/newsfirstlive-kannada/media/media_files/2025/10/09/hasanambe-temple-3-2025-10-09-12-57-05.jpg)
ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ಗರ್ಭಗುಡಿಯ (Hasanamba Temple) ಬಾಗಿಲನ್ನು ತೆರೆಯಲಾಗಿದೆ. ಇಂದು ಮಧ್ಯಾಹ್ನ 12 ರಿಂದ 12.30 ಅವಧಿಯಲ್ಲಿ ದೇಗುಲದ ಬಾಗಿಲು ಓಪನ್ ಮಾಡಲಾಗಿದ್ದು, ನಾಳೆಯಿಂದ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
/filters:format(webp)/newsfirstlive-kannada/media/media_files/2025/10/09/hasanambe-temple-4-2025-10-09-12-57-50.jpg)
ಬಾಗಿಲು ತೆರೆಯುವ ಮುನ್ನ ಐದು ಜನ ಪುರೋಹಿತರ ತಂಡದಿಂದ ದೇವಿಯ ಒಡವೆಗಳನ್ನು ತರಲಾಯಿತು. ಬಳಿಕ ಅರಸರ ವಂಶಸ್ಥರಿಂದ ಬಾಳೆಕಂದು ಕತ್ತರಿಸಿ ದೇವಸ್ಥಾನ ಓಪನ್ ಮಾಡಲಾಯಿತು. 13 ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಲಿದ್ದಾರೆ. ನಾಳೆಯಿಂದ ಅಕ್ಟೋಬರ್ 22ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಇಂದು ಮತ್ತು ಅಕ್ಟೋಬರ್​ 23 ರಂದು ಕೊನೆಯ ದಿನ ಭಕ್ತರಿಗೆ ದರ್ಶನ ಇರಲ್ಲ.
ಇದನ್ನೂ ಓದಿ:ಕಾಂತಾರ ವಿರುದ್ಧ ದೈವಾರಾಧಕರು ಆಕ್ರೋಶ.. ದೈವದ ಸನ್ನಿಧಿಯಲ್ಲೇ ದೂರು..!
/filters:format(webp)/newsfirstlive-kannada/media/media_files/2025/10/09/hasanambe-temple-2-2025-10-09-12-57-19.jpg)
ಹಾಸನಾಂಬ ದೇವಿಯ ಸನ್ನಿಧಾನದಲ್ಲಿ ಅರ್ಚಕರ ತಂಡದಿಂದ ವಿವಿಧ ಪೂಜಾ ಕೈಂಕಾರ್ಯಗಳು ನಡೆಯುತ್ತಿವೆ. ಬಾಗಿಲು ತೆರೆಯುವ ವೇಳೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮೊದಲಾದ ಗಣ್ಯರಿದ್ದರು. ಜಿಲ್ಲಾಡಳಿತದ ಸಮ್ಮಖದಲ್ಲಿ ಗರ್ಭಗುಡಿಯ ಬಾಗಿಲು ತೆರೆಯಲಾಗಿದೆ.
/filters:format(webp)/newsfirstlive-kannada/media/media_files/2025/10/09/hasanambe-temple-1-2025-10-09-12-57-30.jpg)
ಶಕ್ತಿ ದೇವಿ ಹಾಸನಾಂಬೆ, ವರ್ಷಕ್ಕೊಮ್ಮೆ ಭಕ್ತರನ್ನ ದರ್ಶನ ನೀಡುತ್ತಾಳೆ. ವಿಶೇಷ ಪೂಜಾ ಕೈಂಕರ್ಯಗಳ ಮೂಲಕ ಇವತ್ತು ದೇವಾಲಯ ಗರ್ಭಗುಡಿ ತೆರೆಯುತ್ತಿದೆ. ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನದ ಅಧಿದೇವತೆಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಕಾದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us