Advertisment

ಸೂಪರ್​ 8ಗೆ ಟೀಂ ಇಂಡಿಯಾ ಎಂಟ್ರಿ.. SKY ಪಡೆಗೆ 3 ಸವಾಲು..!

ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದೆ. ಬ್ಯಾಟಿಂಗ್ ಬೌಲಿಂಗ್, ಫೀಲ್ಡಿಂಗ್​ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡ್ತಿರುವ ಸೂರ್ಯಕುಮಾರ್ ಯಾದವ್ ಪಡೆ ವಿಶ್ವಕಪ್ ಗೆಲ್ಲೋ ಫೇವರಿಟ್ ತಂಡಗಳಲ್ಲಿ ಒಂದೆನಿಸಿದೆ.

author-image
Ganesh Kerekuli
Team India (19)
Advertisment
  • ಲೀಗ್​​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಆಟ
  • ಫೆಬ್ರವರಿ 22, ದಕ್ಷಿಣ ಆಫ್ರಿಕಾ ವಿರುದ್ಧ ಮುಖಾಮುಖಿ
  • ಫೆಬ್ರವರಿ 26, ಜಿಂಬಾಬ್ವೆ ವಿರುದ್ಧ ಸೂರ್ಯ ಪಡೆ ಸೆಣಸಾಟ

ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದೆ. ಬ್ಯಾಟಿಂಗ್ ಬೌಲಿಂಗ್, ಫೀಲ್ಡಿಂಗ್​ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡ್ತಿರುವ ಸೂರ್ಯಕುಮಾರ್ ಯಾದವ್ ಪಡೆ ವಿಶ್ವಕಪ್ ಗೆಲ್ಲೋ ಫೇವರಿಟ್ ತಂಡಗಳಲ್ಲಿ ಒಂದೆನಿಸಿದೆ. ಸ್ಕೈ ಪಡೆ ಟೈಟಲ್ ಡಿಫೆಂಡ್ ಮಾಡಿಕೊಳ್ಳಬೇಕಾದ್ರೆ ಆ ಮೂರು ಸವಾಲುಗಳನ್ನ ಗೆಲ್ಲಲೇಬೇಕು. ಆ ಚಾಲೆಂಜಸ್ ಏನು? 

Advertisment

ಟಿ-20 ವಿಶ್ವಕಪ್​​ನ ಲೀಗ್ ಸ್ಟೇಜ್, ಇನ್ನೇನು ಮುಗಿತಾ ಬಂತು. ಈಗೇನಿದ್ರೂ ಸೂಪರ್-8 ಆಟ. ಇಷ್ಟು ದಿನ ಹೆಚ್ಚು ಟೆನ್ಶನ್​ ಇಲ್ಲದೇ ಗೆಲುವಿನ ಹಾದಿಯಲ್ಲಿ ಸಾಗ್ತಿದ್ದ ಟೀಮ್ ಇಂಡಿಯಾಗೆ ಇನ್ಮುಂದೆ ಸಾಲು ಸಾಲು ಸವಾಲುಗಳು ಎದುರಾಗಲಿವೆ. ಆ ಸವಾಲುಗಳನ್ನ ಗೆದ್ರೆ ಮಾತ್ರ ಸೂರ್ಯಕುಮಾರ್ ಯಾದವ್ ವಿಶ್ವಕಪ್ ಗೆಲುವಿನ ಕನಸು ನನಸಾಗಲಿದೆ. 

ಇದನ್ನೂ ಓದಿ: ದೆಹಲಿಯ ಇಂಡಿಯಾ ಎಐ ಇಂಫ್ಯಾಕ್ಟ್ ಶೃಂಗದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಂದ ಶರ್ಟ್ ಬಿಚ್ಚಿ ಪ್ರತಿಭಟನೆ!

team india (22)

ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಯುಎಸ್​ಎ, ಪಾಕಿಸ್ತಾನ, ನಮೀಬಿಯಾ ಮತ್ತು ನದರ್​ಲೆಂಡ್ ತಂಡಗಳನ್ನ ಮಣಿಸಿತ್ತು. ಎಲ್ಲಾ ನಾಲ್ಕೂ ಪಂದ್ಯಗಳನ್ನ ಗೆದ್ದು, ಗ್ರೂಪ್ 'ಎ'ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು. ಗ್ರೂಪ್ ಟಾಪ್ ಆಗಿ ಸೂಪರ್ ಏಯ್ಟ್​ಗೆ ಎಂಟ್ರಿ ಕೊಟ್ಟಿರುವ ಭಾರತಕ್ಕೆ ಬಲಿಷ್ಟ ತಂಡಗಳು ಎದುರಾಗಲಿವೆ. 

Advertisment

SKY ಪಡೆಗೆ 3 ಸವಾಲು

ಸೂಪರ್-8​ ಸ್ಟೇಜ್​ನಲ್ಲಿ ಟೀಮ್ ಇಂಡಿಯಾ ಹಾದಿ ಅಷ್ಟು ಸುಲಭವಾಗಿರೋದಿಲ್ಲ. ಯಾಕಂದ್ರೆ ಇಲ್ಲಿ ಟೀಮ್ ಇಂಡಿಯಾಕ್ಕೆ ಎದುರಾಳಿಗಳು ಯುಎಸ್​ಎ, ಅಮೆರಿಕಾ, ನದರ್​ಲೆಂಡ್​​​​ನಂತಹ ತಂಡಗಳಲ್ಲ. ಈ ಸ್ಟೇಜ್​ನಲ್ಲಿ ಸೂರ್ಯಕುಮಾರ್ ಪಡೆ, ರನ್​ಭೂಮಿಯಲ್ಲಿ ಬಲಿಷ್ಟ ತಂಡಗಳ ಜೊತೆ ಗೆಲುವಿಗಾಗಿ ಜಿದ್ದಾಜಿದ್ದಿನ ಫೈಟ್ ಮಾಡಬೇಕಿದೆ. ಜೊತೆಗೆ ಆ 3 ಸವಾಲುಗಳನ್ನ ಗೆಲ್ಲಲೇಬೇಕಿದೆ.

