/newsfirstlive-kannada/media/media_files/2025/08/24/dharmastala-4-2025-08-24-09-01-22.jpg)
ನಾನ್ ಆಡಿದ್ದೇ ಆಟ, ನಾನ್ ಹೇಳಿದ್ದೇ ಸತ್ಯ ಅಂತ ಧರ್ಮಸ್ಥಳದಲ್ಲಿ ದಿನಕ್ಕೊಂದು ಟ್ವಿಸ್ಟ್ ಅಂಡ್ ಟರ್ನ್ ಕೊಡ್ತಿದ್ದ ಅನಾಮಿಕನಿಗೆ ಮುಖವಾಡ ಎಸ್ಐಟಿ ಮುಂದೆ ಕಳಚಿದೆ. ನಾನು ಕೇವಲ ಪಾತ್ರಧಾರಿ, ಇದರ ಸೂತ್ರಧಾರಿಗಳೇ ಬೇರೆ ಎಂದು ಧರ್ಮಸ್ಥಳ ವಿರುದ್ಧ ಎಣೆದಿದ್ದ ಷಡ್ಯಂತ್ರವನ್ನು ಬಿಚ್ಚಿಟ್ಟಿದ್ದಾನೆ. ಇದರ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಅಸಲಿ ಶಿವತಾಂಡ ಈಗ ಶುರುವಾಗಿದ್ದು, ಧರ್ಮಸ್ಥಳದ ಗ್ರಾಮಸ್ಥರು, ಅಣ್ಣಪ್ಪ ಕುತಂತ್ರಿಗಳನ್ನು ನೀನೇ ನೀಡಿಕೊಳ್ಳಪ್ಪ ಎಂದು ಈಡುಗಾಯಿ ಒಡೆದಿದ್ದಾರೆ.
ಈಗ ಅಸಲಿ ಆಟ ಶುರು, ಆಟ ಅಲ್ಲ ಶಿವತಾಂಡ ಈಸತಿ.. ಹೀಗೆ ಬಣ್ಣ ಬಣ್ಣದ ಮಾತುಗಳ ಮೂಲಕ ತಲೆ ಬುಡವಿಲ್ಲದೇ ಬುರುಡೆ ಬಿಟ್ಟಂತೆ ಎಐ ವಿಡಿಯೋ ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕಿಳಿದಿದ್ದ ಬುರುಡೆ ಗ್ಯಾಂಗ್ನ ಬಂಡವಾಳ, ಕುತಂತ್ರ ಒಂದೊಂದಾಗೇ ಬಯಲಾಗ್ತಿದೆ. ಕೈಯಲ್ಲಿ ಬುರುಡೆ ತಂದು, ಮುಖಕ್ಕೆ ಮಾಸ್ಕ್ ಧರಿಸಿ, ಇಷ್ಟು ದಿನ ರಾಜ್ಯದ ಜನರ ಮುಂದೆ ಕಟ್ಟು ಕಥೆಗಳನ್ನು ಕಟ್ಟಿ ಬುರುಡೆ ಬಿಟ್ಟಿದ್ದು ಕೊನೆಗೂ ಬಯಲಾಗಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚಿನ್ನ, ನ್ಯಾಯಾಧೀಶರ ಮುಂದೆ ಎಲ್ಲ ಬುರುಡೆ ಸತ್ಯವನ್ನು ಬಯಲು ಮಾಡ್ತಿದ್ದು, ಧರ್ಮಸ್ಥಳದ ವಿರುದ್ಧ ರೂಪಿಸಿದ್ದ ಷಡ್ಯಂತ್ರ ಬಟಾಬಯಲಾಗಿದೆ. ಇದರ ಬೆನ್ನಲ್ಲೇ ಧರ್ಮಸ್ಥಳ ಗ್ರಾಮಸ್ಥರು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತರೆಲ್ಲ ಕುತಂತ್ರಿಗಳ ವಿರುದ್ಧ ಸಿಡಿದ್ದಿದ್ದು, ಈಗ ಅಸಲಿ ಶಿವತಾಂಡ, ಅಲ್ಲ ರುದ್ರತಾಂಡ ಶುರುವಾಗಿದೆ.
ಈಡುಗಾಯಿ ಒಡೆದು ಬೇಡಿಕೊಂಡ ಧರ್ಮಸ್ಥಳ ಗ್ರಾಮಸ್ಥರು
ಧರ್ಮಸ್ಥಳದ ಗ್ರಾಮದ ಸುತ್ತ ನೂರಾರು ಶವಗಳನ್ನು ಹೂತು ಹಾಕಿದ್ದಾನೆಂದು ಆರೋಪಿಸಿದ್ದ ಚಿನ್ನಯ್ಯ ಅದೆಲ್ಲ ಸುಳ್ಳು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಇದರಿಂದ ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ಅಂಟಿದ್ದ ಕಳಂಕವೊಂದು ನಾಶವಾಗಿದೆ. ಇದರ ಬೆನ್ನಲ್ಲೇ ಧರ್ಮಸ್ಥಳ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ.. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಕುತಂತ್ರ ಮಾಡಿದವರಿಗೆ ಅಣ್ಣಪ್ಪನೇ ತಕ್ಕ ಶಾಸ್ತಿ ಮಾಡಲಿ ಎಂದು ಅಣ್ಣಪ್ಪ ಸ್ವಾಮಿಯ ದೇಗುಲದ ಮುಂದೆ ಈಡುಗಾಯಿ ಒಡೆದು ಪ್ರಾರ್ಥಿಸಿದ್ದಾರೆ.
