/newsfirstlive-kannada/media/media_files/2026/01/09/bigg-boss-top-six-2026-01-09-12-50-19.jpg)
ಬಿಗ್ಬಾಸ್ ಟಿಕೆಟ್ ಟು ಟಾಪ್ 6 ಶುರುವಾದ್ಮೇಲೆ ಲೆಕ್ಕಾಚಾರಗಳು ಬದಲಾಗೋ ಲಕ್ಷಣಗಳು ಕಾಣಿಸ್ತಿವೆ. ಟಾಸ್ಕ್‌ನಲ್ಲಿ ಯಾರು ಸ್ಟ್ರಾಂಗ್ ಇರ್ತಾರೋ, ಅವ್ರು ಪಕ್ಕಾ ಟಾಪ್ 6 ಸೆಲೆಕ್ಟ್ ಆಗ್ತಾರೆ. ಹಾಗಾಗಿ, ಟಾಪ್ -6 ಟಾಸ್ಕ್‌ನಲ್ಲಿ ಮನೆಯಲ್ಲಿನ ಗಣಿತ ಬದಲಾಗಲಿದೆ. ಇದರಿಂದ ಅನುಕೂಲ ಯಾರಿಗೆ? ಅನಾನೂಕೂಲ ಯಾರಿಗೆ?
ಟಾಪ್ ಸಿಕ್ಸ್ ಅಂದ್ರೆ ಫಿನಾಲೆಗೆ ಸೆಲೆಕ್ಟ್ ಆಗೋದು ಅಂತಾ ಅರ್ಥ. ನಿಮಗೆಲ್ಲಾ ಗೊತ್ತೇ ಇದೇ. ಫಿನಾಲೆಗೆ ಸೆಲೆಕ್ಟ್ ಆಗೋದು ಬರೋಬ್ಬರಿ 6 ಸ್ಪರ್ಧಿಗಳು. ಆ ಸ್ಪರ್ಧಿಗಳನ್ನ ಫೈನಲಿಸ್ಟ್ ಅಂತಾ ಕರೀತಾರೆ. ಒಂದು ರಿಯಾಲಿಟಿ ಶೋನಲ್ಲಿ ಫೈನಲಿಸ್ಟ್ ಆಗೋದು ಅಂದ್ರೆ ಸುಮ್ನೆ ಅಲ್ಲ. ಅಂತಹ ಸುವರ್ಣ ಅವಕಾಶ ಈಗ ಮನೆಯಲ್ಲಿರೋ ಮಂದಿಗೆ ಸಿಕ್ಕಿದೆ.
ಇದನ್ನೂ ಓದಿ: ಬಿಗ್ ಬಾಸ್‌ಗೆ ಮುನ್ನ 80 ಸಾವಿರ, ಈಗ 1 ಮಿಲಿಯನ್ ಫಾಲೋವರ್ಸ್ ಗಿಟ್ಟಿಸಿದ ಗಿಲ್ಲಿ ನಟ!
/filters:format(webp)/newsfirstlive-kannada/media/media_files/2026/01/09/bigg-boss-top-six-1-2026-01-09-12-52-26.jpg)
ಒಂದೇ ಮಾತಲ್ಲಿ ಹೇಳ್ಬೇಕಂದ್ರೆ ಯಾರಿಗೆ ಜನ ಬಲ ಇರೋದಿಲ್ವೋ ಅವರು ಏನಾದ್ರೂ ಸೆಲೆಕ್ಟ್ ಆಗ್ಬಿಟ್ರೆ, ಅವರಿಗಿಂತ ಲಕ್ಕಿ ಯಾರು ಇಲ್ಲ. ಜನ ಬೆಂಬಲ ಅಂದ್ರೆ ಹೆಚ್ಚೆಚ್ಚು ವೋಟ್ ಅಂತಾ ಅರ್ಥ. ಈಗ ಗಿಲ್ಲಿ, ಟಾಪ್ 6 ರೇಸ್‌ನಿಂದ ಹೊರಗೆ ಉಳಿದಿದ್ದಾನೆ. ಹಾಗಂತ ಅವ್ನು ಟಾಪ್ ಸಿಕ್ಸ್‌ನಲ್ಲಿ ಇರೋಲ್ಲ ಅಂತಾ ಅರ್ಥವಲ್ಲ. ಗಿಲ್ಲಿ ಪಕ್ಕಾ ಇರ್ತಾನೆ. ಹಾಗಾಗಿ ಗಿಲ್ಲಿ ಇದು ತುಂಬಾ ದೊಡ್ಡ ಮ್ಯಾಟರ್ ಅಲ್ಲ. ಆದ್ರೆ, ಉಳಿದವರಿಗೆ ಇದು ಪಕ್ಕಾ ಮ್ಯಾಟ್ರು ಆಗೇ ಆಗುತ್ತೆ.
