/newsfirstlive-kannada/media/media_files/2025/09/06/lunar_eclipse_new-2025-09-06-13-52-44.jpg)
ಬೆಂಗಳೂರು: ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ನಾಳೆ ಅಂದರೆ ಭಾನುವಾರ ರಾತ್ರಿ 8.50ಕ್ಕೆ ಆರಂಭವಾಗಿ ಮಧ್ಯರಾತ್ರಿ 12.22ರವರೆಗೆ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಇದು ಸುಮಾರು 5 ಗಂಟೆ 27 ನಿಮಿಷಗಳ ಕಾಲ ನಡೆಯುವ ಈ ವಿದ್ಯಮಾನದಲ್ಲಿ ಬಿಳಿ ಬಣ್ಣದಲ್ಲಿರುವ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಈ ಸಂಬಂಧ ರಾಜ್ಯದ ಜಿಲ್ಲೆಗಳು, ಬೆಂಗಳೂರಿನ ದೇವಾಲಯಗಳು ಹಾಗೂ ಆಂಧ್ರದ ತಿರುಪತಿ ಸೇರಿದಂತೆ ಹಲವೆಡೆ ದೇವಾಲಯಗಳನ್ನು ಮುಚ್ಚಲಾಗಿರುತ್ತದೆ.
ಖಗ್ರಾಸ ಚಂದ್ರ ಗ್ರಹಣದ ಸಮಯದಲ್ಲಿ ದೇವಸ್ಥಾನಗಳನ್ನು ಮುಚ್ಚಲು ಪ್ರಮುಖ ಕಾರಣ ಗ್ರಹಣದ ಅವಧಿಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಸರಣ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ, ದೇವಸ್ಥಾನಗಳನ್ನು ಶುದ್ಧೀಕರಿಸಲು ಮತ್ತು ಪೂಜಾ ವಿಧಿವಿಧಾನಗಳನ್ನು ನಡೆಸಲು ಅವುಗಳನ್ನು ಮುಚ್ಚಲಾಗುತ್ತದೆ. ಗ್ರಹಣ ಮುಗಿದ ನಂತರ ಗಂಗಾಜಲ ಚಿಮುಕಿಸಿ, ಅಭಿಷೇಕ ಮಾಡಲಾಗುತ್ತದೆ. ದೇವಾಲಯದ ಪವಿತ್ರತೆ ಕಾಪಾಡಲು ಹೀಗೆ ಮಾಡುವುದು ಮೊದಲಿನಿಂದ ಬಂದ ವಾಡಿಕೆ ಆಗಿದೆ.
ಬೀದರ್‌ನಲ್ಲಿ ಬಹುತೇಕ ದೇವಸ್ಥಾನಗಳ ದರ್ಶನಕ್ಕೆ ನಾಳೆ ನಿರ್ಬಂಧ ಇರುತ್ತದೆ. ಜಿಲ್ಲೆಯ ಐತಿಹಾಸಿಕ ದೇಗುಲಗಳ ಬಾಗಿಲು ಮುಚ್ಚಲಾಗಿರುತ್ತದೆ. ನಾಳೆ ಮಧ್ಯಾಹ್ನ 12ರಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರಲ್ಲ. ಜಿಲ್ಲೆಯ ಖಾನಾಪುರದ ಮೈಲಾರ ಮಲ್ಲಣ್ಣ, ಹೊನ್ನಿಕೇರಿ ಸಿದ್ದೇಶ್ವರ, ಚಳಕಾಪುರ ಹನುಮಾನ್ ದೇವಸ್ಥಾನ, ಚಂಡಕಾಪುರ ರಾಮಲಿಂಗೇಶ್ವರ ದೇವಸ್ಥಾನ, ಹುಮನಾಬಾದ್ ತಾಲೂಕಿನ ಚಾಂಗಲೇರ ವೀರಭದ್ರೇಶ್ವರ, ಸೀಮ ನಾಗನಾಥ್ ದೇವಸ್ಥಾನ, ಬೀದರ್ ನರಸಿಂಹ ಝರಣಾ ದೇಗುಲ ಬಂದ್ ಆಗಿರುತ್ತವೆ. ದೇವಾಲಯಗಳು ಬಂದ್ ಹಿನ್ನೆಲೆಯಲ್ಲಿ ಭಕ್ತರು ಸಹಕರಿಸಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ. ಸೋಮವಾರ ಶುದ್ಧಿ ಕಾರ್ಯದ ಬಳಿಕ ಬೆಳಗ್ಗೆ 7 ಗಂಟೆಗೆ ದೇವಸ್ಥಾನಗಳನ್ನು ತೆರೆಯಲಾಗುತ್ತದೆ.
