Advertisment

ಧೋನಿಯನ್ನ ನಾಯಕತ್ವದಿಂದ ಇಳಿಸಲು ಡ್ರಾಮಾ? ಮಾಹಿ ಮಾತು ಕೇಳಿ ಸೆಲೆಕ್ಟರ್ಸ್ ಶಾಕ್ ಆಗಿದ್ದೇಗೆ?

ಭಾರತೀಯ ಕ್ರಿಕೆಟ್​​ನಲ್ಲಿ ​ಸ್ಟಾರ್ ಕಲ್ಚರ್ ಹೊಸದೇನಲ್ಲ. ಆ ಸೂಪರ್​ಸ್ಟಾರ್ ಪಟ್ಟ ಕಾಪಾಡಿಕೊಳ್ಳೋದು ಅಷ್ಟು ಸುಲಭವಲ್ಲ. ಇಂದು ಹೀರೋ ಆಗಿದ್ದವರು ನಾಳೆ ಝೀರೋ ಆಗಿ ಬಿಡ್ತಾರೆ.

author-image
Ganesh Kerekuli
MS Dhoni (1)
Advertisment
  • 1 ಗಂಟೆ ಧೋನಿ ಬ್ಯಾಟಿಂಗ್, ಸೆಲೆಕ್ಟರ್ಸ್ ಕಾದಿದ್ದೇಕೆ?
  • ಧೋನಿಗೆ ಆಯ್ಕೆ ಸಮಿತಿ ಮುಖ್ಯಸ್ಥ ಹೇಳಿದ್ದೇನು?
  • ನಾಯಕತ್ವದಿಂದ ಕೆಳಗಿಳಿಯಲು ಧೋನಿಗೆ ಮನವಿ

ಭಾರತೀಯ ಕ್ರಿಕೆಟ್​​ನಲ್ಲಿ ​ಸ್ಟಾರ್ ಕಲ್ಚರ್ ಹೊಸದೇನಲ್ಲ. ಆ ಸೂಪರ್​ಸ್ಟಾರ್ ಪಟ್ಟ ಕಾಪಾಡಿಕೊಳ್ಳೋದು ಅಷ್ಟು ಸುಲಭವಲ್ಲ. ಇಂದು ಹೀರೋ ಆಗಿದ್ದವರು ನಾಳೆ ಝೀರೋ ಆಗಿ ಬಿಡ್ತಾರೆ. ಸುನೀಲ್ ಗವಾಸ್ಕರ್​​ ಕಪಿಲ್​ ದೇವ್​ನಿಂದ ಹಿಡಿದು ಮೊನ್ನೆ ಮೊನ್ನೆ ನಾಯಕತ್ವಕ್ಕೆ ಗುಡ್​​​ಬೈ ಹೇಳಿದ್ದ ರೋಹಿತ್ ಶರ್ಮಾ ಎಲ್ಲರೂ ಇದನ್ನೆಲ್ಲಾ ಅನುಭವಿಸಿದವರೇ. ಮಾಜಿ ನಾಯಕ ಎಂ.ಎಸ್.ಧೋನಿ ವಿಚಾರದಲ್ಲೂ ಇಂತಹದೊಂದು ಘಟನೆ ನಡೆದಿದೆ. 

Advertisment

ಅದು 9 ವರ್ಷಗಳ ಹಿಂದಿನ ಕಥೆ. ಅಂದು ಟೀಮ್ ಇಂಡಿಯಾ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿಯೇ, ಈ ಕಥೆಯ ನಾಯಕ. ಏಕದಿನ ವಿಶ್ವಕಪ್, ಟಿ-20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲಾ ಐಸಿಸಿ ಟ್ರೋಫಿಗಳನ್ನ ಗೆದ್ದಿದ್ದ ಧೋನಿ ತನ್ನ ಕ್ರಿಕೆಟ್​​​ ಕರಿಯರ್​ನಲ್ಲಿ ಎಲ್ಲರಂತೆ ಟಫ್ ಟೈಮ್ ಎದುರಿಸಬೇಕಾಯ್ತು. ಭಾರತ ತಂಡದ ಸರ್ವ ಶ್ರೇಷ್ಟ ನಾಯಕನಾಗಿ ಮೆರೆದಿದ್ದ ಧೋನಿಗೂ ಈ ಸ್ಥಿತಿ ಬರುತ್ತೆ ಅಂತ ಯಾರೂ ಊಹಿಸಲಿರಲಿಲ್ಲ.  

