/newsfirstlive-kannada/media/media_files/2025/08/14/kalaburagi-sharana-basappa-appa-2025-08-14-21-57-37.jpg)
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಲಬುರಗಿಯ ಪೂಜ್ಯ ಡಾ.ಶರಣಬಸಪ್ಪ ಅಪ್ಪಾ (Kalaburagi Sharana Basappa Appa) ಅವರು (90) ಲಿಂಗೈಕ್ಯರಾಗಿದ್ದಾರೆ. ರಾತ್ರಿ 9.23 ಕ್ಕೆ ಡಾ ಶರಣಬಸಪ್ಪ ಅಪ್ಪಾ ಲಿಂಗೈಕ್ಯರಾಗಿದ್ದಾರೆ.
ಆರೋಗ್ಯದ ಸ್ಥಿತಿ ಗಂಭೀರ ಹಿನ್ನೆಲೆಯಲ್ಲಿ ಡಾ.ಶರಣಬಸಪ್ಪ ಅಪ್ಪಾ ಅವರ ಇಚ್ಛೆಯಂತೆ ಇಂದು ಸಂಜೆ ಆಸ್ಪತ್ರೆಯಿಂದ ದಾಸೋಹ ಮಾಹಾ ಮನೆಗೆ ಸ್ಥಳಾಂತರಿಸಲಾಗಿತ್ತು. ಜೊತೆಗೆ ಅಪ್ಪಾ ಇಚ್ಛೆಯಂತೆ ಕುಟುಂಬಸ್ಥರು ಶರಣಬಸವೇಶ್ವರರ ದೇವರ ದರ್ಶನ ಮಾಡಿಸಿದ್ದರು.
ದೇವರ ದರ್ಶನ ಬಳಿಕ ದಾಸೋಹ ಮಹಾ ಮನೆಗೆ ಅಪ್ಪಾ ಅವರನ್ನ ಶಿಫ್ಟ್ ಮಾಡಲಾಗಿತ್ತು. ಮಾಹಾ ಮನೆಯಲ್ಲಿಯೇ ಡಾ ಅಪ್ಪಾಗೆ ಚಿಕಿತ್ಸೆ, ಆರೈಕೆ ನೀಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅಪ್ಪಾ ಲಿಂಗೈಕ್ಯರಾಗಿದ್ದಾರೆ. 90 ವರ್ಷದ ಡಾ.ಅಪ್ಪ ವಯೋಸಹಜ ಕಾಯಿಲೆ ಹಾಗೂ ನಿಮೋನಿಯಾದಿಂದ ಬಳಲುತ್ತಿದ್ದರು. ವೈದ್ಯರು ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಸುಧಾರಣೆ ಆಗಿರಲಿಲ್ಲ.
ಇದನ್ನೂ ಓದಿ: ಸಾವಿರಾರು ಭಕ್ತರು ಜಮಾಯಿಸಿದ್ದಾಗಲೇ ಮೇಘಸ್ಫೋಟ.. ಏನಿದು ಮಚ್ಚಲ್ ಯಾತ್ರೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us