Advertisment

ಕಾನೂನು ಸಂಘರ್ಷದಲ್ಲಿ RSSಗೆ ಮುನ್ನಡೆ.. ಸರ್ಕಾರಕ್ಕೆ ಮುಖಭಂಗ..!

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಂಯಮದಿಂದ ಕಾನೂನು ನಡೆಯನ್ನ ಪಾಲಿಸಿ ಸೈದ್ಧಾಂತಿಕ ಸಮರವನ್ನ ಹೊಸ ದಿಕ್ಕಿಗೆ ಒಯ್ದಿದೆ. ಇದಕ್ಕೆ ಕೊಕ್ಕೆ ಹಾಕಲು ಬಂದ ಸರ್ಕಾರ ಘೋರ ಮುಖಭಂಗ ಅನುಭವಿಸಿದೆ.

author-image
Ganesh Kerekuli
Siddaramaiah (4)
Advertisment
  • ಹೊಸದಾಗಿ ಅರ್ಜಿ ಸಲ್ಲಿಕೆಗೆ ಹೈಕೋರ್ಟ್​​​ ಸೂಚನೆ
  • ಪಥ ಸಂಚಲನಕ್ಕೆ ನಿನ್ನೆ ಬೆಳಗ್ಗೆ ಅನುಮತಿ ನಿರಾಕರಣೆ!
  • ಮೊನ್ನೆಯಿಂದ ಆರಂಭವಾದ ಹೈಡ್ರಾಮಕ್ಕೆ ವಿರಾಮ!

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಂಯಮದಿಂದ ಕಾನೂನು ನಡೆಯನ್ನ ಪಾಲಿಸಿ ಸೈದ್ಧಾಂತಿಕ ಸಮರವನ್ನ ಹೊಸ ದಿಕ್ಕಿಗೆ ಒಯ್ದಿದೆ. ನೂರು ವರ್ಷದಲ್ಲಿ ಅದೆಷ್ಟು ಸಂಘರ್ಷಗಳನ್ನ ಹೊತ್ತು ಮೆರೆದ ಸಂಘ, ಈ ಶತಾಬ್ಧಿ ಸಂಭ್ರಮದ ಆಚರಣೆಗೆ ದೇಶಾದ್ಯಂತ ಪಥ ಸಂಚಲನ ಆಯೋಜಿಸಿದೆ. ಆದ್ರೆ ಇದಕ್ಕೆ ಕೊಕ್ಕೆ ಹಾಕಲು ಬಂದ ಸರ್ಕಾರ ಘೋರ ಮುಖಭಂಗ ಅನುಭವಿಸಿದೆ. 

Advertisment

ಹೊಸದಾಗಿ ಅರ್ಜಿ ಸಲ್ಲಿಕೆಗೆ ಕಲಬುರಗಿ ಹೈಕೋರ್ಟ್​​​ ಸೂಚನೆ

ವಿಜಯದಶಮಿ ಉತ್ಸವದ ಭಾಗವಾಗಿ ಕಲಬುರ್ಗಿ ಜಿಲ್ಲೆ ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಸಂಘದ ಪಥ ಸಂಚಲನ ಮುಂದೂಡಿಕೆ ಆಗಿದೆ. ನಿನ್ನೆ ನಡೆಯಬೇಕಿದ್ದ ಕಾರ್ಯಕ್ರಮವನ್ನ ನವೆಂಬರ್‌ 2ಕ್ಕೆ ಉದ್ದೇಶಿಸಿದೆ.. ಆರ್‌ಎಸ್‌ಎಸ್‌ ಪಥಸಂಚಲನ, ಸ್ಥಳ ಮತ್ತು ಸಮಯಕ್ಕೆ ಸಂಬಂಧಿಸಿ ನಿರ್ದಿಷ್ಟವಾಗಿ ಕೈಗೊಂಡ ನಿರ್ಣಯದ ವರದಿಯನ್ನ ಹೈಕೋರ್ಟ್​​ ಕೇಳಿದೆ. ಅಕ್ಟೋಬರ್‌ 24ಕ್ಕೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕಲಬುರಗಿ ಹೈಕೋರ್ಟ್‌ ಪೀಠ ನಿರ್ದೇಶಿಸಿದೆ. ಅಲ್ಲದೆ, ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಹೈಕೋರ್ಟ್​​, ಹಲವು ಮೂಲಭೂತ ಪ್ರಶ್ನೆಗಳನ್ನ ಎತ್ತಿದೆ..

ಇದನ್ನೂ ಓದಿ: ದೀಪಾವಳಿ.. ಪಟಾಕಿ ಸಿಡಿಸುವಾಗ ಈ 7 ವಿಷಯ ಮರೆಯಬೇಡಿ.. ಇಲ್ಲದಿದ್ದರೆ..

