50 ಕುಟುಂಬಕ್ಕೆ ಒಂದೇ ನಲ್ಲಿ! 5 ವರ್ಷವಾದರೂ ಹನಿ ನೀರು ಕಾಣದ ‘ಮನೆ ಮನೆಗೆ ಗಂಗೆ’

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ‘ಹರ್ ಘರ್ ಜಲ್’ (ಜಲ ಜೀವನ್ ಮಿಷನ್) ಯೋಜನೆ ಹಾವೇರಿ ಜಿಲ್ಲೆಯಲ್ಲಿ ಹಳ್ಳ ಹಿಡಿದಿದೆ.

author-image
Ganesh Kerekuli
haveri water
Advertisment

ಹಾವೇರಿ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ‘ಹರ್ ಘರ್ ಜಲ್’ (ಜಲ ಜೀವನ್ ಮಿಷನ್) ಯೋಜನೆ ಹಾವೇರಿ ಜಿಲ್ಲೆಯಲ್ಲಿ ಹಳ್ಳ ಹಿಡಿದಿದೆ. ಕಾಮಗಾರಿ ಮುಗಿದು ಐದು ವರ್ಷ ಕಳೆದರೂ ನಲ್ಲಿಗಳಲ್ಲಿ ಹನಿ ನೀರು ಬಾರದೇ, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಯೋಜನೆ ಬಂತು, ನೀರು ಬರಲಿಲ್ಲ!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ನೆಶ್ವಿ ಗ್ರಾಮದಲ್ಲಿ ಈ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾಮದ 600ಕ್ಕೂ ಹೆಚ್ಚು ಮನೆಗಳಿಗೆ ‘ಮನೆ ಮನೆಗೆ ಗಂಗೆ’ ಯೋಜನೆಯಡಿ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಪೈಪ್‌ಲೈನ್ ಹಾಕಿ, ನಲ್ಲಿ ಜೋಡಿಸಿ 5 ವರ್ಷ ಕಳೆದರೂ, ಇಲ್ಲಿಯವರೆಗೂ ಜನರ ಮನೆಗೆ ನೀರು ಬಂದಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಿದ ನಲ್ಲಿಗಳು ನೀರಿಲ್ಲದೇ ತುಕ್ಕು ಹಿಡಿಯುತ್ತಿವೆ.

50 ಕುಟುಂಬಗಳಿಗೆ ಒಂದೇ ದಿಕ್ಕು

ಮನೆ ಬಾಗಿಲಿಗೆ ನಲ್ಲಿ ಇದ್ದರೂ, ನೀರಿಗಾಗಿ ಸಾರ್ವಜನಿಕ ನಳಗಳನ್ನೇ ಆಶ್ರಯಿಸಬೇಕಾದ ದುಸ್ಥಿತಿ ಗ್ರಾಮಸ್ಥರದ್ದು. ‘ಗ್ರಾಮದಲ್ಲಿ 50 ರಿಂದ 100 ಕುಟುಂಬಗಳಿಗೆ ಒಂದೇ ಸಾರ್ವಜನಿಕ ನಲ್ಲಿ ಇದೆ. ಅದರಲ್ಲಿಯೂ ಕೇವಲ ಒಂದು ಗಂಟೆ ನೀರು ಬರುತ್ತದೆ. ಅಷ್ಟರಲ್ಲೇ ಇಡೀ ಓಣಿಯ ಜನರು ನೀರು ಹಿಡಿಯಲು ಮುಗಿಬೀಳಬೇಕು. ಇದು ನಿತ್ಯದ ಗೋಳಾಗಿದೆ’ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಜೈಲು ವಾಸಕ್ಕೆ ಸೊರಗಿ ಹೋದ ದರ್ಶನ್.. ಹುಟ್ಟು ಹಬ್ಬದ ದಿನ ಕೋರ್ಟ್​​ಗೆ ವಿಶೇಷ ಮನವಿ..!

haveri water (1)

ನೀರು ಬರದೇ NOC ಕೊಟ್ಟಿದ್ದೇಗೆ?

ಗುತ್ತಿಗೆದಾರರು ಕಾಮಗಾರಿ ಮುಗಿಸಿ ಐದು ವರ್ಷಗಳೇ ಕಳೆದಿವೆ. ವಿಚಿತ್ರವೆಂದರೆ, ಮನೆಗಳಿಗೆ ನೀರು ತಲುಪದಿದ್ದರೂ ಗ್ರಾಮ ಪಂಚಾಯಿತಿಯಿಂದ ಗುತ್ತಿಗೆದಾರರಿಗೆ ‘ನಿರಾಕ್ಷೇಪಣಾ ಪತ್ರ’ (NOC) ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ನೀರು ಬರದೇ ಎನ್‌ಒಸಿ ಹೇಗೆ ಕೊಟ್ಟರು? ಗುತ್ತಿಗೆದಾರರು, ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಹೊಂದಾಣಿಕೆಯಿಂದಲೇ ಈ ಅವ್ಯವಹಾರ ನಡೆದಿದೆ. ಸರ್ಕಾರಿ ಹಣ ಪೋಲಾಗಿದೆ’ ಎಂದು ಗ್ರಾಮಸ್ಥರಾದ ಬೈರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಧೋನಿಯನ್ನ ನಾಯಕತ್ವದಿಂದ ಇಳಿಸಲು ಡ್ರಾಮಾ? ಮಾಹಿ ಮಾತು ಕೇಳಿ ಸೆಲೆಕ್ಟರ್ಸ್ ಶಾಕ್ ಆಗಿದ್ದೇಗೆ?

haveri water (2)

ಅಧಿಕಾರಿಗಳೇ ಉತ್ತರಿಸಿ..

ಜನಪ್ರತಿನಿಧಿಗಳ ಮನೆ ಮುಂದೆ ಮಾತ್ರ ನೀರು ಬರುತ್ತಿದೆ, ಸಾಮಾನ್ಯ ಜನರಿಗೆ ಇಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು, ಮನೆ ಮನೆಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 

ಇದನ್ನೂ ಓದಿ: ಹುಟ್ಟುಹಬ್ಬದಂದೇ ವಿಧಿಯ ಅಟ್ಟಹಾಸ.. ಬರ್ತ್‌ಡೇ ಪಾರ್ಟಿ ಮುಗಿಸಿ ಬರುವಾಗ ದುರಂತ ಅಂತ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Haveri news water problem
Advertisment