/newsfirstlive-kannada/media/media_files/2025/10/29/sharavati-pump-storage-project-4-2025-10-29-19-59-31.jpg)
ಶರಾವತಿ ಪಂಪ್ಡ್​ ಸ್ಟೋರೇಜ್​ ಪ್ರಾಜೆಕ್ಟ್​ ನಡೆಯೋದೇ ದಟ್ಟ ಅರಣ್ಯದ ಮಧ್ಯದಲ್ಲಿ. ಹೀಗಾಗಿ ಕೇವಲ ಅರಣ್ಯ ನಾಶವಾಗುವುದು ಅಷ್ಟೇ ಅಲ್ಲ, ಅಲ್ಲಿಯ ಅಪರೂಪದ ಸಸ್ಯ, ಪ್ರಾಣಿ ಸಂಕುಲಕ್ಕೂ ಸಂಕಷ್ಟ ಎದುರಾಗ್ತಿದೆ. ಹೀಗಾಗಿಯೇ ಅಲ್ಲಿಯ ಜನ, ಪರಿಸರ ಪ್ರೇಮಿಗಳು ಯಾವುದೇ ಕಾರಣಕ್ಕೂ ನಮ್ಗೆ ಈ ಯೋಜನೆ ಬೇಡವೇ ಬೇಡ ಅಂತ ಹೋರಾಟದ ಹಾದಿ ಹಿಡಿದಿದ್ದಾರೆ. ದೇಶಕ್ಕೆ, ರಾಜ್ಯಕ್ಕೆ ಅಭಿವೃದ್ಧಿ ಯೋಜನೆಗಳು ಬೇಕು. ಆದ್ರೆ, ಅದು ಪರಿಸರಕ್ಕೆ, ಜನರಿಗೆ ಮಾರಕವಾಗಿರ್ಬಾರದು.
ಪಶ್ಚಿಮ ಘಟ್ಟಗಳು ದೇಶದ ಆಮ್ಲಜನಕ ಇದ್ದಂತೆ. ದೇಶದ ಹೃದಯ ಅಂತಾನೂ ಇವುಗಳಿಗೆ ಹೆಸರಿದೆ. ಆದ್ರೆ ಘಟ್ಟಗಳ ಮೇಲಿನ ನಿರಂತರ ಯೋಜನೆಗಳಿಂದಾಗಿ ಘಟ್ಟಗಳ ಉಸಿರು ನಿಲ್ಲಿಸುವ, ಹೃದಯ ಹಿಂಡುವ ಕೆಲಸಗಳು ಆಗುತ್ತಿವೆ. ಇದೀಗ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯೂ ಅಂತಹದ್ದೇ ಆಗಿದೆ. ಈ ಯೋಜನೆಯಿಂದ ಅರಣ್ಯ ಯಾವ ಪ್ರಮಾಣದಲ್ಲಿ ನಾಶವಾಗುತ್ತೆ? ಪ್ರಾಣಿ ಸಂಕುಲಕ್ಕೆ ಬೀಳುವ ಏಟು ಏನು? ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಇದನ್ನೂ ಓದಿ:ಸೂರ್ಯಘರ್, ಪಿಎಂ ಕುಸುಮ್‌ಗೆ ಭಾರೀ ಬೇಡಿಕೆ.. ಭಾರತದ ಸೌರ ಸಾಧನೆಗೆ ತಲೆದೂಗಿದ 125 ರಾಷ್ಟ್ರಗಳು..!
