ಪತ್ನಿಯನ್ನ ಕೂಡಿಹಾಕಿ ಪತಿ ಪರಾರಿ ಆರೋಪಕ್ಕೆ ಟ್ವಿಸ್ಟ್​.. ಆರೋಪಿ ಗಂಡ ಹೇಳಿದ್ದೇ ಬೇರೆ..!

ಹತ್ತು ವರ್ಷಗಳ ದಾಂಪತ್ಯದ ಬಳಿಕ ದಂಪತಿ ಜಗಳ ಈಗ ಬೀದಿಗೆ ಬಂದಿದೆ. ಪತ್ನಿ ಮತ್ತು ಪುಟ್ಟ ಮಗುವನ್ನು ಮನೆಯೊಳಗೆ ಕೂಡಿಹಾಕಿ ಪತಿ ಪರಾರಿಯಾಗಿದ್ದಾನೆ ಎಂಬ ಗಂಭೀರ ಆರೋಪವೊಂದು ಹಾಸನದ ಕೆ.ಆರ್. ಪುರಂ ಬಡಾವಣೆಯಲ್ಲಿ ಕೇಳಿಬಂದಿತ್ತು.

author-image
Ganesh Kerekuli
hassana wife and husband (1)
Advertisment

ಹಾಸನ: ಹತ್ತು ವರ್ಷಗಳ ದಾಂಪತ್ಯದ ಬಳಿಕ ದಂಪತಿ ಜಗಳ ಈಗ ಬೀದಿಗೆ ಬಂದಿದೆ. ಪತ್ನಿ ಮತ್ತು ಪುಟ್ಟ ಮಗುವನ್ನು ಮನೆಯೊಳಗೆ ಕೂಡಿಹಾಕಿ ಪತಿ ಪರಾರಿಯಾಗಿದ್ದಾನೆ ಎಂಬ ಗಂಭೀರ ಆರೋಪವೊಂದು ಹಾಸನದ ಕೆ.ಆರ್. ಪುರಂ ಬಡಾವಣೆಯಲ್ಲಿ ಕೇಳಿಬಂದಿತ್ತು. ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿ ಉಮೇರ್ ಪತ್ನಿಯ ವಿರುದ್ಧವೇ ತಿರುಗಿಬಿದ್ದಿದ್ದಾನೆ.

ಪತ್ನಿ ನಿಧಾ ನಾಝ್ ಆರೋಪವೇನು?

ನಿಧಾ ನಾಝ್ ಮತ್ತು ಮೊಹಮ್ಮದ್ ಉಮೇರ್ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ನಿಧಾ ಪ್ರಕಾರ, ತನ್ನ ಪತಿ ಉಮೇರ್ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆ ಕಾರಣಕ್ಕಾಗಿ ತಮಗೆ ಕಿರುಕುಳ ನೀಡುತ್ತಿದ್ದಾರೆ. ‘ಮೂರು ದಿನಗಳಿಂದ ನನ್ನನ್ನು ಮತ್ತು ಪುಟ್ಟ ಮಗುವನ್ನು ಮನೆಯೊಳಗೆ ಕೂಡಿಹಾಕಿ ಗಂಡ ಪರಾರಿಯಾಗಿದ್ದಾರೆ. ಹತ್ತು ವರ್ಷಗಳ ಸಂಸಾರ ಈಗ ಬೀದಿಗೆ ಬಂದಿದೆ. ಆದರೆ ನನಗೆ ನನ್ನ ಗಂಡ ಬೇಕು, ಅವರ ಜೊತೆ ಬಾಳಲು ನಾನು ಸಿದ್ಧ’ ಎಂದು ನಿಧಾ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಐದಾರು ತಿಂಗಳ ಹಿಂದೆ ತಂದೆಯ ಅನಾರೋಗ್ಯದ ಕಾರಣ ತವರು ಮನೆಗೆ ಹೋಗಿದ್ದಾಗ ಪತಿ ಲಾಯರ್ ನೋಟಿಸ್ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ಪ್ರಾಣಬಿಟ್ಟ ಮೂವರು ಮಹಿಳಾ ಕಾರ್ಮಿಕರು

hassana wife and husband

ಪತ್ನಿಯ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪತಿ ಉಮೇರ್, ಇದು ಹಣಕ್ಕಾಗಿ ಮಾಡುತ್ತಿರುವ ಸಂಚು. ನಾನು ಪತ್ನಿಯನ್ನ ಕೂಡಿ ಹಾಕಿಲ್ಲ. ಆಕೆ ಗೋಡೆ ಹತ್ತಿ ಮನೆಯೊಳಗೆ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿದೆ, ಬೇಕಿದ್ದರೆ ಪರಿಶೀಲಿಸಿ. ಮನೆಯಿಂದ ಆಚೆ ಹೋಗಿರುವ ದೃಶ್ಯಗಳೂ ನನ್ನ ಬಳಿ ಇವೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾನು ಕೀ ಹಾಕಿ ಹೋಗಿದ್ದೇನೆಯೇ ಹೊರತು ಆಕೆಯನ್ನ ಕೂಡಿ ಹಾಕಿಲ್ಲ. ಮನೆಯ ಹಿಂಬದಿಯಿಂದ ಬಂದು ಎಂಟ್ರಿ ನೀಡಿದ್ದಾರೆ.  

ಪತ್ನಿ ಕಡೆಯವರು ನನ್ನಿಂದ 50 ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ನನ್ನ ಕುಟುಂಬವನ್ನು ಒಡೆಯಲು ಸಂಚು ರೂಪಿಸಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿ ನನ್ನ ಮಾನಹಾನಿ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ನನಗೆ ಆಕೆಯ ಜೊತೆ ಬಾಳಲು ಇಷ್ಟವಿಲ್ಲ ಎಂದು ಉಮೇರ್ ಖಡಕ್ ಆಗಿ ಹೇಳಿದ್ದಾರೆ. ಹೆಣ್ಣು ಮಕ್ಕಳ ಸಮಸ್ಯೆ ಕೇಳುವವರು ಗಂಡು ಮಕ್ಕಳ ನೋವನ್ನು ಯಾಕೆ ಕೇಳಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ

ಮಗಳು ಮನೆಯೊಳಗೆ ಲಾಕ್ ಆಗಿರುವ ವಿಷಯ ತಿಳಿದು ನಿಧಾ ಪೋಷಕರು ಸ್ಥಳಕ್ಕೆ ಆಗಮಿಸಿದ್ದರು. ಇದರಿಂದ ಎರಡು ಕುಟುಂಬಗಳ ನಡುವೆ ಕೆ.ಆರ್. ಪುರಂ ಬಡಾವಣೆಯಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆದಿದೆ. ಸದ್ಯ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕೋಟಿ ಕೋಟಿ ಆಸ್ತಿ ಇದ್ದರೂ ಕೌಟುಂಬಿಕ ಕಲಹದಿಂದಾಗಿ ದಂಪತಿ ಜಗಳ ಈಗ ಪೊಲೀಸ್ ಮೆಟ್ಟಿಲೇರಿದೆ. 10 ವರ್ಷಗಳ ದಾಂಪತ್ಯ ಈಗ ಆರೋಪ-ಪ್ರತ್ಯಾರೋಪಗಳ ಸುಳಿಯಲ್ಲಿ ಸಿಲುಕಿದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್: ಟಿಕೆಟ್ ರೇಟ್ ಏರಿಕೆ! ಹೊಸ ದರ ಪಟ್ಟಿ ಇಲ್ಲಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

wife husband Hassan
Advertisment