/newsfirstlive-kannada/media/media_files/2025/09/13/pm-modi-4-2025-09-13-09-57-55.jpg)
ಹಾಸನ: ಗಣಪತಿ ವಿಸರ್ಜನೆ ವೇಳೆ ನಡೆಯಬಾರದ ಘನಘೋರ ದುರಂತ ನಡೆದು ಹೋಗಿದೆ. ಹಾಸನ ತಾಲೂಕಿನ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅದ್ಧೂರಿ ಗಣೇಶ ಮೆರವಣಿಗೆ ಸಾ*ವಿನ ಮೆರವಣಿಗೆಯಾಗಿ ಬದಲಾಗಿದೆ. ಡಿಜೆ ಸೌಂಡ್​​ನಲ್ಲಿ ಸಖತ್ ಸ್ಟೆಪ್ ಹಾಕುತ್ತಿದ್ದವರ ಮೇಲೆ ಯಮಸ್ವರೂಪಿಯಾಗಿ ಬಂದ ಟ್ರಕ್ 9 ಜನರನ್ನ ಬಲಿ ಪಡೆದಿದೆ.
ಹಾಸನ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಕರ್ನಾಟಕದ ಹಾಸನದಲ್ಲಿ ನಡೆದ ಅಪಘಾತವು ಹೃದಯ ವಿದ್ರಾವಕವಾಗಿದೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ. ಮೃತರ ಪ್ರತಿ ಸಂಬಂಧಿಕರಿಗೆ PMNRF ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.
ದುರಂತಕ್ಕೆ ಬೈಕ್​ ಸವಾರ ಬೇಕಾಬಿಟ್ಟಿ ಅಡ್ಡ ಬಂದಿದ್ದು ಹಾಗೂ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಸಿಟ್ಟಿಗೆದ್ದ ಸ್ಥಳೀಯರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಪಘಾತ ಮಾಡಿದ ವಾಹನ ಮಹಾರಾಷ್ಟ್ರ ನೋಂದಣಿ ಹೊಂದಿದ್ದು ಚಾಲಕ ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಭುವನೇಶ್​ ಕೂಡ ಗಾಯಗೊಂಡಿದ್ದಾನೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಲಾರಿ ಚಾಲಕನ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.
ಇದನ್ನೂ ಓದಿ:ಹಾಸನ ದುರಂತ.. ಜೀವ ಕಳೆದುಕೊಂಡವ್ರೆಲ್ಲ 25 ವರ್ಷದೊಳಗಿನ ಯುವಕರು..
The mishap in Hassan, Karnataka, is heart-rending. In this tragic hour, my thoughts are with the bereaved families. I hope those who have been injured recover at the earliest.
— PMO India (@PMOIndia) September 13, 2025
An ex-gratia of Rs. 2 lakh from PMNRF would be given to the next of kin of each deceased. The injured…
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us