/newsfirstlive-kannada/media/media_files/2025/10/16/priyank_kharge_rss-2025-10-16-16-25-53.jpg)
ಆರ್​ಎಸ್​ಎಸ್​ vs ರಾಜ್ಯ ಸರ್ಕಾರದ ನಡುವೆ ತೀವ್ರ ಜಟಾಪಟಿಗೆ ಕಾರಣ ಆಗಿದ್ದ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಹೈಕೋರ್ಟ್​ ಅಸ್ತು ಎಂದಿದೆ.. ನವೆಂಬರ್ 16ರಂದು ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.. ಸುವ್ಯವಸ್ಥೆಯ ಕಾರಣ ನೀಡಿ ವಿರೋಧಿಸಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದ್ದು ಸಂಘಪರಿವಾರದಲ್ಲಿ ಉತ್ಸಾಹ ಮೂಡಿದೆ..
ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಹೊರಟಿದ್ದ ಆರ್​ಎಸ್​ಎಸ್​​ಗೆ​ ಸರ್ಕಾರ ಅನುಮತಿ ನಿರಾಕರಿಸಿತ್ತು.. ಬಳಿಕ ಸರ್ಕಾರದ ನಡೆ ಪ್ರಶ್ನಿಸಿ ಆರ್​ಎಸ್​ಎಸ್​ ಮುಖಂಡರು ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಎರಡು ಬಾರಿ ನಡೆಸಿದ್ದ ಸಂಧಾನ ಸಭೆ ಕೂಡ ವಿಫಲ ಆಗಿತ್ತು.. ಪಥಸಂಚಲನ ಸಂಬಂಧ ಒಟ್ಟು 11 ಅರ್ಜಿಗಳು ಬಂದಿದ್ದು, ಎಲ್ಲವನ್ನೂ ಪರಿಶೀಲಿಸಿ ಪ್ರತ್ಯೇಕ ದಿನಾಂಕಗಳಲ್ಲಿ ಅವಕಾಶ ನೀಡಲು ಕಾಲಾವಕಾಶ ಬೇಕು ಅಂತ ಸರ್ಕಾರ ಕೋರ್ಟ್​ಗೆ ಮನವಿ ಮಾಡಿತ್ತು.. ಹೀಗಾಗಿ ಕಲಬುರಗಿ ಹೈಕೋರ್ಟ್ ಪೀಠ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.. ಇವತ್ತು ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಕೋರ್ಟ್​​ಗೆ ತಿಳಿಸಿದ್ದು ಅರ್ಜಿದಾರರ ಮನವಿ ಪುರಸ್ಕರಿಸಿರುವ ಹೈಕೋರ್ಟ್​ ಗುಡ್​ನ್ಯೂಸ್​ ನೀಡಿದೆ..
ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಗ್ರೀನ್​ಸಿಗ್ನಲ್!
ಕೊನೆಗೂ ಚಿತ್ತಾಪುರದಲ್ಲಿ ಆರ್​ಎಸ್ಎಸ್​ ಪಥಸಂಚಲನಕ್ಕೆ ಕಲಬುರಗಿ ಹೈಕೋರ್ಟ್​ ಹಸಿರು ನಿಶಾನೆ ತೋರಿಸಿದೆ.. ಆದ್ರೆ, ಕೆಲವೊಂದು ಷರತ್ತುಗಳನ್ನು ವಿಧಿಸಿದೆ.. ನವೆಂಬರ್ 16ರಂದು ಮಧ್ಯಾಹ್ನದಿಂದ ಸೂರ್ಯಾಸ್ತದವರೆಗೆ ಪಥಸಂಚಲನಕ್ಕೆ ಅಸ್ತು ಎಂದಿದೆ.. ಈ ಮೂಲಕ ತೀವ್ರ ಪ್ರತಿಷ್ಠೆಗೆ ಕಾರಣವಾಗಿದ್ದ ಆರ್​ಎಸ್​ಎಸ್ ಪಥಸಂಚಲನಕ್ಕೆ ಮುಹೂರ್ತ ನಿಗದಿಯಾಗಿದೆ..
ಷರತ್ತುಗಳ ಪಥ ‘ಸಂಚಲನ’!
