/newsfirstlive-kannada/media/media_files/2025/10/09/bgm-murder-2-2025-10-09-10-47-23.jpg)
ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಪತ್ನಿಯ ಜೀವ ತೆಗೆದ ಪಾಪಿ ಪತಿ, ಶವವನ್ನು ಬೆಡ್​ ಕೆಳಗಡೆ ಅಡಗಿಸಿಟ್ಟು ಪರಾರಿ​ ಆಗಿದ್ದಾನೆ. ಮೂರು ದಿನಗಳ ಹಿಂದೆಯೇ ಕೃತ್ಯ ನಡೆಸಿದ್ದು, ಊರಿಗೆ ಹೋಗಿದ್ದ ಅತ್ತೆ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ..?
ಕಳೆದ ನಾಲ್ಕು ತಿಂಗಳ ಹಿಂದೆ ಆಕಾಶ್ ಕಂಬಾರ ಹಾಗು ಕೊಲೆಯಾದ ಸಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೂರು ದಿನಗಳ ಹಿಂದೆಯೇ ಪಾಪಿ ಪತಿ ಆಕಾಶ್ ಕಂಬಾರ ಪತ್ನಿ ಸಾಕ್ಷಿಯನ್ನು ಕೃತ್ಯ ನಡೆಸಿ ಪರಾರಿ ಆಗಿದ್ದಾನೆ. ಊರಿಗೆ ಹೋಗಿದ್ದ ಅತ್ತೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಗೋಕಾಕ್ ಡಿವೈಎಸ್​ಪಿ ಹಾಗು ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಕರಣಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಮೃತ ಸಾಕ್ಷಿ ಕುಟುಂಬಸ್ಥರು ವರದಕ್ಷಿಣೆ ಅರೋಪ ಮಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.