ಇದನ್ನೂ ಓದಿ: ಐಟಿ ಕಂಪನಿ ವಿಪ್ರೋದಲ್ಲಿ ಮಾರ್ಚ್ 1 ರಿಂದ ವೇತನ ಹೆಚ್ಚಳ: ಉದ್ಯೋಗಿಗಳಿಗೆ ಎಐ ಸವಾಲು ಮಧ್ಯೆ ವೇತನ ಹೆಚ್ಚಳ!

MS Dhoni

2007ರಲ್ಲಿ ಟೀಮ್ ಇಂಡಿಯಾ ಸಾರಥ್ಯ ವಹಿಸಿಕೊಂಡಿದ್ದ ಧೋನಿ ಸುಮಾರು 10 ವರ್ಷಗಳ ಕಾಲ ತಂಡದ ಯಶಸ್ವಿ ನಾಯಕನಾಗಿ ಸೇವೆ ಸಲ್ಲಿಸಿದ್ರು. ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 3 ಐಸಿಸಿ ಟ್ರೋಫಿಗಳನ್ನ ಮಾತ್ರ ಗೆದ್ದಿಲ್ಲ. ಟೆಸ್ಟ್ ಱಂಕಿಂಗ್​ನಲ್ಲಿ ನಂಬರ್.1 ಪಟ್ಟವನ್ನೂ ಅಲಂಕರಿಸಿತ್ತು. ಕಪಿಲ್​​​​​​​​​​ ದೇವ್, ಮೊಹಮ್ಮದ್ ಅಜರುದ್ದಿನ್, ಸೌರವ್ ಗಂಗೂಲಿಯಂತಹ ಶ್ರೇಷ್ಟ ನಾಯಕರನ್ನೇ ಹಿಂದಿಕ್ಕಿದ್ದ ಧೋನಿ, ಕೊನೆಗೂ ಸದ್ದಿಲ್ಲದೇ ಕ್ಯಾಪ್ಟೆನ್ಸಿ ತ್ಯಜಿಸಿದ್ರು. ಆದ್ರೆ ಧೋನಿಯ ಮೌನದ ಹಿಂದೆ ಸಾಕಷ್ಟು ಕಥೆಗಳಿತ್ತು. 

Advertisment

2017ರಲ್ಲಿ ಟೀಮ್ ಇಂಡಿಯಾ ಸೆಲೆಕ್ಟರ್ಸ್, ಧೋನಿಯನ್ನ ನಾಯಕತ್ವದಿಂದ ಕೆಳಗಿಸಲು ನಿರ್ಧರಿಸಿದ್ರು. ಆ ವಿಚಾರವನ್ನ ಧೋನಿಗೆ ಹೇಳೋದೇಗೆ ಅಂತ ಸಾಕಷ್ಟು ಚಿಂತೆಯಲ್ಲಿ ಮುಳುಗಿದ್ರು. ಒಂದು ದಿನ ಧೋನಿ ಬ್ಯಾಟಿಂಗ್ ಅಭ್ಯಾಸ ಮಾಡ್ತಿದ್ರು. ಸುಮಾರು ಗಂಟೆ ಕಾಲ ಧೋನಿ ಪ್ರಾಕ್ಟೀಸ್ ನಡೆಸ್ತಿದ್ರು. ಆಗ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಮತ್ತು ಆಯ್ಕೆ ಸಮಿತಿಯ ಸಮಸ್ಯೆ ಜತಿನ್ ಪರಾಂಜಪೆ, ಧೋನಿ ಜೊತೆ ಮಾತನಾಡಲು ಒಂದು ಗಂಟೆ ಕಾದುನಿಂತರು. ನಂತರ ಗೌರವಾನ್ವಿತವಾಗಿ ನಾಯಕತ್ವದಿಂದ ಕೆಳಗಿಯಲು ಮನವಿ ಮಾಡಿಕೊಂಡ್ರು.  