ಚಂದ್ರ ಗ್ರಹಣ ಸಮಯದಲ್ಲಿ ಬೀದರ್‌ನಲ್ಲಿ ದೇವಾಲಯಗಳನ್ನು ಮುಚ್ಚಿದರೆ ಬೆಳಗಾವಿಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ದಕ್ಷಣಿದ ಕಾಶಿ ಕಪಿಲೇಶ್ವರ ಮಂದಿರದಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಡೆಯಲಿದೆ. ಗೃಹಣದ ಸಂದರ್ಭದಲ್ಲಿ ಬಿಲ್ವಪತ್ರೆ ಅರ್ಪಣೆ. ಗೃಹಣದ ಅವಧಿಯಲ್ಲಿ ಬಿಲ್ವಪತ್ರೆಯಲ್ಲಿಯೇ ಕಪಿಲೇಶ್ವರ ಶಿವಲಿಂಗ ಮೂರ್ತಿ ಮುಚ್ಚಲಾಗುತ್ತೆ. ಚಂದ್ರಗೃಹಣ ಮುಗಿದ್ಮೇಲೆ ಮಹಾ ಮಂಗಳಾರತಿ ಪೂಜೆ. ಬಳಿಕ ಬಿಲ್ವಪತ್ರೆ ತೆಗದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ರಾಜ್ಯದಲ್ಲಿ ಯಾವ್ಯಾವ ದೇವಾಲಯ ಮುಚ್ಚಿರುತ್ತೆ, ಯಾವುದು ಮುಚ್ಚಲ್ಲ?
- ಮೈಸೂರಿನ ಚಾಮುಂಡಿ ದೇವಾಲಯ ರಾತ್ರಿ 9:30ಕ್ಕೆ ಬಂದ್
- ಚಿಕ್ಕಬಳ್ಳಾಪುರದ ಘಾಟಿ ಸುಬ್ರಮಣ್ಯ ಗುಡಿ ಸಂಜೆ 4ಕ್ಕೆ ಬಂದ್
- ಕೊಪ್ಪಳದ ಹುಲಗೆಮ್ಮ ದೇವಾಲಯ ಸಂಜೆ 5 ಗಂಟೆಗೆ ಬಂದ್
- ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟ ಸಂಜೆ 5ಕ್ಕೆ ಕ್ಲೋಸ್
- ಬೇಲೂರಿನ ಚನ್ನಕೇಶವ ದೇವಸ್ಥಾನ ಮಧ್ಯಾಹ್ನ 3 ಗಂಟೆಗೆ ಮುಚ್ಚುತ್ತದೆ
- ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸಂಜೆ 5ಕ್ಕೆ ಕ್ಲೋಸ್
- ಧರ್ಮಸ್ಥಳದ ಮಂಜುನಾಥ ದೇವಾಲಯ ಸಂಜೆ 7 ಗಂಟೆಗೆ ಬಂದ್
- ಮಂಗಳೂರಿನ ಕದ್ರೋಳಿ ದೇವಾಲಯ ರಾತ್ರಿ 8 ಗಂಟೆಗೆ ಕ್ಲೋಸ್
- ಮಂಗಳೂರಿನ ಕದ್ರಿ ದೇವಾಲಯ ಸಂಜೆ 6.30ಕ್ಕೆ ಬಂದ್
- ರಾಯಚೂರಿನ ಮಂತ್ರಾಲಯ ಬಂದ್ ಆಗಿರುವುದಿಲ್ಲ
- ಬೆಂಗಳೂರಿನ ಗಾಳಿ ಆಂಜನೇಯ ಮಧ್ಯಾಹ್ನ 3 ಗಂಟೆಗೆ ಬಂದ್
