Advertisment

ಯುದ್ಧದ ಸುಳಿಗೆ ಸಿಲುಕಿ ದುಬೈನಲ್ಲಿ ಲಾಕ್ ಆಗಿದ್ದ ಕನ್ನಡಿಗರು ಸೇಫ್.. ತವರಿಗೆ ವಾಪಸ್

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಇದರ ಪರಿಣಾಮ ಇತರೆ ದೇಶಗಳಿಗೂ ತಟ್ಟಿದೆ. ಅಂತೆಯೇ 50ಕ್ಕಿಂತ ಹೆಚ್ಚು ಕನ್ನಡಿಗರು ದುಬೈನಲ್ಲಿ ಲಾಕ್ ಆಗಿದ್ದರು. ಇದೀಗ ಅವರೆಲ್ಲ, ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

author-image
Ganesh Kerekuli
dubai return
Advertisment
  • ಇರಾನ್ ಹಾಗೂ ಇಸ್ರೇಲ್ ಯುದ್ಧ ಪ್ರದೇಶದಲ್ಲಿ ಸಿಲುಕಿದ್ದ ಕನ್ನಡಿಗರು
  • ಮರಳಿ ತಾಯ್ನಾಡಿಗೆ ಬಂದಿಳಿದ 50 ಕ್ಕೂ ಹೆಚ್ಚು ಮಂದಿ
  • ದುಬೈ ಕನ್ನಡ ಸಂಘಟನೆಗಳಿಗೆ ಕೃತಜ್ಞತೆ

ಬೆಂಗಳೂರು: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಇದರ ಪರಿಣಾಮ ಇತರೆ ದೇಶಗಳಿಗೂ ತಟ್ಟಿದೆ. ಅಂತೆಯೇ 50ಕ್ಕಿಂತ ಹೆಚ್ಚು ಕನ್ನಡಿಗರು ದುಬೈನಲ್ಲಿ ಲಾಕ್ ಆಗಿದ್ದರು. ಇದೀಗ ಅವರೆಲ್ಲ, ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

Advertisment

ಚಿತ್ರದುರ್ಗದ ವಿದ್ಯಾನಗರದ ನಿವಾಸಿ ರಾಮಾಂಜನೇಯ, ಮಂಜುಳಾ ದಂಪತಿ ವಾಪಸ್ಸಾಗಿದ್ದು  ಯುದ್ಧದ ಭಯಾನಕತೆ ನೆನೆದು ಭಯಭೀತರಾಗಿದ್ದರು. ನ್ಯೂಸ್ ಫಸ್ಟ್​ನಲ್ಲಿ ಯುದ್ಧದ ಭೀಕರತೆ ವೀಕ್ಷಿಸಿ ತಲ್ಲಣಗೊಂಡ ದಂಪತಿ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ ದುಬೈ ಕನ್ನಡ ಸಂಘಟನೆಗಳನ್ನು   ಸ್ಮರಿಸಿದ್ದಾರೆ. ದುಬೈ ಕನ್ನಡ ಸಂಘದ ಅಧ್ಯಕ್ಷ  ಶಶಿಧರ್ ನಾಗರಾಜ್​ ಅವರು ಸಹಾಯಕ್ಕೆ  ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಒದಿ :ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಾ? ಹೊರ್ಮುಜ್ ಜಲಸಂಧಿ ಮುಚ್ಚಿದ್ದರಿಂದ ಭಾರತಕ್ಕೆ ಸಂಕಷ್ಟ

ಪ್ರವಾಸಕ್ಕೆ ಹೋದವರು ದುಬೈನಲ್ಲಿ ಲಾಕ್

ಬಳ್ಳಾರಿ, ದಾವಣಗೆರೆ, ಚಿತ್ರದುರ್ಗದ ನಿವಾಸಿಗಳು ಸೇರಿದಂತೆ 50 ಕನ್ನಡಿಗರು ಪ್ರವಾಸಕ್ಕಾಗೆ ದುಬೈಗೆ ತೆರಳಿದ್ದರು. ಈ ವೇಳೆ ಇರಾನ್ ಮೇಲೆ-ಇಸ್ರೇಲ್ ಅಮೆರಿಕಾ ಜಂಟಿ ಯುದ್ಧ ತಾರಕಕ್ಕೇರಿತ್ತು. ಇನ್ನೇನು 5 ದಿನಗಳ ಪ್ರವಾಸದ ಕೊನೆಯ ದಿನ ಮುಗಿಸಿ ಬರಬೇಕು ಎನ್ನುವಷ್ಟರಲ್ಲಿ ಫ್ಲೈಟ್​ಗಳು ಕ್ಯಾನ್ಸಲ್ ಆಗಿ​ ದುಬೈನಲ್ಲಿ ಲಾಕ್ ಆಗಿದ್ದರು. ನಂತರ ವಿಮಾನ ಸೇವೆ ಆರಂಭವಾಗಿದ್ದು ಎಲ್ಲಾ ಕನ್ನಡಿಗರು ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಈ ನಡುವೆ ದುಬೈನಲ್ಲಿ ಊಟ, ವಸತಿಗೆ ಸಹಕಾರ ನೀಡಿದ ದುಬೈ ಕನ್ನಡ ಸಂಘಗಳ ಉಪಕಾರ ಸ್ಮರಿಸಿದ್ದಾರೆ.

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

USA AND IRAN WAR FOR FOUR WEEKS iran war is four weeks process-trump
Advertisment
Advertisment
Advertisment