/newsfirstlive-kannada/media/media_files/2026/01/09/hassan-dc-car-2-2026-01-09-16-10-42.jpg)
ಹಾಸನ: ‘ಇವತ್ತಿಲ್ಲ, ನಾಳೆ ಬನ್ನಿ’ ಸರ್ಕಾರಿ ಕಚೇರಿಗೆ ಹೋದ್ರೆ ಅಧಿಕಾರಿಗಳ ಕಾಮನ್ ಉತ್ತರ ಇದು! ಹಾಸನದಲ್ಲಿ ರೈತರ ಸಹನೆಯ ಕಟ್ಟೆ ಒಡೆದಿದ್ದು, ಜಿಲ್ಲಾಧಿಕಾರಿಗಳ ಕಾರು ಸೀಜ್ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಅಂದ್ಹಾಗೆ ಇಲ್ಲಿ ರೈತರು, ಕಾನೂನು ಪ್ರಕಾರವೇ ಜಿಲ್ಲಾಧಿಕಾರಿಗಳ ಅಧಿಕೃತ ಕಾರನ್ನ ಸೀಜ್ ಮಾಡಿದ್ದಾರೆ.
ವಕೀಲರು ಹೇಳಿದ್ದೇನು..?
​ಆಲೂರು ತಾಲೂಕಿನ ಭಕ್ತರಳ್ಳಿ ಗ್ರಾಮದ ಸರ್ವೇ ನಂಬರ್ 44/1 ರಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಸುಮಾರು 20 ವರ್ಷ ಆಗಿತ್ತು. ರೈತರಾದ ನಾಗಮ್ಮ, ಲಕ್ಷ್ಮೀ ಗೌಡ ಹಾಗೂ ಜಗದೀಶ್ ಅವರಿಗೆ ಸೇರಿದ 10 ಎಕರೆ ಜಮೀನು ಸ್ವಾಧೀನವಾಗಿತ್ತು. ರೈತರಿಗೆ ಪರಿಹಾರ ನೀಡವಂತೆ ಆದೇಶ ನೀಡಿ 15 ವರ್ಷ ಕಳೆದಿದೆ.
/filters:format(webp)/newsfirstlive-kannada/media/media_files/2026/01/09/hassan-dc-car-1-2026-01-09-16-11-48.jpg)
ಇದುವರೆಗೆ ದುಡ್ಡನ್ನ ಕಟ್ಟಲಿಲ್ಲ. ಗುಂಟೆಗೆ 40 ಸಾವಿರ ರೂಪಾಯಿ ನೀಡುವಂತೆ ಆದೇಶವಾಗಿದೆ. ಈ ಕೇಸ್​​ನಲ್ಲಿ 11, 22,529 ರೂಪಾಯಿ ಕಟ್ಟಬೇಕು. ಕಳೆದ ಒಂದು ತಿಂಗಳಿನಿಂದ ಜಿಲ್ಲಾಡಳಿತ ರೈತರನ್ನು ಸತಾಯಿಸಿಕೊಂಡು ಬರುತ್ತಿದೆ. ಆದರಿಂದ ರೈತರು ಮತ್ತೆ ಕೋರ್ಟ್​ ಮೊರೆ ಹೋಗಿದ್ದರು. ಹಾಸನ ಪ್ರಧಾನ ಸಿವಿಲ್ ನ್ಯಾಯಾಲಯವು ಇದೇ ಕಾರನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ. ಅದರ ಪ್ರಕಾರ ಜಪ್ತಿ ಮಾಡಲಾಗಿದೆ. ಇದೀಗ ಜೆಸಿಬಿ ಮೂಲಕ ಕಾರನ್ನು ಎಳೆದುಕೊಂಡು ಹೋಗ್ತೇವೆ ಎಂದಿದ್ದಾರೆ.
/filters:format(webp)/newsfirstlive-kannada/media/media_files/2026/01/09/hassan-dc-car-2026-01-09-16-12-00.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us