/newsfirstlive-kannada/media/media_files/2025/10/06/hasanambe-2025-10-06-07-37-36.jpg)
ಸರ್ವ ಮಂಗಳ ಮಾಂಗಲ್ಯೇ ಶಿವೆ ಸರ್ವಾರ್ಥ ಸಾಧಿಕೆ.. ಶರಣ್ಯೇ ತ್ರಯಂಬಕೆ ದೇವಿ ಹಾಸನಾಂಬೆ ನಮೋಸ್ತುತೆ.. ಶಕ್ತಿ ದೇವಿ ಹಾಸನಾಂಬೆ, ವರ್ಷಕ್ಕೊಮ್ಮೆ ಭಕ್ತರನ್ನ ದರ್ಶನ ನೀಡಲಿದ್ದಾಳೆ.. ವಿಶೇಷ ಪೂಜಾ ಕೈಂಕರ್ಯಗಳ ಮೂಲಕ ಇವತ್ತು ದೇವಾಲಯ ಗರ್ಭಗುಡಿ ತೆರೆಯುತ್ತಿದೆ.. ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನದ ಅಧಿದೇವತೆಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಕಾದಿದ್ದಾರೆ..
ಇಂದಿನಿಂದ ಹಾಸನಾಂಬೆ ದರ್ಶನ
- ಇಂದಿನಿಂದ ಅ.23ರ ವರೆಗೆ ತೆರೆದಿರಲಿದೆ ತಾಯಿಯ ಗರ್ಭಗುಡಿ
- ಇವತ್ತು & 23ರಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ
- ರಾತ್ರಿಯೇ ಹಾಸನಾಂಬೆಗೆ ವಿಶೇಷ ಪೂಜಾ ಕೈಂಕರ್ಯ ಆರಂಭ
- ರಾತ್ರಿಯಿಂದ ಬೆಳಗಿನ ಜಾವದವರೆಗೆ ವಿಶೇಷ ಪೂಜೆ ನಡೆದಿದೆ
- ಮಧ್ಯಾಹ್ನ 12 - 12.30 ರೊಳಗೆ ಗರ್ಭಗುಡಿಯ ಬಾಗಿಲು ಓಪನ್​​
ಸಂಪ್ರದಾಯದ ಪ್ರಕಾರ ಹಾಸನಾಂಬ ದೇವಿಯ ವಸ್ತುಗಳ ಶುಚಿ ಕಾರ್ಯ ನಡೆದಿದೆ.. ಹಾಸನದ ಹುಣಸಿನಕೆರೆಯಲ್ಲಿ ದೇವಿಯ ವಸ್ತ್ರಗಳನ್ನ ಮಡಿವಾಳ ಸಮುದಾಯ ಶುಚಿಗೊಳಿಸಿದ್ರೆ ವಸ್ತ್ರಗಳನ್ನ ಹಾಸನಾಂಬೆ ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದ ತಂಡ ಜೋಡಿಸಿಕೊಂಡಿದೆ. ಒಟ್ಟಾರೆ, ಸರ್ವಾಲಂಕಾರ ಭೂಷಿತ ದೇವಿ ಕಣ್ತುಂಬಿಕೊಳ್ಳಲು ಭಕ್ತರು ಸಜ್ಜಾಗಿದ್ದು, ಗರ್ಭಗುಡಿಯ ಆರದ ದೀಪವನ್ನ ಕಾಣಲು ಭಕ್ತಕೋಟಿ ಕಾತರದಿಂದ ಕಾದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