- ಬೆಂಗಳೂರಿನ ಮೆಜೆಸ್ಟಿಕ್ನಲ್ಲಿನ ಅಣ್ಣಮ್ಮ ದೇವಾಲಯ 8ಕ್ಕೆ ಬಂದ್
- ಆರ್ಆರ್ ನಗರದ ರಾಜರಾಜೇಶ್ವರಿ ದೇವಾಲಯ ರಾತ್ರಿ 8ಕ್ಕೆ ಬಂದ್
- ಬೆಂಗಳೂರಿನ ಬನಶಂಕರಿ ದೇವಸ್ಥಾನ ಸಂಜೆ 6ಕ್ಕೆ ಬಂದ್
- ಗವಿ ಗಂಗಾಧರೇಶ್ವರ ದೇವಸ್ಥಾನ ಬೆಳಗ್ಗೆ 11 ಗಂಟೆಗೆ ಬಂದ್
- ಕಾಡು ಮಲ್ಲೇಶ್ವರ ದೇವಸ್ಥಾನ ಮಧ್ಯಾಹ್ನ 12.20ಕ್ಕೆ ಬಂದ್
- ಮಲ್ಲೇಶ್ವರದ ಪ್ರಸಿದ್ಧ ಗಂಗಮ್ಮ ದೇವಾಲಯ ಸಂಜೆ 7 ಗಂಟೆಗೆ ಕ್ಲೋಸ್
- ಚಾಮರಾಜಪೇಟೆಯ ಬಂಡೆ ಮಹಾಕಾಳಿ ರಾತ್ರಿ 7.30ಕ್ಕೆ ಬಂದ್
ಇದನ್ನೂ ಓದಿ: ವರ್ಲ್ಡ್ಕಪ್ನಲ್ಲಿ ಸೌಂದರ್ಯ ಗಣಿ.. ಸ್ಮೃತಿ ಮಂದಾನ, ಪೆರ್ರಿ, ಕೆರ್, ಲಾರೆನ್ ಬೆಲ್ ಸೇರಿ ಬ್ಯೂಟೀಸ್..!
ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಾಳೆ ತಿರುಪತಿ ತಿಮ್ಮಪ್ಪನ ದೇವಸ್ಥಾನ ಕೂಡ ಬಂದ್ ಆಗಿರುತ್ತದೆ. 12 ಗಂಟೆಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನ ಇರುವುದಿಲ್ಲ. ನಾಳೆ ಮಧ್ಯಾಹ್ನ 3.30 ರಿಂದ 8ನೇ ತಾರೀಖಿನ ಬೆಳಗಿನ ಜಾವ 3 ಗಂಟೆಯವರೆಗೆ ಬಂದ್ ಮಾಡಲಾಗಿರುತ್ತದೆ. ಗ್ರಹಣ ಸಂಭವಿಸುವ 6 ಗಂಟೆ ಮೊದಲೇ ದೇವಾಲಯ ಮುಚ್ಚುವುದು ವಾಡಿಕೆ ಇದೆ. ಹೀಗಾಗಿ ಸೆಪ್ಟೆಂಬರ್ 8 ರಂದು ಬೆಳಗಿನ ಜಾವ 3 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ನಂತರ ಶುದ್ಧಿ- ಪುಣ್ಯಾಹವಾಚನಂ ಶುದ್ಧೀಕರಣ ವಿಧಿಗಳನ್ನು ಅರ್ಚಕರು ನೆರವೇರಿಸುವರು. ಇದಾದ ಮೇಲೆ ಸೆಪ್ಟೆಂಬರ್ 8 ರಂದು ಬೆಳಗ್ಗೆ 6 ಗಂಟೆಯಿಂದ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಇರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