16 ಲಕ್ಷ ಮೌಲ್ಯದ ಚಿನ್ನ ಮಾರಲು ಬಂದಾಗ ಮಹಿಳೆ ಲಾಕ್..! ಕಾರಣ..?

ಕಳ್ಳತನದ ಚಿನ್ನವನ್ನು ಗುಟ್ಟಾಗಿ ಮಾರಾಟ ಮಾಡಿ ಹಣ ಮಾಡಿಕೊಳ್ಳಲು ಬಂದಿದ್ದ ಮಹಿಳೆಯೊಬ್ಬರು ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪೊಲೀಸರ ಅತಿಥಿಯಾದ ಘಟನೆ ರಾಣೇಬೆನ್ನೂರಿನಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಶ್ರೀದೇವಿ ಸಂಜೀವ ಕಟ್ಟೇಕಾರ ಎಂಬಾಕೆಯನ್ನು ರಾಣೇಬೆನ್ನೂರು ನಗರ ಪೊಲೀಸರು ಬಂಧಿಸಿದ್ದಾರೆ.

author-image
Ganesh Kerekuli
haveri gold theft
Advertisment

ರಾಣೇಬೆನ್ನೂರು: ಕಳ್ಳತನದ ಚಿನ್ನವನ್ನು ಗುಟ್ಟಾಗಿ ಮಾರಾಟ ಮಾಡಿ ಹಣ ಮಾಡಿಕೊಳ್ಳಲು ಬಂದಿದ್ದ ಮಹಿಳೆಯೊಬ್ಬರು ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪೊಲೀಸರ ಅತಿಥಿಯಾದ ಘಟನೆ ರಾಣೇಬೆನ್ನೂರಿನಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಶ್ರೀದೇವಿ ಸಂಜೀವ ಕಟ್ಟೇಕಾರ ಎಂಬಾಕೆಯನ್ನು ರಾಣೇಬೆನ್ನೂರು ನಗರ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:

ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ತೆಗೆದುಕೊಂಡು ಆರೋಪಿ ಶ್ರೀದೇವಿ, ರಾಣೇಬೆನ್ನೂರಿಗೆ ಬಂದಿದ್ದಳು. ಇಲ್ಲಿನ ಖಾಸಗಿ ಗೋಲ್ಡ್ ಕಂಪನಿಯೊಂದಕ್ಕೆ (Gold Company) ತೆರಳಿ ಆಭರಣಗಳನ್ನು ಮಾರಾಟ ಮಾಡಲು ಯತ್ನಿಸಿದ್ದಾಳೆ.

ಸಿಬ್ಬಂದಿಗೆ ಬಂದ ಅನುಮಾನವೇ ಮುಳುವಾಯ್ತು

ಮಹಿಳೆ ತಂದಿದ್ದ ಬರೋಬ್ಬರಿ 236 ಗ್ರಾಂ (ಸುಮಾರು 16 ಲಕ್ಷ ರೂ. ಮೌಲ್ಯದ) ಚಿನ್ನವನ್ನು ನೋಡಿ ಗೋಲ್ಡ್ ಕಂಪನಿಯ ಸಿಬ್ಬಂದಿಗೆ ಅನುಮಾನ ಮೂಡಿದೆ. ಆಕೆಯ ವರ್ತನೆ ಮತ್ತು ಅಷ್ಟೊಂದು ಪ್ರಮಾಣದ ಚಿನ್ನಕ್ಕೆ ಸರಿಯಾದ ದಾಖಲೆ ಇಲ್ಲದಿರುವುದನ್ನು ಗಮನಿಸಿದ ಸಿಬ್ಬಂದಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ಎಂಟ್ರಿ

ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಾಣೇಬೆನ್ನೂರು ನಗರ ಠಾಣೆ ಪೊಲೀಸರು, ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಹುಬ್ಬಳ್ಳಿಯಲ್ಲಿ ಈ ಚಿನ್ನವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು, 16 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ಕಳ್ಳತನದ ಮಾಲು ಮಾರಾಟವಾಗುವುದನ್ನು ತಡೆದ ಸಿಬ್ಬಂದಿಯ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೂಪರ್​ 8ಗೆ ಟೀಂ ಇಂಡಿಯಾ ಎಂಟ್ರಿ.. SKY ಪಡೆಗೆ 3 ಸವಾಲು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Haveri news
Advertisment