/newsfirstlive-kannada/media/media_files/2025/11/19/tractor-accident-2025-11-19-09-53-37.jpg)
ಕಲಬುರಗಿ: ತಲೆ ಮೇಲೆ ಕಬ್ಬಿನ ಟ್ರ್ಯಾಕ್ಟರ್ ಹರಿದು ಬಾಲಕ ಸ್ಥಳದಲ್ಲೇ ಪ್ರಾಣಬಿಟ್ಟಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ನಡೆದಿದೆ.
ದಸ್ತಾಪುರ ಗ್ರಾಮದ ಸೈಯದ್ ಜಹೀರ್ ಮೀಯಾ (10) ಮೃತ ಬಾಲಕ. ಶಾಲೆಯಿಂದ ಮನೆಗೆ ವಾಪಸ್ ಬರುವಾಗ ವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ತಲೆ ಮೇಲಿಂದ ಟ್ರ್ಯಾಕ್ಟರ್ ಹರಿದ ಪರಿಣಾಮ ಸೈಯದ್ ಮೀಯಾ ಜೀವ ಕಳೆದುಕೊಂಡಿದ್ದಾನೆ. ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದ ಘಟನೆ ಹಾಸನದ ಅರಕಲಗೂಡು ತಾಲೂಕಿನ ಬರಗೂರು ಬಳಿ ಘಟನೆ ನಡೆದಿದೆ. ಕೇರಳದಿಂದ ಹಾಸನಕ್ಕೆ ಬರ್ತಿದ್ದ ಬಸ್, ಬರಗೂರು ಬಳಿಯ ವಿದ್ಯುತ್ ಪವರ್ ಗ್ರೀಡ್ ಹತ್ತಿರದಲ್ಲಿ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ. ಬಸ್​ನಲ್ಲಿದ್ದ 15 ರಿಂದ 20 ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ಇಬ್ಬರು ಕೇರಳ ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ. ಸ್ಥಳೀಯರು ಗಾಯಾಳುಗಳನ್ನು ಅರಕಲಗೂಡು ಆಸ್ಪತ್ರೆಗೆ ದಾಖಲಿಸಿದ್ದು, ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕ್ಯಾಪ್ಟನ್​ ರಘು ಅವರಿಂದ ರಕ್ಷಿತಾ ನೇರ ಆಯ್ಕೆ.. 10 ಸ್ಪರ್ಧಿಗಳು ಮನೆಗೆ ಹೋಗಲು ನಾಮಿನೇಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us