/filters:format(webp)/newsfirstlive-kannada/media/media_files/2025/10/29/sharavati-pump-storage-project-3-2025-10-29-19-54-04.jpg)
ಸರ್ಕಾರ ಜಾರಿಗೆ ತರೋದಕ್ಕೆ ಮುಂದಾಗಿರೋ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಅವ್ರು ಹೇಳ್ತಾ ಇರೋದನ್ನ ನೋಡ್ತಾ ಇದ್ರೆ.. ಅಬ್ಬಾ ಎಂಥಾ ಯೋಜನೆ. ಅತೀ ಕಡಿಮೆ ಹಣದಲ್ಲಿ ಜಾಸ್ತಿ ವಿದ್ಯುತ್ ಉತ್ಪಾದನೆ ಅಂತ ಅನಿಸುತ್ತೆ. ಇದೊಂದು ರಾಜ್ಯದ ದೂರದೃಷ್ಟಿ ಯೋಜನೆ ಅನಿಸೋದು ಪಕ್ಕಾ. ಯೋಜನೆಯ ಆಳಕ್ಕಿಳಿದು ಯೋಜನೆ ಜಾರಿ ಆಗ್ತಾ ಇರೋದು ಎಲ್ಲಿ? ಆ ಪ್ರದೇಶದಲ್ಲಿರೋ ಅರಣ್ಯ ಸಂಪತ್ತು ಎಂಥಾದ್ದು? ಅಲ್ಲಿರೋ ಸಸ್ಯ ಸಂಪತ್ತು, ಪ್ರಾಣಿ ಪಕ್ಷಿಗಳ ಸಂಪತ್ತು ಅದೆಷ್ಟು ಅಮೂಲ್ಯ? ಅನ್ನೋದನ್ನ ನೋಡ್ತಾ ಹೋದ್ರೆ ಯೋಜನೆಯ ಬಂಡವಾಳ ಹೊರಬೀಳುತ್ತೆ ಅನ್ನೋದನ್ನ ಪರಿಸರ ತಜ್ಞರೇ ಹೇಳ್ತಿದ್ದಾರೆ. ಈ ಯೋಜನೆಯನ್ನ ಜನ ನಿರೋಧಿಸ್ತಿದ್ದಾರೆ. ಪರಿಸರ ತಜ್ಞರು, ಮಠಾಧೀಶರು ಕಿಡಿಕಾರುತ್ತಿದ್ದಾರೆ ಅಂದ್ರೆ ಏನಾದ್ರೂ ವಿಷ್ಯ ಇರ್ಲೇಬೇಕಲ್ವಾ? ಖಂಡಿತವಾಗಿಯೂ ಇದೆ.
ಮರಗಳ ಮಾರಣ ಹೋಮ!
- ಶಿವಮೊಗ್ಗ ಜಿಲ್ಲೆಯ ಸಾಗರ ವಿಭಾಗದಲ್ಲಿ 745 ಮರಗಳು!
- ಶಿವಮೊಗ್ಗ ವನ್ಯಜೀವಿ ವಲಯದಲ್ಲಿ 1518 ಮರಗಳು!
- ಉತ್ತರ ಕನ್ನಡ ಹೊನ್ನಾವರ ವಿಭಾಗದಲ್ಲಿ 13756 ಮರಗಳು!
- ಒಟ್ಟು ಮರಗಳ ಕಟಾವು 16,041 ಎಂದು ಅಂದಾಜಿಸಲಾಗಿದೆ!
ಇವತ್ತೇನಾದ್ರೂ ದೊಡ್ಡ ಪ್ರಮಾಣದಲ್ಲಿ ಅರಣ್ಯ ಉಳ್ಕೊಂಡಿದೆ ಅಂದ್ರೆ ಅದು ಪಶ್ಚಿಮ ಘಟ್ಟ ಪ್ರದೇಶದಲ್ಲಿ, ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ. ಆದ್ರೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಅಲ್ಲಿಯ ಅರಣ್ಯದ ನಾಶಕ್ಕೂ ಕೈ ಹಾಕಿದಂತಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನ ಜಾರಿ ಮಾಡ್ತಾ ಇರೋದು ಅರಣ್ಯ ಪ್ರದೇಶದಲ್ಲಿ. ಅದ್ರಲ್ಲಿಯೂ ಈ ಯೋಜನೆಯ ಹಾದು ಹೋಗೋದು ಅಪರೂಪದ ಸಿಂಗಳೀಕ ಅಭಯಾರಣ್ಯದಲ್ಲಿ. ಇಲ್ಲಿ ಸಂಗಳೀಕ ಸೇರಿದಂತೆ ಅಪರೂಪದ ಪ್ರಾಣಿ, ಪಕ್ಷಿ, ಜೀವಿ ಮತ್ತು ಸಸ್ಯ ಸಂಕುಲವಿದೆ. ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಮುಂದಾಗುತ್ತಿದ್ದೇವೆ ಅನ್ನೋದನ್ನ ಸರ್ಕಾರ ಕೇಳಿಕೊಳ್ತಾ ಇದೆ.
