ಹಾಸನ ದುರಂತ.. ಹುಟ್ಟುಹಬ್ಬದ ದಿನವೇ ದುರಂತ ಅಂತ್ಯಕಂಡ ಇಂಜಿನಿಯರಿಂಗ್ ವಿದ್ಯಾರ್ಥಿ

ಹಾಸನ ದುರ್ಘಟನೆಯಲ್ಲಿ ಹುಟ್ಟುಹಬ್ಬದಂದೇ ಮಿಥುನ್ ಎಂಬ ವಿದ್ಯಾರ್ಥಿ​ ಮೃತಪಟ್ಟಿದ್ದಾನೆ. ಮಿಥುನ್ ಫೈನಲ್ ಇಯರ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ. ನಿನ್ನೆ ಕಾಲೇಜಿಗೂ ಹೋಗಿ ಬಂದಿದ್ದ. ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಹಾಸ್ಟೆಲ್​ನಲ್ಲಿ ಸ್ನೇಹಿತರೆಲ್ಲ ಸೇರಿ ಬರ್ತಡೇ ಸೆಲೆಬ್ರೇಸಷನ್ ಕೂಡ ಮಾಡಿದ್ರು.

author-image
Ganesh Kerekuli
Hassan tragedy
Advertisment

ಹಾಸನ ದುರ್ಘಟನೆಯಲ್ಲಿ ಹುಟ್ಟುಹಬ್ಬದಂದೇ ಮಿಥುನ್ ಎಂಬ ವಿದ್ಯಾರ್ಥಿ​ ಮೃತಪಟ್ಟಿದ್ದಾನೆ. ಮಿಥುನ್ ಫೈನಲ್ ಇಯರ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ. ನಿನ್ನೆ ಕಾಲೇಜಿಗೂ ಹೋಗಿ ಬಂದಿದ್ದ. 

ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಹಾಸ್ಟೆಲ್​ನಲ್ಲಿ ಸ್ನೇಹಿತರೆಲ್ಲ ಸೇರಿ ಬರ್ತಡೇ ಸೆಲೆಬ್ರೇಸಷನ್ ಕೂಡ ಮಾಡಿದ್ರು. ಆನಂತರ ಹಾಸ್ಟೆಲ್​ಗೆ ಬಂದು ಗಣಪತಿ ವಿಸರ್ಜನೆಗೆ ಹೋದಾಗ ದುರಂತ ಅಂತ್ಯಕಂಡಿದ್ದಾನೆ. ಮೃತ ಮಿಥನ್ ಮೂಲತಃ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಗವಿರಂಗನಾಥಪುರ ನಿವಾಸಿ. ಹಾಸನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ. ಗವಿರಂಗಾಪುರ ಗ್ರಾಮದ ನಾಗರಾಜ್​ಗೆ ಒಬ್ಬನೇ ಮಗ ಮಿಥುನ್. 

ಮತ್ತೊಂದು ಕಡೆ ಮೃತ ಬಳ್ಳಾರಿಯ ಪ್ರವೀಣಕುಮಾರ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕ ಪ್ರವೀಣ್​ ಕುಮಾರ್​ ಅಪಘಾತಕ್ಕೂ ಮುನ್ನ ನಿನ್ನೆ ರಾತ್ರಿ ಫೋನ್ ಮಾಡಿ ಕುಟುಂಬಸ್ಥರ ಜೊತೆಗೆ ಮಾತಾಡಿದ್ದ. ಕಡುಬಡತನದ ಕುಟುಂಬದಲ್ಲಿ ಬೆಳೆಯುತ್ತಿದ್ದ ಆತ ಓದಿನಲ್ಲಿ ಚುರುಕಾಗಿದ್ದ ಅಂತ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ನಿನ್ನೆ ರಾತ್ರಿ ಪ್ರವೀಣ ಸಾ*ವಾಗಿದೆ ಅಂತ ಆತನ ಸ್ನೇಹಿತರು ಫೋನ್ ಮೂಲಕ ತಿಳಿಸಿದ್ದಾರೆ. ಈಗಲೂ ನಮಗೆ ನಂಬೋಕೆ ಆಗ್ತಿಲ್ಲ. ನಮಗೆ ಸರ್ಕಾರ ಪರಿಹಾರ ಬೇಡ. ನಮಗೆ ಪ್ರವೀಣಕುಮಾರ್ ಬೇಕು ಅಂತ ಕುಟುಂಬಸ್ಥರು ಕಣ್ಣೀರು ಇಟ್ಟಿದ್ದಾರೆ. 

ಇದನ್ನೂ ಓದಿ:ಹಾಸನ ದುರಂತಕ್ಕೆ ಮೋದಿ ಕಂಬನಿ.. ಪರಿಹಾರ ಘೋಷಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ದುರಂತ Hassan Hassan Ganesh Procession Tragedy hassan tragedy
Advertisment