ಇದನ್ನೂ ಓದಿ:ಜಿಂಬಾಬ್ವೆ ಆಟಕ್ಕೆ ಬೆರಗಾದ ಕ್ರಿಕೆಟ್ ಲೋಕ.. ಆಗ ಆಸ್ಟ್ರೇಲಿಯಾ, ಈಗ ಲಂಕಾ ದಹನ..!

team india (13)

ಸೂಪರ್​​-8​ನಲ್ಲಿ ಟೀಮ್ ಇಂಡಿಯಾದ ಮೊದಲ ಎದುರಾಳಿ ಸೌತ್ ಆಫ್ರಿಕಾ. ಫೆಬ್ರವರಿ 22ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯವನ್ನ ಟೀಮ್ ಇಂಡಿಯಾ ಗೆಲ್ಲಲೇಬೇಕಿದೆ. ಗೂಪ್ ‘ಡಿ’ಯಲ್ಲಿ ಆಡಿರೋ ಎಲ್ಲಾ ಲೀಗ್ ಪಂದ್ಯಗಳನ್ನ ಗೆದ್ದಿರುವ ಆಫ್ರಿಕಾ, ಸೂರ್ಯಕುಮಾರ್ ಯಾದವ್ ಪಡೆಗೆ ಟಫ್ ಫೈಟ್​ ನೀಡಲಿದೆ.

Advertisment

ಫೆಬ್ರವರಿ 26, ಜಿಂಬಾಬ್ವೆ ವಿರುದ್ಧ ಸೂರ್ಯ ಪಡೆ ಸೆಣಸಾಟ

ಸೂರ್ಯಕುಮಾರ್ ಯಾದವ್ ಪಡೆಯ 2ನೇ ಎದುರಾಳಿ ಜಿಂಬಾಬ್ವೆ. ಫೆಬ್ರವರಿ 26ರಂದು ಚೆನ್ನೈನಲ್ಲಿ ನಡೆಯೋ ಪಂದ್ಯದಲ್ಲಿ ಭಾರತ ಜಿಂಬಾಬ್ವೆ ತಂಡದ ವಿರುದ್ಧ ಹೋರಾಡಲಿದೆ. ಈಗಾಗಲೇ ಲೀಗ್ ಹಂತದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ಕೊಟ್ಟಿರುವ ಜಿಂಬಾಬ್ವೆ, ಚೆಪಾಕ್​​ನಲ್ಲಿ ಮತ್ತೊಮ್ಮೆ ಎದುರಾಳಿ ತಂಡಕ್ಕೆ ಆಘಾತ ನೀಡುವ ತವಕದಲ್ಲಿದೆ.​

ಟೀಮ್ ಇಂಡಿಯಾಗೆ ಕೆರಿಬಿಯನ್ ಚಾಲೆಂಜ್​​​​

ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಟೀಮ್ ಇಂಡಿಯಾ, ಟಿ-20 ಸ್ಪೆಷಲಿಸ್ಟ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಗೆಲುವಿಗಾಗಿ ಕಾದಾಡಲಿದೆ. ಮಾರ್ಚ್ 1 ರಂದು ನಡೆಯಲಿರುವ ಈ ಪಂದ್ಯ ಅಭಿಮಾನಿಗಳಿಗೆ ಭಾರೀ ಕುತೂಹಲ ಕೆರಳಿಸಿದೆ. ಎರಡೂ ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದಾಗಿರೋದ್ರಿಂದ ಆನ್​ಫೀಲ್ಡ್​​ನಲ್ಲಿ ಒಳ್ಳೆ ಫೈಟ್​ಅಂತೂ ನಿರೀಕ್ಷಿಸಲಾಗಿದೆ.

ಏನೇ ಇರಲಿ. ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ರೈಟ್ ಡೈರೆಕ್ಷನ್​ನಲ್ಲಿ ಸಾಗ್ತಿದೆ. ಅತ್ಯುತ್ತಮ ಗೇಮ್​ಪ್ಲಾನ್ ಸ್ಟ್ರಾಟಜಿ ಮತ್ತು ಟ್ಯಾಕ್ಟಿಕ್ಸ್ ಮಾಡ್ತಿರುವ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ಟೀಂ ಮ್ಯಾನೇಜ್ಮೆಂಟ್, ಸೂಪರ್-8 ಗೆದ್ದು ಸೆಮೀಸ್​​ ಹಾದಿ ಹುಡುಕುತ್ತಿದ್ದಾರೆ.

Advertisment

ಇದನ್ನೂ ಓದಿ: ದೇಶಿ ಕ್ರಿಕೆಟ್​ನಲ್ಲಿ ಸ್ಮರಣ್​ ರವಿಚಂದ್ರನ್​ ಶೈನಿಂಗ್.. ಸೆಮಿಸ್​ ಸಮರದಲ್ಲಿ ಡಬಲ್ ಧಮಾಕಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 world cup Team India
Advertisment
Advertisment
Advertisment