- ನ.16ರಂದು 3 ಗಂಟೆಗಳು ಪಥಸಂಚಲನಕ್ಕೆ ಅನುಮತಿ
- ಮಧ್ಯಾಹ್ನ 3.30ರಿಂದ ಸಂಜೆ 6.30ರವರೆಗೆ ಅನುಮತಿ
- 300 ಗಣವೇಷಧಾರಿಗಳು, 50 ಮಂದಿ ಘೋಷ್ ವೃಂದ
- ಒಟ್ಟು 350 ಮಂದಿ ಮಾತ್ರ ಭಾಗವಹಿಸಲು ಅವಕಾಶ
- ಬ್ಯಾಂಡ್ ಮೆರವಣಿಗೆ ಇರುತ್ತೆ, ಸಿಬ್ಬಂದಿ ಹೆಚ್ಚಿರುತ್ತಾರೆ
- 600 ಮಂದಿ ಭಾಗಿಯಾಗಲು ಅವಕಾಶ ಕೇಳಿದ್ದ RSS
- ಕಲಬುರಗಿ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ
- ನ್ಯಾ.ಎಂ.ಜಿ.ಎಸ್.ಕಮಲ್ ಏಕಸದಸ್ಯ ಪೀಠ ಆದೇಶ
ಕೋರ್ಟ್ ಆದೇಶದ ಬಳಿಕ ಪ್ರತಿಕ್ರಿಯಿಸಿದ ಆರ್​ಎಸ್​ಎಸ್ ಪರ ವಕೀಲ ಅರುಣ್ ಶ್ಯಾಮ್ 800 ಮಂದಿ ಭಾಗಿಯಾಗಲು ಅವಕಾಶ ಕೇಳಿದ್ದೆವು, ಆದ್ರೆ ಕೋರ್ಟ್ 350 ಮಂದಿಗೆ ಅವಕಾಶ ನೀಡಿದೆ.. ಎಷ್ಟು ಮಂದಿಗೆ ಅವಕಾಶ ಸಿಕ್ಕಿದೆ ಅನ್ನೋದು ಮುಖ್ಯವಲ್ಲ, ನಮಗೆ ಪಥಸಂಚಲನಕ್ಕೆ ಅವಕಾಶ ನೀಡಿರೋದು ಖುಷಿ ತಂದಿದೆ ಎಂದಿದ್ದಾರೆ..
ಇದನ್ನೂ ಓದಿ:ಕಬ್ಬಿಗೆ 3500 ರೂ. ಬೆಂಬಲ ಬೆಲೆ ಕೊಡಲೇಬೇಕು.. ಸರ್ಕಾರದ ವಿರುದ್ಧ ಪಟ್ಟು ಬಿಡದೆ ರೈತರ ಹೋರಾಟ
ಕಲಬುರಗಿ ಹೈಕೋರ್ಟ್ ತೀರ್ಪಿನಿಂದ ಸಂಘಪರಿವಾರದಲ್ಲಿ ಹರ್ಷ ಹೊನಲು ಹರಿದಿದೆ.. ಕೋರ್ಟ್ ಆದೇಶದ ಪ್ರಕಾರ ನವೆಂಬರ್ 16ರಂದು ಪಥಸಂಚಲನಕ್ಕೆ ಸಜ್ಜಾಗುತ್ತಿದೆ. ಒಟ್ಟಾರೆ, ರಾಜ್ಯ ಸರ್ಕಾರದ ವಿರುದ್ಧ ಸಂಘಪರಿವಾರ ನಡೆಸಿದ್ದ ಕಾನೂನು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ತೀವ್ರ ಜಟಾಪಟಿ ಹಾಗೂ ವಾಗ್ಯುದ್ಧಕ್ಕೆ ಕಾರಣವಾಗಿದ್ದ ಪಥಸಂಚಲನ ರಾಜಕೀಯ ಸಂಚಲನಕ್ಕೂ ಕಾರಣ ಆಗಿತ್ತು.. ಇದೀಗ ಹೈಕೋರ್ಟ್​​​​​ ತೀರ್ಪು ‘ಸಂಘ’ರ್ಷಕ್ಕೆ ತೆರೆ ಎಳೆದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us