ಇದನ್ನೂ ಓದಿ:ಫೋನ್ ಬ್ಯಾನ್, ಸ್ಟಾರ್ ನಟರಿಗಿಲ್ಲ ಆಹ್ವಾನ -ರಶ್ಮಿಕಾ ಮದುವೆ ರೂಲ್ಸ್ ಭಾರೀ ಚರ್ಚೆ..!

ಆಯ್ಕೆ ಸಮಿತಿಯ ಮುಖ್ಯಸ್ಥ ಧೋನಿ ಬಳಿ ಹೋಗಿ ನಯವಾಗಿ ಮಾತನಾಡಿದ್ರು. ತಮ್ಮ ಫ್ಯೂಚರ್ ಪ್ಲಾನ್ ಅನ್ನ ಧೋನಿಗೆ ತಿಳಿಸಿದ್ರು. ಎಂ.ಎಸ್​.ಕೆ ಪ್ರಸಾದ್ ಮಾತು ಕೇಳಿದ ಬಳಿಕ ಧೋನಿ, ನಾನೇನು ಮಾಡಬೇಕು ತಿಳಿಸಿ, ಅದನ್ನೇ ಮಾಡುತ್ತೇನೆ ಅಂತ ಹೇಳಿದ್ರಂತೆ. ಅದಕ್ಕೆ ಪ್ರತಿಕ್ರಿಯಿಸಿದ ಎಂಎಸ್​ಕೆ, ನೀನು ಬರವಣಿಗೆಯಲ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ಬರೆದು ಕೊಡಬೇಕು ಅಂದಿದ್ದಕ್ಕೆ, ಧೋನಿ ಅದೇ ದಿನ ರಾತ್ರಿ ಆಯ್ಕೆ ಸಮಿತಿ ಮುಖ್ಯಸ್ಥನಿಗೆ ಇ-ಮೇಲ್ ಮೂಲಕ, ನಾಯಕತ್ವ ತ್ಯಜಿಸುತ್ತಿರುವಾಗಿ ತಿಳಿಸಿದ್ರು. ತೆರೆ ಹಿಂದೆ ಇಷ್ಟೆಲ್ಲಾ ನಡೆಯಿತು. ಧೋನಿ ದೇಶಕ್ಕಾಗಿ ಮತ್ತು ತಂಡಕ್ಕಾಗಿ ನಾಯಕತ್ವವನ್ನ ತ್ಯಾಗಮಾಡಿದ್ರು. ಅಂದು ಧೋನಿ ನಾಯಕತ್ವದಿಂದ ಕೆಳಗಿಳಿದಾಗ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಫುಲ್ ಗರಂ ಆಗಿದ್ರು.  

Advertisment

ನಾಯಕತ್ವದಿಂದ ಕೆಳಗಿಳಿಯಲು ಧೋನಿಗೆ ಮನವಿ

ಧೋನಿ ನಾಯಕತ್ವದಿಂದ ಕೆಳಗಿಳಿಯುವ ಮುನ್ನ ಕೆಲ ಮಾತುಗಳನ್ನ ಹೇಳಿದ್ರು. ಧೋನಿ ಮಾತುಗಳನ್ನ ಕೇಳಿ ಆಯ್ಕೆ ಸಮಿತಿ ಮುಖ್ಯಸ್ಥ  ಮತ್ತು ಸದಸ್ಯರು, ಮೂಕವಿಸ್ಮಿತರಾದ್ರು. ಅಂದು ಧೋನಿ ಹೇಳಿದ್ದೇನು ಗೊತ್ತಾ? ನೀವ್ಯಾರು ತಲೆಕೆಡಿಸಿಕೊಳ್ಳಬೇಡಿ. ನಾನು ವಿರಾಟ್ ಕೊಹ್ಲಿ ಜೊತೆ ಇರುತ್ತೇನೆ. ಆತನಿಗೆ ನನ್ನ ಅನುಭವವನ್ನ ಧಾರೆ ಎರೆಯುತ್ತೇನೆ. ಕೊಹ್ಲಿ ಜೊತೆಗೂಡಿ ಉತ್ತಮ ತಂಡವನ್ನೇ ಕಟ್ಟುತ್ತೇವೆ ಅಂತ ಧೋನಿ ಸೆಲೆಕ್ಟರ್ಸ್​ಗೆ ತಿಳಿಸಿದ್ರು. ಸೆಲೆಕ್ಟರ್ಸ್​ ಧೋನಿ ಮಾತು ಕೇಳಿ ಸೈಲೆಂಟ್ ಆಗ್ಬಿಟ್ರು. 