ಪಥ ಸಂಚಲನಕ್ಕೆ ಅನುಮತಿ ಕೋರಿ ಯಾವ ಪ್ರಾಧಿಕಾರಕ್ಕೆ ಅನುಮತಿ ಕೋರಬೇಕು? ಯಾವ ಕಾನೂನಿನ ಅಡಿ ಅನುಮತಿ ಕೋರಬೇಕು ಎಂಬ ವಿಚಾರ ಇಲ್ಲಿದೆ. ಗುಂಪೊಂದು ಪಂಥ ಸಂಚಲನ ನಡೆಸಲು ಅವಕಾಶವಿದೆಯೇ? ಅದು ಪ್ರತಿಭಟನೆಯೇ ಆಗಿರಬೇಕಿಂದಿಲ್ಲ. ಮೌನ ಪ್ರತಿಭಟನೆ ಆಗಿರಬಹುದು? ಜನರಲ್ಲಿ ಜಾಗೃತಿ ಮೂಡಿಸಲು ಇಚ್ಛಿಸಬಹುದು? ಇದಕ್ಕೆ ಅನುಮತಿ ಬೇಕೆ? ಹಾಗಾದ್ರೆ ಯಾರಿಂದ ಅನುಮತಿ ಪಡೆಯಬೇಕು? ಯಾವ ಕಾನೂನು ಜಾರಿಯಲ್ಲಿದೆ. ಯಾವ ಕಾನೂನಿನ ನಿಬಂಧನೆಗೆ ನಾವು ಒಳಪಟ್ಟಿದ್ದೇವೆ. 
- ಹೈಕೋರ್ಟ್​ ನ್ಯಾಯಪೀಠ 

ಖಡಕ್​ ಪ್ರಶ್ನೆಗಳನ್ನ ಎಸೆದ ನ್ಯಾಯಮೂರ್ತಿ ಕಮಲ್​​, ಸರ್ಕಾರ ಮತ್ತು ಅರ್ಜಿದಾರರಿಗೆ ಕೆಲ ಆದೇಶಗಳನ್ನ ಜಾರಿ ಮಾಡಿ ಅಕ್ಟೋಬರ್​​ 24ಕ್ಕೆ ವಿಚಾರಣೆ ಮುಂದೂಡಿತು.. 

Advertisment

ಹೈಕೋರ್ಟ್​ ಕಟ್ಟಪ್ಪಣೆ ಏನು? 

  • ಪಥ ಸಂಚಲಕ್ಕೆ ಎಲ್ಲಿಂದ ಎಲ್ಲಿಯವರೆಗೆ ಪಥ ಸಂಚಲನ
  • ಏತಕ್ಕಾಗಿ ಈ ಪಥ ಸಂಚಲನ ಎಂದು ಉಲ್ಲೇಖಿಸಬೇಕು
  • ಅರ್ಜಿದಾರರು ಸ್ಥಳ & ಸಮಯದ ಮಾಹಿತಿ ನೀಡಬೇಕು
  • ಕಲಬುರ್ಗಿಯ ಡಿಸಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌
  • ಪೊಲೀಸರಿಗೆ ಸಂಘ ಹೊಸದಾಗಿ ಅರ್ಜಿಯ ಸಲ್ಲಿಸಬೇಕು
  • ಅರ್ಜಿದಾರರ ಪಥ ಸಂಚಲನದ ಹಾದಿಯನ್ನು ಪರಿಗಣಿಸಿ
  • ಸರ್ಕಾರವು ಹೈಕೋರ್ಟ್​​ಗೆ ಅ. 24ಕ್ಕೆ ವರದಿ ಸಲ್ಲಿಸಬೇಕು
  • ಸರ್ಕಾರ ಸಲ್ಲಿಸುವ ವರದಿ ಆಧರಿಸಿ ಕೋರ್ಟ್​​ ನಿರ್ಧಾರ

ಹೈಡ್ರಾಮಕ್ಕೆ ವಿರಾಮ!

ಸರ್ಕಾರಿ ಸ್ಥಳಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕಡ್ಡಾಯ ಅಂತ ಸರ್ಕಾರ ಆದೇಶಿಸಿದೆ.. ಇದೇ ಆದೇಶದಂತೆ ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ತಹಶೀಲ್ದಾರ್​ಗೆ ಮಾಹಿತಿ ನೀಡಲಾಗಿತ್ತು.. ಆರ್‌ಎಸ್‌ಎಸ್‌ಗೆ 12 ಅಂಶಗಳ ವಿವರಣೆ ಕೇಳಿದ್ದ ತಹಶೀಲ್ದಾರ್​​​, ಬೆಳಗ್ಗೆ ಅನುಮತಿ ನಿರಾಕರಿಸಿದ್ರು. ಈ ಆದೇಶ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್​ಗೆ ಸಂಘವು ಕಾನೂನು ಸಂಘರ್ಷ ನಡೆಸಿ ಈಗ ಆರಂಭಿಕವಾಗಿ ಗೆದ್ದು ಬೀಗಿದೆ.. ಮಾತಿನ ಖರ್ಗೆ ಮತ್ತು ಬಿಜೆಪಿ ಮಧ್ಯೆ ಮಾತಿನ ಕಾಳಗ ಮುಂದುವರಿದಿದೆ.. ಹೈಕೋರ್ಟ್ ಸರ್ಕಾರಕ್ಕೆ ಮುಖಕ್ಕೆ ಮಂಗಳಾರತಿ ಮಾಡಿ ಛೀಮಾರಿ ಹಾಕಿದೆ ಅಂತ ವಿಪಕ್ಷ ನಾಯಕ ಅಶೋಕ್​​ ತಿವಿದಿದ್ದಾರೆ.

ಇದನ್ನೂ ಓದಿ: ಮಾಜಿ ಕೇಂದ್ರ ಸಚಿವ ಖೂಬಾಗೆ ಬಿಗ್ ಶಾಕ್.. 25.30 ಕೋಟಿ ದಂಡ ಕಟ್ಟುವಂತೆ ನೋಟಿಸ್

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Priyank Kharge RSS ban RSS
Advertisment
Advertisment
Advertisment