ಕ್ಲಾಸ್​ನಲ್ಲಿ ಲೆಕ್ಚರರ್​​ನಿಂದ ಅವಮಾನ​​.. ದುಡುಕಿನ ನಿರ್ಧಾರಕ್ಕೆ ಪ್ರಾಣಬಿಟ್ಟ ವಿದ್ಯಾರ್ಥಿನಿ

ಪ್ರತಿಷ್ಠಿತ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ (oxford dental college) ಕಿರುಕುಳಕ್ಕೆ ನೊಂದು ವಿದ್ಯಾರ್ಥಿನಿ ಆತ್ಮ*ತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಯಶಸ್ವಿನಿ (23) ಮೃತ ಡೆಂಟಲ್ ವಿದ್ಯಾರ್ಥಿನಿ.

author-image
Ganesh Kerekuli
medical student yashaswini
Advertisment

ಬೆಂಗಳೂರು: ಪ್ರತಿಷ್ಠಿತ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ (oxford dental college) ಕಿರುಕುಳಕ್ಕೆ ನೊಂದು ವಿದ್ಯಾರ್ಥಿನಿ ಆತ್ಮ*ತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಯಶಸ್ವಿನಿ (23) ಮೃತ ಡೆಂಟಲ್ ವಿದ್ಯಾರ್ಥಿನಿ. 

ಕಾಲೇಜು ಆಡಳಿತ ಮಂಡಳಿಯು ಕಿರುಕುಳ ನೀಡಿರೋದಕ್ಕೆ ನನ್ನ ಮಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಪ್ರಕರಣ ನಡೆದಿದೆ. ಮೃತ ಯಶಸ್ವಿನಿ ಬೊಮ್ಮನಹಳ್ಳಿ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. 

ಇದನ್ನೂ ಓದಿ:ಕೊಂಕು ಮಾತಿಗೆ ಕುಗ್ಗದ ಅಶ್ವಿನಿ ಫಿನಿಕ್ಸ್‌ನಂತೆ ಎದ್ದು ಬಂದ್ರಾ? 'ತಾಕತ್ತಿದ್ದರೆ ತಡೆದುಕೋ' ಟಾಸ್ಕ್‌ನಲ್ಲಿ ಗೆದ್ದು ಬೀಗಿದ ಅಶ್ವಿನಿ!

medical student yashaswini

ಪರಿಮಳ-ಭೋದೆವಯ್ಯ ದಂಪತಿಯ ಒಬ್ಬಳೇ ಮಗಳು ಯಶಸ್ವಿನಿ. Oral medicine and radiology ವಿಭಾಗದಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಸೆಮಿನಾರ್​ಗೆ ಅವಕಾಶ ನೀಡದೆ ಟಾರ್ಚರ್ ನೀಡಿರುವ ಆರೋಪವನ್ನು ಪೋಷಕರು ಮಾಡಿದ್ದಾರೆ. 

ಪೋಷಕರ ಆರೋಪ ಏನು..? 

ಕಣ್ಣು ನೋವಿನ ಹಿನ್ನೆಲೆಯಲ್ಲಿ ನಮ್ಮ ಮಗಳು ಯಶಸ್ವಿನಿ ಬುಧವಾರ ಕಾಲೇಜಿಗೆ ಹೋಗಿರಲಿಲ್ಲ. ಮಾರನೇ ದಿನ ಕಾಲೇಜಿಗೆ ಹೋದಾಗ ವಿದ್ಯಾರ್ಥಿಗಳ ಮುಂದೆ ಪ್ರಾಧ್ಯಾಪಕರು ಅವಮಾನ ಮಾಡಿದ್ದಾರೆ. ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿಕೊಂಡೆ? ಇಡೀ ಬಾಟಲ್ ಸುರಿದುಕೊಂಡ್ಯಾ ಎಂದು ಕೇಳಿ ಅವಮಾನ ಮಾಡಿದ್ದಾರಂತೆ. ಸ್ನೇಹಿತರ ಮುಂದೆ ಆದ ಅವಮಾನ ತಾಳಲಾರದೇ ಮಗು ಜೀವಕಳೆದುಕೊಂಡಿದ್ದಾಳೆ ಎಂದು ಹೆತ್ತವರು ಕಣ್ಣೀರು ಇಟ್ಟಿದ್ದಾರೆ. 

ಟಾರ್ಚರ್ ನೀಡಿದ ಪ್ರಾಂಶುಪಾಲ, ಅವಮಾನಿಸಿದ ಪ್ರಾಧ್ಯಾಪಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಪೋಷಕರ ಪ್ರತಿಭಟನೆಗೆ ಆಕೆಯ ಸಹಪಾಠಿಗಳು ಸಾಥ್ ನೀಡಿದ್ದಾರೆ. 

ಇದನ್ನೂ ಓದಿ: ಪೋಷಕರ ಕಂಟ್ರೋಲ್​​ನಲ್ಲಿ ಮಕ್ಕಳ WhatsApp.. ಬರ್ತಿದೆ ಹೊಸ ಫೀಚರ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Bengaluru News Medical Student Yashaswini
Advertisment