ಇದನ್ನೂ ಓದಿ: ನಟಿ ರಶ್ಮಿಕಾ ಮಂದಣ್ಣ-ವಿಜಯದೇವರಕೊಂಡ ವಿವಾಹಕ್ಕೆ ಪೋನ್‌ ಗೆ ನಿರ್ಬಂಧ- ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ

ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಕೇವಲ ಸಹ ಆಟಗಾರರು ಮಾತ್ರವಲ್ಲ. ಇಬ್ಬರ ಮಧ್ಯೆ ಉತ್ತಮ  ಬಾಂಡಿಂಗ್ ಇದೆ. ಅಂಡರ್​ಸ್ಟ್ಯಾಂಡಿಂಗ್ ಇದೆ. ಕೊಹ್ಲಿ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ ಅದಕ್ಕೆ ಪರೋಕ್ಷವಾಗಿ ಧೋನಿ ಕಾರಣ. ಧೋನಿ ನಾಯಕನಾಗಿದ್ದಾಗ ಕೊಹ್ಲಿಯನ್ನ ಕಣ್ಣಲ್ಲಿ ಕಣ್ಣಿಟ್ಟು ಪ್ರೋತ್ಸಾಹಿಸಿದ್ರು ಮತ್ತು ಬೆಳೆಸಿದ್ರು. ಕೊಹ್ಲಿ ಇಂದಿಗೂ ತನ್ನ ಸಕ್ಸಸ್​​ ಸ್ಟೋರಿ ಬಗ್ಗೆ ಮಾತನಾಡುವಾಗ, ಧೋನಿ ಹೆಸರು ಹೇಳದೇ ಇರೋದಿಲ್ಲ. ಒಂದೇ ಮಾತಲ್ಲಿ ಹೇಳೋದಾದ್ರೆ ಧೋನಿ, ಕೊಹ್ಲಿ ಇಬ್ಬರು ಕೇವಲ ಸಹ ಆಟಗಾರರು ಮಾತ್ರವಲ್ಲ. ಸಹೋದರರಿಗಿಂತ ಹೆಚ್ಚು.

Advertisment

ಧೋನಿ ಕೇವಲ ಗ್ರೇಟ್ ಪ್ಲೇಯರ್ ಗ್ರೇಟ್ ಕ್ಯಾಪ್ಟನ್ ಮಾತ್ರವಲ್ಲ. ಧೋನಿ ಗ್ರೇಟ್ ಹ್ಯೂಮೆನ್ ಬಿಯಿಂಗ್ ಕೂಡ ಹೌದು. ಆನ್​ಫೀಲ್ಡ್ ಮತ್ತು ಆಫ್ ದ ಫೀಲ್ಡ್​​ನಲ್ಲಿ ಸದಾ ಕೂಲ್ ಆಗಿರುವ ಮಾಹಿ ಕಠಿಣ ಪರಿಸ್ಥಿತಿಗಳಲ್ಲೂ ತಾಳ್ಮೆ ಕಳೆದುಕೊಳ್ಳೋದಿಲ್ಲ. ಧೋನಿಗೆ ಹ್ಯಾಟ್ಸ್​ ಆಫ್.

ಇದನ್ನೂ ಓದಿ:ಅಪರಿಚಿತರಿಗೆ ಕಿಡ್ನಿದಾನ ಮಾಡಿದ ಬೆಂಗಳೂರಿನ ವೈದ್ಯೆ!! : ಹೈಕೋರ್ಟ್ ಮೆಟ್ಟಿಲೇರಿ ಕಿಡ್ನಿದಾನಕ್ಕೆ ಅನುಮತಿ ಪಡೆದ ವೈದ್ಯೆ!


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mahendra Singh Dhoni MS Dhoni
Advertisment
Advertisment
Advertisment