/newsfirstlive-kannada/media/media_files/2025/09/12/bdr_man-2025-09-12-18-10-27.jpg)
ಬೀದರ್: ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದಲ್ಲಿ ಹೆಂಡತಿ, ಮಕ್ಕಳ ಬಿಟ್ಟು ಹೋಗಿದ್ದಕ್ಕೆ ಮನನೊಂದು ಮಾಂಜ್ರಾ ನದಿಗೆ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನಿನ್ನೆಯಿಂದ ಶೋಧಕಾರ್ಯ ನಡೆಸಲಾಗಿತ್ತು. ಇಂದು ಹಲಸಿತೂಗಾಂವ್ ಗ್ರಾಮದ ಬಳಿಯ ನದಿಯಲ್ಲಿ ದೇಹ ಸಿಕ್ಕಿದೆ.
ಹಲಸಿತೂಗಾಂವ್ ಗ್ರಾಮದ ನಿವಾಸಿ ಪ್ರಭಾಕರ್ ಸೂರ್ಯವಂಶಿ (38) ನದಿಗೆ ಹಾರಿ ಜೀವ ಬಿಟ್ಟವರು. ನಿನ್ನೆ ವ್ಯಕ್ತಿ ನದಿಗೆ ಹಾರುತ್ತಿರುವ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿತ್ತು. ಕೆಲ ವರ್ಷಗಳಿಂದ ಹೆಂಡತಿ ಮಕ್ಕಳು ಬಿಟ್ಟು ಹೋಗಿದ್ದಕ್ಕೆ ಮನನೊಂದು ಕುಡಿತದ ಚಟಕ್ಕೆ ದಾಸನಾಗಿದ್ದನು. ಹೀಗಾಗಿ ಮಾಂಜ್ರಾ ನದಿಗೆ ಹಾರಿದ್ದನು. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ:ನನ್ನ ಮಗನನ್ನ ಲವ್ ಮಾಡು ಅಂತ ನಾನು ಹೇಳಿದ್ನಾ.. ಸೊಸೆ ಬಗ್ಗೆ ಎಸ್ ನಾರಾಯಣ್ ಹೇಳಿದ್ದೇನು?
ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ವ್ಯಕ್ತಿಗಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ನಿನ್ನೆ ಸಂಜೆಯಿಂದಲೇ ಶೋಧ ಕಾರ್ಯ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಇಂದು ಮಧ್ಯಾಹ್ನ ಪ್ರಭಾಕರ್ ಸೂರ್ಯವಂಶಿಯ ಮೃತದೇಹ ಪತ್ತೆಯಾಗಿದೆ. ಮೃತ ಪ್ರಭಾಕರ್ ಶವದ ಎದುರು ಪತ್ನಿ, ಮಕ್ಕಳು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹವನ್ನ ಹುಲಸೂರ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