/newsfirstlive-kannada/media/media_files/2025/09/14/hd-devegowd-visit-hassan-2025-09-14-12-42-41.jpg)
ಸಂತ್ರಸ್ತ ಕುಟುಂಬಸ್ಥರ ಭೇಟಿಯಾದ ಮಾಜಿ ಪ್ರಧಾನಿ
ಹಾಸನ : ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗಣಪತಿ ಮೆರವಣಿಗೆ ವೇಳೆ ಜನರ ಮೇಲೆ ಟ್ರಕ್ ನುಗ್ಗಿ 10 ದುರಂತ ಸಾ*ನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರು ಮೃತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಹಾಸನ ತಾಲೂಕಿನ ಡನಾಯಕನಹಳ್ಳಿ ಮೃತ ಯುವಕ ಈಶ್ವರ್ ಹಾಗೂ ಮುತ್ತಿಗೆ ಹಿರೆಹಳ್ಳಿ ಗೋಕುಲ್ ಪೋಷಕರನ್ನ ಇಳಿ ವಯಸ್ಸಿನಲ್ಲೂ ಹೆಚ್.ಡಿ.ಡಿ ಭೇಟಿ ಮಾಡಿದ್ದಾರೆ.
ಅಳಲು ತೋಡಿಕೊಂಡ ಪೋಷಕರು..
ಈ ವೇಳೆ ನನ್ನ ಮಗನನ್ನ ಕೂಲಿ ಮಾಡಿ ಓದಿಸುತ್ತಿದೆ. ಮೃತ ಈಶ್ವರ್ ಹಾಗೂ ನನ್ನ ಮಗ ಗೋಕುಲ್ ಇಬ್ಬರು ಜೊತೆಜೊತೆಗೆ ಇದ್ರು. ಈಗ ಸಾವಿನಲ್ಲೂ ಒಂದಾಗಿದ್ದಾರೆ. ಮಗನ ಕಳೆದುಕೊಂಡ ನನಗೆ ಇನ್ಯಾರು ಗತಿ? ನನ್ನ ಕೂಲಿ ಕೆಲಸಕ್ಕೆ ಬೈಕ್ನಲ್ಲಿ ಕೂರಿಸಿಕೊಂಡು ಹೋಗಿ, ಕರೆದುಕೊಂಡು ಬರ್ತಿದ್ದ ಅಂತಾ ಗೋಕುಲ್ ತಾಯಿ ಗಾಯತ್ರಿ, ದೇವೇಗೌಡರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಗೋಕುಲ್ ತಾಯಿಗೆ ಸಾಂತ್ವನ ಹೇಳಿದ ದೇವೇಗೌಡರು, ಗೋಕುಲ್ ತಂಗಿ ಓದಿಸುವ ಸಂಪೂರ್ಣ ಜವಾಬ್ದಾರಿ ನಮಗೆ ಬಿಡಿ, ಅವಳು ಎಷ್ಟು ಓದುತ್ತಾಳೋ ಅದರ ಆರ್ಥಿಕ ಜವಾಬ್ದಾರಿ ನಮ್ಮದು ಎಂದು ಅಭಯ ನೀಡಿದ್ದಾರೆ. ಕೇವಲ 10 ಗುಂಟೆ ಜಮೀನಲ್ಲಿ ಏನು ಮಾಡೋಕೆ ಆಗುತ್ತೆ, ಪರಿಹಾರ ಹಣ ಡೆಪಾಸಿಟ್ ಇಟ್ಟುಕೊಳ್ಳಿ ಅಂತಾ ಧೈರ್ಯ ನೀಡಿದ್ದಾರೆ.
ಇದೇ ವೇಳೆ ಮಾತನಾಡಿರುವ ಅವರು.. ಪಕ್ಷದ ವತಿಯಿಂದ ಮೃತರ ಕುಟುಂಬಸ್ಥರಿಗೆ 1 ಲಕ್ಷ ಪರಿಹಾರ ನೀಡ್ತೀನಿ. ದೊಡ್ಡ ಗಾಯಾಳುಗಳಿಗೆ 25 ಸಾವಿರ, ಮಧ್ಯಮ ಗಾಯಾಳುಗಳಿಗೆ 20 ಸಾವಿರ ಹಾಗೂ ಸಣ್ಣಪುಟ್ಟು ಗಾಯಾಳುಗಳಿದೆ 15 ಸಾವಿರ ಕೊಡೋದಾಗಿ ತಿಳಿಸಿದರು. ಅಲ್ಲದೇ ಸಿಎಂಗೆ ಪರಿಹಾರ ಮೊತ್ತ ಹೆಚ್ಚು ಮಾಡಲು ಕೋರುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಹೆಣ್ಮಕ್ಕಳೇ ಲಿಫ್ಟ್ ಬಳಸುವಾಗ ಹುಷಾರ್, ದಾರುಣ ಅಂತ್ಯಕಂಡ ಮಹಿಳೆ.. ಏನಾಯ್ತು..?