/newsfirstlive-kannada/media/media_files/2026/01/09/whatsaap-2026-01-09-14-43-47.jpg)
ಮಕ್ಕಳ ವಾಟ್ಸ್​​ಆ್ಯಪ್ ಈಗ ಪೋಷಕರ ನಿಯಂತ್ರಣದಲ್ಲಿದೆ! ಮೊಬೈಲ್ ಹುಳು ಆಗಿರುವ ಇವತ್ತಿನ ಮಕ್ಕಳನ್ನ ನಿಯಂತ್ರಿಸೋದೇ ಕಷ್ಟವಾಗಿದೆ. ಹೀಗಾಗಿ ವಾಟ್ಸ್​​ಆ್ಯಪ್ ಪೋಷಕರಿಗೆ ಅನುಕೂಲ ಆಗುವಂಥ ಫೀಚರ್ಸ್​ ಪರಿಚಯಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಅಥವಾ ಸೆಕೆಂಡ್ ವಾಟ್ಸ್​ಆ್ಯಪ್ ಅಕೌಂಟ್​ ಬರಲಿದ್ದು, ಇದರ ಸಂಪೂರ್ಣ ನಿಯಂತ್ರಣ ಪೋಷಕರ ಕೈಗೆ ಸಿಗಲಿದೆ. WABetaInfo ವರದಿಯ ಪ್ರಕಾರ, ಈ ಫೀಚರ್ಸ್​, WhatsApp ನ ಆಂಡ್ರಾಯ್ಡ್ ಬೀಟಾ ಆವೃತ್ತಿ 2.26.1.30 ರಲ್ಲಿ ಕಂಡುಬಂದಿದೆ. ಪ್ರಸ್ತುತ, ಈ ಫೀಚರ್ಸ್​ ಅಭಿವೃದ್ಧಿ ಹಂತದಲ್ಲಿದ್ದು, ಸಾಮಾನ್ಯ ಬಳಕೆದಾರರಿಗೆ ಇನ್ನೂ ಲಭ್ಯವಾಗಿಲ್ಲ. ಮಕ್ಕಳ ಆನ್‌ಲೈನ್ ಸುರಕ್ಷತೆ ಖಚಿತಪಡಿಸಿಕೊಳ್ಳಲು WhatsApp ಹೊಸ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಟಿಕೆಟ್ ಟು ಟಾಪ್ ಸಿಕ್ಸ್‌ನಿಂದ ಬಿಗ್​ ಮನೆಯ ಗಣಿತ ಬದಲಾಗಿದೆ.. ಯಾರಿಗೆ ಅನುಕೂಲ, ಅನಾನುಕೂಲ?
ಸೆಕೆಂಡ್ ಅಕೌಂಟ್ ಹೇಗೆ ಕೆಲಸ ಮಾಡ್ತದೆ..?
- ಮಕ್ಕಳ ಅನುಕೂಲಕ್ಕಾಗಿ, ಮಕ್ಕಳಿಗಾಗಿಯೇ ಫೀಚರ್ಸ್​ ವಿನ್ಯಾಸ
- ಮಕ್ಕಳ ಹಿತದೃಷ್ಟಿಯಿಂದ ಕೆಲವೇ ಕೆಲವು ಫೀಚರ್ಸ್ ಮಾತ್ರ ಇರಲಿದೆ
- ಪೋಷಕರ ಅಕೌಂಟ್​ಗೆ ಲಿಂಕ್, ಅಂದ್ರೆ ಪ್ರೈಮರಿ ಅಕೌಂಟ್​​ಗೆ ಲಿಂಕ್ ಆಗಿರುತ್ತೆ
- ಇದು ಚಾಟ್‌ಗಳು ಮತ್ತು ಕರೆಗಳಿಗೆ ಗೌಪ್ಯತೆ ಕಾಪಾಡಿಕೊಳ್ಳಲು ಪ್ರಮುಖ ಪಾತ್ರ
- ಅಂದರೆ 2 ಪ್ರೊಫೈಲ್‌ಗಳ ನಡುವೆ ಸ್ಪಷ್ಟ ಸಂಪರ್ಕ ಸೃಷ್ಟಿಸುತ್ತದೆ
ಉದ್ದೇಶ ಏನು..?
ದ್ವಿತೀಯ ಖಾತೆಯ ಉದ್ದೇಶವು, ಮಕ್ಕಳನ್ನ ಕಂಟ್ರೋಲ್​​ಗೆ ಇಟ್ಟುಕೊಳ್ಳುವುದಾಗಿದೆ. ಉದಾಹರಣೆಗೆ, ಮಕ್ಕಳು ಸೇವ್ ಮಾಡಿರುವ ಸಂಪರ್ಕ ಸಂಖ್ಯೆಗೆ ಮಾತ್ರ ಸಂದೇಶ ಕಳುಹಿಸಲು ಮತ್ತು ಕರೆ ಮಾಡಲು ಅನುಮತಿಸಬಹುದು. ಇದು ಅಪರಿಚಿತರನ್ನು ಸಂಪರ್ಕಿಸುವ ಅಪಾಯವನ್ನು ತಪ್ಪಿಸುತ್ತದೆ. ಪ್ರಸ್ತುತ ಸಂದೇಶ ಕಳುಹಿಸುವಿಕೆ ಮತ್ತು ಕರೆ ಮಾಡುವಿಕೆಯನ್ನ ಕಂಟ್ರೋಲ್ ಮಾಡಲು ಯಾವುದೇ ನೇರ ಅವಕಾಶ ಇಲ್ಲ.
ಪ್ರಸ್ತುತ ಪೋಷಕರು ನಿಯಂತ್ರಣ ಮಾಡುವ ಟೂಲ್​​ಗಳು ಪ್ರಯೋಗದಲ್ಲಿವೆ. WhatsApp ಇನ್ನೂ ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಿಲ್ಲ. ಅವು ಬಂದಾಗ, ಪೋಷಕರು ತಮ್ಮ ಮಕ್ಕಳ WhatsApp ಬಳಕೆಯ ಮೇಲೆ ವಯಸ್ಸಿಗೆ ಸೂಕ್ತವಾದ ಮಿತಿಗಳನ್ನು ನಿಗದಿಪಡಿಸಲು ಸಾಧ್ಯವಾಗಲಿದೆ. ಇದು ಮಕ್ಕಳು ಅಪ್ಲಿಕೇಶನ್ ಅನ್ನು ಹೆಚ್ಚು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಲು ಸಹಾಯ ಮಾಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us