/newsfirstlive-kannada/media/media_files/2025/10/19/bhagwanth-khuba-2025-10-19-19-41-37.jpg)
ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಗಣಿಗಾರಿಕೆ ಸಂಬಂಧ 25.30 ಕೋಟಿ ದಂಡ ಪಾವತಿ ಮಾಡುವಂತೆ ಖೂಬಾಗೆ ಹಲವು ಭಾರೀ ನೋಟಿಸ್​ ನೀಡಿದ್ರು ಪ್ರಯೋಜನವಾಗಿಲ್ಲ. ಇದೀಗ ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಕಾಳಗಿ ತಹಶೀಲ್ದಾರ್​, ಮಾಜಿ ಕೇಂದ್ರ ಸಚಿವರಿಗೆ ನೋಟಿಸ್​ ನೀಡಿದ್ದಾರೆ.
ಇದನ್ನೂ ಓದಿ: ಜಿಎಸ್‌ಟಿ ದರ ಇಳಿಕೆಯಿಂದ ಎಲ್ಲ ಉತ್ಪನ್ನಗಳ ಮಾರಾಟ ಹೆಚ್ಚಳ : ಕೇಂದ್ರದ ಮೂವರು ಸಚಿವರು ಹೇಳಿದ್ದೇನು?
ಭಗವಂತ್​ ಖೂಬಾ.. ಮಾಜಿ ಕೇಂದ್ರ ಸಚಿವರು.. ಇವರ ವಿರುದ್ಧ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವ ಆರೋಪ ಇದ್ದು, ಈ ಆರೋಪ ಸಾಬೀತಾಗಿದೆ. ಅಕ್ರಮವಾಗಿ ರಾಜ್ಯ ಸಂಪತ್ತು ಲೂಟಿ ಮಾಡಿದ್ದು, ₹25.30 ಕೋಟಿ ದಂಡ ಪಾವತಿಗೆ ಕಲಬುಗರಿ ಜಿಲ್ಲಾಡಳಿತ ಸೂಚನೆ ನೀಡಿತ್ತು. ಅಧಿಕಾರಿಗಳು ಎರಡು ಮೂರು ಬಾರಿ ನೋಟಿಸ್​ ನೀಡಿದ್ರೂ ಭಗವಂತ್​ ಖೂಬಾ ದಂಡವನ್ನು ಪಾವತಿ ಮಾಡಿಲ್ಲ.. ಹೀಗಾಗಿ ಕಲಬುಗರಿ ಜಿಲ್ಲಾಡಳಿತ ಫೈನಲ್​ ನೋಟಿಸ್​ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಇದರ ಬೆನ್ನಲ್ಲೇ ಕಾಳಗಿ ತಹಶೀಲ್ದಾರ್​​ ಮಾಜಿ ಕೇಂದ್ರ ಸಚಿವರ ಬಳಿ ದಂಡ ವಸೂಲಾತಿಗೆ ಮುಂದಾಗಿದ್ದಾರೆ.
₹25.30 ಕೋಟಿ ದಂಡ ಪಾವತಿಗೆ ನೋಟಿಸ್
- ಚಿತ್ತಾಪುರ ತಾ. ವಚ್ಚಾ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ
- ವಚ್ಚಾ ಗ್ರಾಮದ 24/4 ರಲ್ಲಿ 5 ವರ್ಷಗಳ ಅವಧಿಗೆ ಗಣಿಗಾರಿಕೆಗೆ ಅನುಮತಿ
- 24/5, 24/3, 24/7, 24/8 ಸೇರಿ ಪಕ್ಕದ ಸರ್ವೆ ನಂಬರ್‌ಗಳಲ್ಲಿ ಅಕ್ರಮ
- 2014 ಜುಲೈ 19ರಿಂದ 2019ರ ಜುಲೈ 18ರವರೆಗೆ ಅಕ್ರಮ ಗಣಿಗಾರಿಕೆ
- ಸಂಜೀವಕುಮಾರ್ ತಿಪ್ಪಣ್ಣ ಜವಕರ್​​​ರ ದೂರಿನ ಆಧಾರದಡಿ ಪರಿಶೀಲನೆ
- ಗಣಿ ಇಲಾಖೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಂದ ಜಂಟಿ ಸರ್ವೇ
- ಜಂಟಿ ಸರ್ವೆ ಬಳಿಕ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ವರದಿ ಸಲ್ಲಿಕೆ
- ಅಕ್ರಮ ಗಣಿಗಾರಿಕೆ ಸಂಬಂಧ ₹25.30 ಕೋಟಿ ದಂಡ ಪಾವತಿಸಲು ಸೂಚನೆ
- ದಂಡ ಪಾವತಿಸುವಂತೆ ಮೂರು ಬಾರಿ ನೊಟೀಸ್ ನೀಡಿರುವ ಅಧಿಕಾರಿಗಳು
ಭಗವಂತ ಖೂಬಾ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ವೇದಿಕೆ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್​ ಖಂಡ್ರೆ, ಅಕ್ರಮ ಗಣಿಕಾರಿಗೆ ನಡೆದಿದ್ದು, ನಾವು ಸತ್ಯವನ್ನೇ ಹೇಳ್ತೇವೆ.. ಇದಕ್ಕೆ ಖೂಬಾರವರೇ ಉತ್ತರ ನೀಡಲಿ ಎಂದಿದ್ದಾರೆ.
ಒಟ್ಟಾರೆ.. ಅಕ್ರಮ ಗಣಿಕಾರಿಕೆ ಸಂಬಂಧ ದಂಡ ವಸೂಲಿಗೆ ಜಿಲ್ಲಾಡಳಿತ ಮುಂದಾಗಿದ್ದು, ಈ ಬಗ್ಗೆ ಮಾಜಿ ಕೇಂದ್ರ ಸಚಿವ ಭಗವಂತ್​ ಖೂಬಾ ಸದ್ಯ ಮೌನವಾಗಿದ್ದಾರೆ. ಖುಬಾ ಅವರು ದಂಡ ವಾಪತಿಸುತ್ತಾರಾ.. ಅಥವಾ ಜಿಲ್ಲಾಡಳಿತ ಅವರ ಚಿರಾಸ್ಥಿ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