ್ಶನೋತ್ಸವದಲ್ಲಿ ಬಂದ ಜನ ಎಷ್ಟು.. ಆದಾಯ ಎಷ್ಟು ಅನ್ನೋ ಡೀಟೇಲ್ಸ್​ ಇಲ್ಲಿದೆ.
ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ. ಅಕ್ಟೋಬರ್​ 10 ರಿಂದ ಮೊನ್ನೆಯವರೆಗೆ ಲಕ್ಷ ಲಕ್ಷ ಭಕ್ತರು ಭೇಟಿ ನೀಡಿದ್ದು, ಈ ಮೂಲಕ ಹೊಸ ದಾಖಲೆ ಬರೆದಿದೆ.
11 ದಿನದಲ್ಲಿ 23 ಲಕ್ಷ ಜನರಿಂದ ಹಾಸನಾಂಬೆ ದರ್ಶನ!
ಅಕ್ಟೋಬರ್​ 10 ರಿಂದ ಹಾಸನಾಂಬೆ ದೇವಿ ದರ್ಶನ ಪ್ರಾರಂಭವಾದಾಗಿನಿಂದ ಅಕ್ಟೋಬರ್ 20ರವರೆಗೆ ಅಂದ್ರೆ ನಿನ್ನೆಯವೆರೆಗೂ ಒಟ್ಟು 23 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದುಕೊಂಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಅನ್ನೋ ದಾಖಲೆ ಸೃಷ್ಟಿಯಾಗಿದೆ.
ಇದನ್ನೂ ಓದಿ:‘ತರಕಾರಿ ಹಳಸಿ ವಾಸನೆ ಬರ್ತಿದೆ ಅಂದ್ಮೇಲೆ..’ ನೆಕ್ಸ್ಟ್​ ಎಲಿಮಿನೇಟ್ ಆಗೋರ ಹೆಸರು ಹೇಳಿದ ಮಂಜು
ಈವರೆಗೂ ಹಾಸನಾಂಬೆ ದೇವಸ್ಥಾನಕ್ಕೆ 1,000. 300 ರೂಪಾಯಿ ಟಿಕೆಟ್ ಸಾಲಿನಲ್ಲಿ 3,40,260 ಜನರಿಂದ ದರ್ಶನ ಪಡೆದಿದ್ದಾರೆ. ಟಿಕೆಟ್ ಹಾಗೂ ಲಾಡು ಪ್ರಸಾದದಿಂದ ದೇಗುಲಕ್ಕೆ ಒಟ್ಟು 22 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
ಹಾಸನಾಂಬೆ ದರ್ಶನಕ್ಕೆ ಇವತ್ತು ಕೊನೆಯ ದಿನವಾಗಿದೆ. ರಾತ್ರಿ 8 ಗಂಟೆಗೆ ದೇವಸ್ಥಾನದ ಬಾಗಿಲು ಬಂದ್ ಆಗಲಿದೆ. ಕೊನೆಯ ದಿನ ದೇವಿ ಕಣ್ತುಂಬಿಕೊಳ್ತಿರೋ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರಲಿದ್ದಾರೆ ಅಂತ ಅಂದಾಜಿಸಲಾಗಿದೆ. ದೇವಿಯ ದರ್ಶನಕ್ಕೆ ಇವತ್ತು ಕೊನೆಯ ದಿನ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ. ಇಂದು, ನಾಳೆ ಮಾತ್ರ ಸಾರ್ವಜನಿಕರಿಂದ ದೇವಿ ದರ್ಶನಕ್ಕೆ ಅವಕಾಶ ಇದ್ದು, ಸಂಜೆ 7ಕ್ಕೆ ಸಾರ್ವಜನಿಕ ದರ್ಶನಕ್ಕೆ ಅದ್ಧೂರಿ ತೆರೆ ಬೀಳಲಿದೆ. ನಾಳೆ, ದೇವಸ್ಥಾನದ ಬಾಗಿಲು ಮುಚ್ಚಲಿದ್ದು, ಬರೋ ವರ್ಷ ಮತ್ತೆ ದೇವಿ ದರ್ಶನ ನೀಡಲಿದ್ದಾಳೆ.
ಇದನ್ನೂ ಓದಿ:‘ತರಕಾರಿ ಹಳಸಿ ವಾಸನೆ ಬರ್ತಿದೆ ಅಂದ್ಮೇಲೆ..’ ನೆಕ್ಸ್ಟ್​ ಎಲಿಮಿನೇಟ್ ಆಗೋರ ಹೆಸರು ಹೇಳಿದ ಮಂಜು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