/newsfirstlive-kannada/media/media_files/2025/10/17/priyank-kharge-2025-10-17-07-54-48.jpg)
ಆರ್‌ಎಸ್‌ಎಸ್​ಗೆ ಅಂಕುಶ ಹಾಕಲು ಹೊರಟಿದ್ದ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲೇ ಇಂದು ಪಥಸಂಚಲನ ಮೂಲಕ ಸಂಘ ರಣಕಹಳೆ ಮೊಳಗಿಸಲಿದೆ. ಈಗಾಗಲೇ ಪಥಸಂಚಲನಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಅಡ್ಡಿಪಡಿಸದಿರಲು ದಲಿತಪರ ಸಂಘಟನೆಗಳು ಸಹ ನಿರ್ಧರಿಸಿವೆ.
ಆರ್‌ಎಸ್‌ಎಸ್ ವರ್ಸಸ್​ ಸರ್ಕಾರ.. ಜಸ್ಟ್​ ಕಲಬುರಗಿಯ ಚಿತ್ತಾಪುರದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ರಾಜ್ಯ ಸರ್ಕಾರ ಹಾಕಿದ್ದ ಅಂಕುಶ ಇಡೀ ದೇಶಾದ್ಯಂತ ಹಲ್​ಚಲ್​ ಎಬ್ಬಿಸಿತ್ತು. ಪಥಸಂಚಲನಕ್ಕೆ ಮತ್ತಷ್ಟು ಪ್ರಚಾರ, ಬೆಂಬಲ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಕಾನೂನು ಸಮರ ನಡೆದು ಕೊನೆಗೂ ಆ ಸಮಯ ಬಂದೇ ಬಿಟ್ಟಿದೆ.
ಖರ್ಗೆ ಕ್ಷೇತ್ರದಲ್ಲಿ RSS ಪಥಸಂಚಲನ
ತೀವ್ರ ಕುತೂಹಲ ಹಾಗೂ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಜರುಗಲಿದೆ. ಒಂದು ತಿಂಗಳಿನಿಂದ ಹೈಕೋರ್ಟ್ ಹಾಗೂ ಸರ್ಕಾರದ ಅಂಗಳದಲ್ಲಿದ್ದ ಪಥಸಂಚಲನ ಜಟಾಪಟಿ ವಿಚಾರಕ್ಕೆ 2 ದಿನದ ಹಿಂದಷ್ಟೇ ಫುಲ್‌ಸ್ಟಾಪ್ ಬಿದ್ದಿತ್ತು. ಅಲ್ಲದೇ ದಲಿತಪರ ಸಂಘಟನೆಗಳು ನಿನ್ನೆಯಷ್ಟೇ ಸಭೆ ಸೇರಿ ಪಥಸಂಚಲನಕ್ಕೆ ಅಡ್ಡಿಪಡಿಸದಿರಲು ನಿರ್ಧರಿಸಿವೆ. ಹೀಗಾಗಿ ಇಂದು ಮಧ್ಯಾಹ್ನ 3.30ಕ್ಕೆ ಪಥಸಂಚಲನ ಶುರುವಾಗಿ ಸಂಜೆ 5.45ಕ್ಕೆ ಮುಕ್ತಾಯಗೊಳ್ಳಲಿದೆ. ಇದನ್ನ ಕೇವಲ ಚಿತ್ತಾಪುರ ಮಾತ್ರವಲ್ಲ, ರಾಜ್ಯ ಹಾಗೂ ದೇಶವೇ ಎದುರು ನೋಡ್ತಿದೆ. ಪಥಸಂಚಲನದಲ್ಲಿ ಕೇವಲ ಚಿತ್ತಾಪುರ ಕಂದಾಯ ವ್ಯಾಪ್ತಿಯ ಸ್ವಯಂಸೇವಕರು ಮಾತ್ರ ಭಾಗಿಯಾಗಬೇಕು. 300 ಜನ ಗಣವೇಶಧಾರಿ ಸ್ವಯಂ ಸೇವಕರು ಹಾಗೂ 50 ಜನ ಬ್ಯಾಂಡ್ ಬಾರಿಸುವರು ಸೇರಿ ಒಟ್ಟು 350 ಜನ ಮಾತ್ರ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.
ಬಿಗಿ ಪೊಲೀಸ್ ಬಂದೋಬಸ್ತ್​
- ಪಥಸಂಚಲನಕ್ಕೆ ಅಡ್ಡಿಪಡಿಸದಿರಲು ದಲಿತಪರ ಸಂಘಟನೆಗಳು ನಿರ್ಧಾರ
- ಯಾವುದೇ ಅಹಿತಕರ ಘಟನೆ ಜರುಗದಂತೆ ಚಿತ್ತಾಪುರದಲ್ಲಿ ಪೊಲೀಸ್ ಭದ್ರತೆ
- ಓರ್ವ ಎಸ್​ಪಿ, 8 ಡಿವೈಎಸ್​ಪಿ, 22 ಸಿಪಿಐ, 52 ಪಿಎಸ್‌ಐ, 8 ಡಿಎಆರ್ ತುಕಡಿ,
- 8 ಕೆಎಸ್‌ಆರ್‌ಪಿ ತುಕಡಿ ಸೇರಿ 1,500ಕ್ಕೂ ಅಧಿಕ ಪೊಲೀಸರ ನಿಯೋಜನೆ
- ಪಥಸಂಚಲನ ಸಾಗುವ ಮಾರ್ಗಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಕೆ
- ಪಟ್ಟಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು, ಸಾರ್ವಜನಿಕರೊಂದಿಗೆ ಶಾಂತಿ ಸಭೆ
- ಶಾಂತಿ ಸಭೆಯಲ್ಲಿ ಹೈಕೋರ್ಟ್ ನಿರ್ದೇಶನ, ಸರ್ಕಾರದ ಷರತ್ತು ಪಾಲಿಸಲು ಸೂಚನೆ
ಒಟ್ಟಾರೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅಡ್ಡಿಪಡಿಸಲು ಮುಂದಾಗಿದ್ದ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಗೆ ಮುಖಭಂಗವಾಗಿದ್ದಂತು ಸುಳ್ಳಲ್ಲ. ಇದೇ ವೇಳೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಲಿತಪರ ಸಂಘಟನೆಗಳು ಅಡ್ಡಿಪಡಿಸದಿರಲು ನಿರ್ಧರಿಸಿದ್ದು ಕೊಂಚ ನೆಮ್ಮದಿ ಮೂಡಿಸಿದ್ರೂ ಪೊಲೀಸರು ಅಲರ್ಟ್​ ಆಗಿದ್ದಾರೆ.
ಇದನ್ನೂ ಓದಿ: 2028 ರಲ್ಲಿ ಕಾಂಗ್ರೆಸ್ ಯಾಱರು ಸಿಎಂ ರೇಸ್ ನಲ್ಲಿರುತ್ತಾರೆ? 2028 ರಲ್ಲಿ ಡಿಕೆಶಿ ಸಿಎಂ ಗಾದಿಗೇರುವುದು ಸುಲಭವೇ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us