ಇದನ್ನೂ ಓದಿ:ಮಲ್ಲಮ್ಮರ ಇನ್​ಸ್ಟಾದಿಂದ ಅಧಿಕೃತ ಮಾಹಿತಿ.. ಅಸಲಿ ಸತ್ಯ ರಿವೀಲ್​..!
/filters:format(webp)/newsfirstlive-kannada/media/media_files/2025/10/29/sharavati-pump-storage-project-2-2025-10-29-19-58-42.jpg)
ಖಂಡಿತವಾಗಿಯೂ ಈ ಯೋಜನೆಯಿಂದ ಅಪರೂಪದ ಸಿಂಗಳೀಕ ಅಭಯಾರಣ್ಯವೇ ನಾಶವಾಗುತ್ತೆ.. ತೀರ್ಥ ಹಳ್ಳಿಯಲ್ಲಿ ಹುಟ್ಟಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿದು ಸಮುದ್ರ ಸೇರಬೇಕಿದ್ದ ನದಿ ನೀರನ್ನು ತಡೆಗಟ್ಟುವುದರಿಂದ ನದಿ ತನ್ನ ಜೀವಂತಿಕೆಯನ್ನೇ ಕಳೆದುಕೊಳ್ಳುತ್ತದೆ. ಹಾಗೇ ಅರಣ್ಯ ಭಾಗದಲ್ಲಿ ಬದುಕು ಕಟ್ಟಿಕೊಂಡವರ ಜೀವನವೂ ಅತಂತ್ರ ಸ್ಥಿತಿಗೆ ಸಿಲುಕುತ್ತದೆ.
ವಿರೋಧ ಏಕೆ?
ಇಲ್ಲಿ ಒಂದನ್ನ ಗಮನಿಸ್ಬೇಕು. ಅದೇನ್ ಅಂದ್ರೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವ್ಯಾಪ್ತಿಯಲ್ಲಿ ಬರೋ ಜನರಾಗಲಿ, ಅಲ್ಲಿಯ ಹೋರಾಟಗಾರರಾಗ್ಲಿ ಯಾವತ್ತೂ ಅಭಿವೃದ್ಧಿಯನ್ನ ವಿರೋಧಿಸ್ತಾ ಇಲ್ಲ. ಈ ಯೋಜನೆಯಿಂದ ಭೂಮಿಯಾಳವನ್ನ ಕೊರೆಯೋದ್ರಿಂದ ಭುಕುಸಿವಾಗುತ್ತೆ ಅನ್ನೋ ಭಯ ಶುರುವಾಗಿದೆ. ಸದ್ಯಕ್ಕೆ ಸರ್ಕಾರ ಅಂತಾ ಯಾವುದೇ ಅನಾಹುತಗಳು ಸಂಭವಿಸೋದಿಲ್ಲ ಅಂತಾನೇ ಹೇಳುತ್ತೆ. ಆದ್ರೆ, ಪರಿಸರ ತಜ್ಞರ ಅಭಿಪ್ರಾಯವೇ ಬೇರೆ ಇದೆ. ಅದೇನ್ ಅಂದ್ರೆ, ಶರಾವತಿ ಕಣಿವೆ ಅತ್ಯಂತ ಸೂಕ್ಷ್ಮ ಪರಿಸರ ವಲಯ ಹೊಂದಿದೆ. ಆದರೆ, ಈ ಕಣಿವೆಯ ಮೇಲೆ ನಡೆದಷ್ಟು ಅತಿಕ್ರಮಣ ರಾಜ್ಯದ ಬೇರಾವುದೇ ಪ್ರದೇಶದಲ್ಲಿ ಆಗಿಲ್ಲ. ಕಳೆದ 75 ವರ್ಷದಲ್ಲಿ ಈ ಪ್ರದೇಶದಲ್ಲಿ ಲಿಂಗನಮಕ್ಕಿ, ತಳಕಳಲೆ, ಚಕ್ರಾ, ಸಾವೇಹಕ್ಲು, ಮಾಣಿ, ಮಾಣಿ ಪಿಕಪ್, ಗೇರುಸೊಪ್ಪ ಜಲಾಶಯಗಳು, ಹಲವು ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಸಾವಿರಾರು ಹೆಕ್ಟೆರ್ ಅರಣ್ಯ ನಾಶ ಮಾಡಲಾಗಿದೆ. ಕಣಿವೆ ಮತ್ತಷ್ಟು ಛಿದ್ರವಾಗಲು ಅವಕಾಶ ಕೊಡಬಾರದು ಅಂತ ಪರಿಸರ ತಜ್ಞರು ಆಗ್ರಹ ಮಾಡ್ತಿದ್ದಾರೆ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯರಿಂದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ : 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ
/filters:format(webp)/newsfirstlive-kannada/media/media_files/2025/10/29/sharavati-pump-storage-project-6-2025-10-29-20-00-36.jpg)
ಸರ್ಕಾರ ಯಾವುದೇ ಯೋಜನೆಯನ್ನ ಜಾರಿಗೆ ತರೋದಕ್ಕೆ ಮುಂದಾಗಿದ್ರೂ ಅದನ್ನ ಸಮರ್ಥನೆ ಮಾಡಿಕೊಳ್ಳುವುದು ಸ್ವಾಭಾವಿಕ. ಅದೇ ಕೆಲ್ಸ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿಯೂ ಕಾಣಿಸ್ತಿದೆ. ಹೌದು, ಕೆಪಿಸಿಎಲ್ ಪ್ರಕಾರ 54.155 ಹೆಕ್ಟೆರ್ ಅರಣ್ಯಭೂಮಿ ಪೈಕಿ ಭೂಮಿಯ ಒಳಭಾಗದಲ್ಲಿ 19.982 ಹೆಕ್ಟೆರ್ ಬರುತ್ತದೆ. ಮೇಲ್ಮೈನಲ್ಲಿ 43.173 ಹೆಕ್ಟೆರ್ ಮಾತ್ರ ಬಳಸಿಕೊಳ್ಳಲಾಗುತ್ತದೆ. ಹಾಗೇ ಜನಜೀವನ, ಪರಿಸರ, ವನ್ಯಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗೋದಿಲ್ಲ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಮಾರ್ಗಸೂಚಿ ಅನ್ವಯವೇ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಪ್ರಸ್ತುತ ಇರೋ ಶರಾವತಿ ಜಲವಿದ್ಯುತ್ ಯೋಜನೆ ವ್ಯಾಪ್ತಿಯೊಳಗಡೆಯೇ ಈ ಯೋಜನೆಯೂ ಬರುತ್ತೆ ಅನ್ನೋದನ್ನ ಹೇಳ್ತಿದೆ. ಹಾಗೇ ಹೊಸ ಜಲಾಶಯಗಳ ನಿರ್ಮಾಣ ಮಾಡದ ಕಾರಣ ನದಿಯ ಹರಿವಿನಲ್ಲಿ ಯಾವುದೇ ಮಾರ್ಪಾಡು ಇರೋದಿಲ್ಲ. ಪರಿಸರ ಸೂಕ್ಷ್ಮ ಪ್ರದೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಪ್ರಮೇಯವೇ ಇಲ್ಲ. ಭೂಕುಸಿತ, ಭೂಕಂಪದಂತಹ ಅಪಾಯಗಳು ಉದ್ಭವಿಸುವುದಿಲ್ಲ. ಜೀವವೈವಿಧ್ಯತೆಗೂ ಧಕ್ಕೆಯಾಗುವುದಿಲ್ಲ ಅನ್ನೋದನ್ನ ಹೇಳ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಚರ್ಚೆ: ದಲಿತ ಸಮುದಾಯದ ಯಾರೆಲ್ಲಾ ಅರ್ಹರಿದ್ದಾರೆ ಗೊತ್ತಾ?