ಈಗಾಗ್ಲೇ ಧನು ಟಾಪ್ ಸಿಕ್ಸ್ ಕಂಟೆಂಡರ್ ಆಗಿ ಸೆಲೆಕ್ಟ್ ಆಗಿರೋದರಿಂದ, ಇವರ ಪೈಕಿ ಯಾರು ಗೆದ್ದರು ಕೂಡ ಧನು ವಿರುದ್ಧ ಸೆಣಸಾಡಬೇಕಿದೆ. ಒಂದು ವೇಳೆ ಧನು ವಿರುದ್ಧ ಗೆದ್ದವರಿಗೆ ಟಾಪ್ ಸಿಕ್ಸ್‌ನಲ್ಲಿ ಪಕ್ಕಾ ಜಾಗ ಸಿಗುತ್ತೆ.
ಇದನ್ನೂ ಓದಿ:ಈ ಸಲ ಕಪ್ ಯಾರದ್ದು..? ‘ಬಿಗ್’​ ವೀಕ್ಷಕರು ಏನು ಹೇಳ್ತಿದ್ದಾರೆ..?
/filters:format(webp)/newsfirstlive-kannada/media/media_files/2026/01/04/bigg-boss-kannada-2-2026-01-04-17-45-30.jpg)
ರಘು ಮತ್ತು ಧ್ರುವಂತ್‌ಗೆ ಇದೊಂದು ಬೆಸ್ಟ್ ಅವಕಾಶ. ಅದರಲ್ಲೂ ಧ್ರುವಂತ್‌ಗಂತೂ ಫಿನಾಲೆಗೆ ಹೋಗೋಕೆ ಇದಕ್ಕಿಂತ ಬೆಸ್ಟ್ ಅವಕಾಶ ಮತ್ತೊಂದಿಲ್ಲ. ಅದೇ ರೀತಿ, ರಘು ಅವರಿಗೂ ಕೂಡ ಟಾಸ್ಕ್ ಮೂಲಕ ಗೆದ್ದು ಟಾಪ್ ಸಿಕ್ಸ್‌ಗೆ ಸೆಲೆಕ್ಟ್ ಆಗೋ ಅದ್ಭುತ ಅವಕಾಶವಿದೆ. ಟಾಸ್ಕ್ ಮಾಸ್ಟರ್ ಧನುನಾ ಮಣಿಸಿ ಮುನ್ನೆಡೆದವರಿಗೆ, ಈ ಅದೃಷ್ಟ ಒಲಿಯಲಿದೆ.
ಮಹಿಳಾ ಸ್ಪರ್ಧಿಗಳಿಗೂ ಇದು ಉತ್ತಮ ಅವಕಾಶ. ಯಾಕಂದ್ರೆ ಕಡೆಯದಾಗಿ, ಬಿಗ್ಬಾಸ್ ಯಾವ ರೀತಿ ಟಾಸ್ಕ್ ಕೊಡ್ತಾರೆ ಅನ್ನೋದನ್ನ ಊಹಿಸೋಕೆ ಆಗೋದಿಲ್ಲ. ಆ ಗೇಮ್ ಯಾರಿಗೆ ಬೇಕಾದರೂ ಈಸಿಯಾಗಬಹುದು.
ಒಂದಂತೂ ಸತ್ಯ ಟಾಪ್ ಸಿಕ್ಸ್ ಟಾಸ್ಕ ಮುಗಿದ್ಮೇಲೆ ಫಿನಾಲೆಯಲ್ಲಿ ಯಾರು ಇರ್ತಾರೆ ಅಂತಾ ಭವಿಷ್ಯ ನುಡಿಯುತ್ತಿದ್ದವರದ್ದು ಉಲ್ಟಾ ಆಗ್ಬಹುದು. ಇಡೀ ಗೇಮ್‌ನ ಲೆಕ್ಕಾಚಾರವೇ ಬದಲಾಗಬಹುದು. ಯಾವುದೋ ಅಚ್ಚರಿಯ ಸ್ಪರ್ಧಿ ಟಾಪ್ ಸಿಕ್ಸ್‌ನಲ್ಲಿ ಸ್ಥಾನ ಪಡೆಯಬಹುದು. ಟಿಕೆಟ್ ಟು ಟಾಪ್ ಸಿಕ್ಸ್‌ನಿಂದ ಬಿಗ್‌ಬಾಸ್ ಸೀಸನ್ 12 ಗತಿ ಚೇಂಜ್ ಆಗ್ಲಿದೆ. ಫೈನಲಿಸ್ಟ್‌ಗಳ ಲಿಸ್ಟ್ ಅದಲು ಬದಲಾದ್ರು ಆಶ್ಚರ್ಯವಿಲ್ಲ.
ಇದನ್ನೂ ಓದಿ: ಸಪ್ಪೆ ಮುಖ ಇಟ್ಟ ಗಿಲ್ಲಿ.. ಹಿರಿಹಿರಿ ಹಿಗ್ಗಿದ ಅಶ್ವಿನಿ ಗೌಡ..! ಮುಂದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us