/newsfirstlive-kannada/media/media_files/2026/01/31/cj-roy-and-hanumanta-lamani-2026-01-31-13-01-51.jpg)
ಹಾವೇರಿ: ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಡಾ.ಸಿ.ಜೆ.ರಾಯ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ಬಿಗ್‌ಬಾಸ್ ಸೀಸನ್ 11ರ ವಿಜೇತ ಹನುಮಂತ ಲಮಾಣಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತಮ್ಮ ಸ್ವಗ್ರಾಮ ಚಿಲ್ಲೂರುಬಡ್ನಿಯಲ್ಲಿ ಮಾತನಾಡಿದ ಅವರು, ರಾಯ್ ಅವರೊಂದಿಗಿನ ಆತ್ಮೀಯ ಒಡನಾಟವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.
ಮನೆ ಗೃಹಪ್ರವೇಶಕ್ಕೆ ಬರುವುದಾಗಿ ಹೇಳಿದ್ದರು
ಡಾ. ಸಿ.ಜೆ. ರಾಯ್ ಅವರ ಸಾವಿನ ಸುದ್ದಿ ಕೇಳಿ ನನಗೆ ಬಹಳ ದುಃಖವಾಗಿದೆ. ಅವರು ನನಗೆ ಎರಡು ಬಾರಿ ದೊಡ್ಡ ಮೊತ್ತದ ಬಹುಮಾನ ನೀಡಿದ್ದರು. ಪ್ರತಿ ಬಾರಿ ಭೇಟಿಯಾದಾಗಲೂ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. 'ಹನುಮಂತ, ನಿಮ್ಮೂರಿಗೆ ಬರುತ್ತೇನೆ, ಹಳ್ಳಿ ಜೀವನವನ್ನು ನೋಡಬೇಕು ಎನ್ನುವ ಆಸೆ ಇದೆ' ಎಂದು ಹೇಳಿದ್ದರು. ಅಷ್ಟೇ ಅಲ್ಲ, 'ನೀನು ಮೊದಲು ಒಂದು ಒಳ್ಳೆ ಮನೆ ಕಟ್ಟಿಸು, ನಿನ್ನ ಮನೆಯ ಗೃಹಪ್ರವೇಶಕ್ಕೆ ನನ್ನನ್ನು ಕರಿ, ನಾನು ಖಂಡಿತ ಬರುತ್ತೇನೆ' ಎಂದು ಭರವಸೆ ನೀಡಿದ್ದರು. ಆದರೆ ಈಗ ಅವರು ನಮ್ಮನ್ನೆಲ್ಲ ಅಗಲಿ ಹೋಗಿರುವುದು ಬೇಜಾರು ತಂದಿದೆ" ಎಂದು ಹನುಮಂತ ಭಾವುಕರಾದರು.
ಇದನ್ನೂ ಓದಿ: ಕುಸಿದ ಚಿನ್ನ, ಬೆಳ್ಳಿ! ಚಿನ್ನದ ರೇಟ್ 20 ಸಾವಿರ ಡೌನ್; ಬೆಳ್ಳಿ 1.06 ಲಕ್ಷ ಇಳಿದು 2.93 ಲಕ್ಷ ರೂ ತಲುಪಿದೆ..
/filters:format(webp)/newsfirstlive-kannada/media/media_files/2026/01/31/cj-roy-5-2026-01-31-12-29-06.jpg)
ಪ್ಲಾಟ್ ಬದಲಿಗೆ ಹಣ ನೀಡಿದ್ದರು
ರಿಯಾಲಿಟಿ ಶೋಗಳ ಮೂಲಕ ಹನುಮಂತನಿಗೆ ಕಾನ್ಫಿಡೆಂಟ್ ಗ್ರೂಪ್ ವತಿಯಿಂದ ಪ್ಲಾಟ್ ಬಹುಮಾನವಾಗಿ ಘೋಷಣೆಯಾಗಿತ್ತು. ಆದರೆ ಹನುಮಂತನ ಕುಟುಂಬದ ಮನವಿಯಂತೆ ಅವರು ಸಹಕರಿಸಿದ್ದರು. "ನಮಗೆ ಬೆಂಗಳೂರಿನಲ್ಲಿ ಇರಲು ಸಾಧ್ಯವಿಲ್ಲ, ಹಳ್ಳಿಯಲ್ಲೇ ಇರುತ್ತೇವೆ ಎಂದು ಹೇಳಿದ್ದಕ್ಕೆ, ಅವರು ಪ್ಲಾಟ್ ಬದಲಾಗಿ ನಮಗೆ ಅದರ ಹಣವನ್ನು ನೀಡಿದ್ದರು. ಆ ಹಣ ನಮ್ಮ ಜೀವನಕ್ಕೆ ತುಂಬಾ ಸಹಾಯವಾಯಿತು" ಎಂದು ಹನುಮಂತ ನೆನಪಿಸಿಕೊಂಡರು.
ತಂದೆ-ತಾಯಿ ಕಂಡು ಖುಷಿಪಡುತ್ತಿದ್ದ ರಾಯ್
"ನನ್ನ ತಂದೆ-ತಾಯಿಯನ್ನು ಕಂಡರೆ ರಾಯ್ ಅವರಿಗೆ ಬಹಳ ಗೌರವ ಮತ್ತು ಪ್ರೀತಿ ಇತ್ತು. ಅವರನ್ನು ನೋಡಿದಾಗಲೆಲ್ಲ ತುಂಬಾ ಖುಷಿಪಡುತ್ತಿದ್ದರು. ಹಳ್ಳಿ ಜನರ ಸರಳತೆಯನ್ನು ಅವರು ಇಷ್ಟಪಡುತ್ತಿದ್ದರು. ಅಂತಹ ದೊಡ್ಡ ವ್ಯಕ್ತಿ ಇಂದು ನಮ್ಮೊಂದಿಗಿಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹನುಮಂತ ಲಮಾಣಿ ತಿಳಿಸಿದರು.
ಒಟ್ಟಾರೆಯಾಗಿ, ಉದ್ಯಮ ಲೋಕದ ದಿಗ್ಗಜರಾಗಿದ್ದರೂ ಒಬ್ಬ ಹಳ್ಳಿ ಪ್ರತಿಭೆಯ ಬೆನ್ನಿಗೆ ನಿಂತು ಪ್ರೋತ್ಸಾಹಿಸುತ್ತಿದ್ದ ಡಾ. ಸಿ.ಜೆ. ರಾಯ್ ಅವರ ಗುಣವನ್ನು ಹನುಮಂತ ಕೊಂಡಾಡಿದ್ದಾರೆ.
ಇದನ್ನೂ ಓದಿ: ರಾಯ್ ಕೇಸ್​ನ ಹಿಂದೆ ಅಂಡರ್‌ವರ್ಲ್ಡ್, ಹನಿಟ್ರ್ಯಾಪ್ ಲಿಂಕ್? ದುಬೈ ನಂಟು ದಿಗಿಲು ಹುಟ್ಟಿಸಿದ ಅನುಮಾನ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us