/filters:format(webp)/newsfirstlive-kannada/media/media_files/2025/10/29/sharavati-pump-storage-project-7-2025-10-29-20-01-16.jpg)
ಸರ್ಕಾರ ಯಾವುದೇ ಯೋಜನೆಯನ್ನ ಜಾರಿಗೆ ತರುವಾಗ ದುಷ್ಪರಿಣಾಮ ವನ್ನ ಹೇಳೋದಿಲ್ಲ. ಅದೇನಿದ್ರೂ ಜನರಿಗೆ ಆಗೋ ಪ್ರಯೋಜನವನ್ನ ಮಾತ್ರ ಹೇಳುತ್ತೆ. ಹಾಗೇ ಶರಾವತಿ ಪಂಪ್ಡ್ ಸ್ಟೋರೇಜ್‌ನಲ್ಲಿ ಆಗ್ತಾ ಇರೋದು ಅದೇ ನೋಡಿ. ಆದ್ರೆ, ಯೋಜನೆಯ ದುಷ್ಪರಿಣಾಮದ ಬಗ್ಗೆ ಪರಿಸರ ತಜ್ಞರು, ಮಠಾಧೀಶರು ಹೇಳ್ತಾ ಇರೋದನ್ನ ನೋಡ್ತಾ ಇದ್ರೆ ಇಡೀ ರಾಜ್ಯವೇ ಈ ಯೋಜನೆಯ ವಿರೋಧಕ್ಕೆ ಕೈ ಜೋಡಿಸೋ ಅಗತ್ಯವಿದೆ. ಯಾಕಂದ್ರೆ, ಇಂದು ಶರವಾತಿ ಅಂತ ಶುರುವಾಗಿದ್ದು... ನಾಳೆ ಬೇರೆ ನದಿಗಳಿಗೂ ವಿಸ್ತರಣೆಯಾದ್ರೂ ಅಚ್ಚರಿಯಿಲ್ಲ. ಇಂದು ಶರಾವತಿ ಉಳಿದರೆ ನಾಳೆ ಕಾವೇರಿ, ಹೇಮಾವತಿ, ಕಬಿನಿ.. ಸೇರಿದಂತೆ ಎಲ್ಲಾ ನದಿಗಳು ಉಳಿಯುತ್ತವೆ.
ಪರಿಸರ ತಜ್ಞರು ಹೇಳ್ತಾ ಇರೋ ಪ್ರಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾರಕ ಯೋಜನೆ. ನಮ್ಮ ಪರಿಸರವನ್ನ ಉಳಿಸಿಕೊಳ್ಳಬೇಕು ಅಂತಾದ್ರೆ ಪರಿಸರಕ್ಕೆ ಪೂರಕವಾಗಿರೋ ಯೋಜನೆ ಬಂದಾಗ ಗಡಿ ಮೀರಿ ಬೆಂಬಲಿಸ್ಬೇಕು. ಹಾಗೇ ಪರಿಸರಕ್ಕೆ ಹಾನಿಯಾಗೋ ಯೋಜನೆಗಳು ಬಂದಾಗ ಗಡಿ ಮೀರಿ ವಿರೋಧಿಸ್ಬೇಕು.
ವಿಶೇಷ ವರದಿ: ✍ ಶ್ರೀಧರ್ ಹೆಗಡೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us