ಇನ್ನು ರಾಜ್ಯದ ವಿವಿಧ ಭಾಗಗಳಿಂದಲ್ಲೂ ಸಾವಿರಾರು ಭಕ್ತರು ಧರ್ಮಸ್ಥಳ ಚಲೋ ನಡೆಸುವ ಮೂಲಕ ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡ್ತಿರುವ ಕುತಂತ್ರಿಗಳಿಗೆ ತಕ್ಕ ಶಿಕ್ಷೆ ಆಗ್ಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಎಸ್ಐಟಿ ತನಿಖೆಯಿಂದ ಸತ್ಯ ಹೊರಬರುತ್ತೆ. ಈ ಕೇಸ್‌ನಲ್ಲಿ ಯಾರೂ ತಪ್ಪಿತಸ್ಥರಾಗಿದ್ದರೂ ಶಿಕ್ಷೆ ಕಟ್ಟಿಟ್ಟದ್ದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹೇಳಿದ್ದಾರೆ.
ಇಂದು ಪೊಲೀಸರ ವಿಚಾರಣೆಗೆ ಹಾಜರಾಗ್ತಾನಾ ದೂರ್ತ ಸಮೀರ್?
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿದ್ದಾನೆ ಎಂದು ಸಮೀರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು, ಸಮೀರ್ಗೆ ಸೇರಿದ ಬೆಂಗಳೂರಿನ ನಿವಾಸ ಮತ್ತು ಬಳ್ಳಾರಿಯ ಬಂಡಿಹಟ್ಟಿ ಪ್ರದೇಶದಲ್ಲಿರೋ ನಿವಾಸಕ್ಕೆ ನೋಟಿಸ್ ಅಂಟಿಸಿ. 2 ದಿನದಲ್ಲಿ ಹಾಜರಾಗುವಂತೆ ಸೂಚಿಸಿದ್ರು. ಹೀಗಾಗಿ ಇವತ್ತು ಸಮೀರ್ ಬೆಳ್ತಂಗಡಿ ಪೊಲೀಸರ ಮುಂದೆ ವಿಚಾರಣೆ ಹಾಜರಾಗುವ ಸಾಧ್ಯತೆ ಇದೆ. ಈಗಾಗಲೇ ಆತ ನಿರೀಕ್ಷಣಾ ಜಾಮೀನು ಪಡೆದಿರುವ ಕಾರಣ, ಸಮೀರ್ ಬಂಧನ ಆಗೋದು ಡೌಟು. ಕೇವಲ ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ:ಘೋರ ದುರಂತ.. ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. ಮಗು ಹೇಳಿದ್ದೇನು?
ಸತತ 8 ಗಂಟೆಗಳ ಕಾಲ ಚಿನ್ನಯ್ಯನ ಸಹೋದರನ ವಿಚಾರಣೆ
ಎಸ್ಐಟಿಯಿಂದ ಬಂಧನಕ್ಕೊಳಗಾದ ಅನಾಮಿಕ ದೂರುದಾರನ ಹೆಸರು ಸಿ.ಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಅನ್ನೋದು ಬಯಲಾಗಿದೆ. ಸದ್ಯ ಈ ಚೆನ್ನನನ್ನ 10 ದಿನ ಕಸ್ಟಡಿಗೆ ಪಡೆದಿರೋ SIT ರಿವರ್ಸ್ ತನಿಖೆ ಮಾಡಲು ತಯಾರಿ ನಡೆಸಿದೆ. ಇದರ ಜೊತೆಗೆ ಚೆನ್ನನ ಸೋದರ ತಾನಾಸೆಯನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿ ತನಿಖೆಗೆ ಒಳಪಡಿಸಿದ್ರು. ಸಸತ 8 ಗಂಟೆಗಳ ಕಾಲ ಮಾಸ್ಕ್ ಮ್ಯಾನ್ ಚೆನ್ನನ ಸೋದರನನ್ನು ವಿಚಾರಣೆ ನಡೆಸಿದ ಎಸ್ಐಟಿ, ಬಿಟ್ಟು ಕಳಿಸಿದೆ. ಹಾಗೂ ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿದೆ.
ಬೇಟೆಯಾಡಲು ಬಂದವ್ರೇ ಬೇಟೆಯಾಗಿ ಹೋದ್ರು ಆನ್ನೋ ಹಾಗೆ ದೂರುದಾರನಾಗಿ ಬಂದ ಚೆನ್ನ ಸದ್ಯ ತಾನೇ ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾನೆ. ಈ ಚೆನ್ನನ್ನ ಮುಂದೆ ಬಿಟ್ಟು ಹಿಂದೆ ಷಡ್ಯಂತ್ರ ನಡೆಸಿದ ಕಾಣದ ಕೈಗಳ್ಯಾವುವು. ಇನ್ನೂ ಮಾಸ್ಕ್ ಮಹಾನುಭಾವನ ಅದ್ಯಾವ್ಯಾವ ಅವತಾರಗಳನ್ನ ಎಸ್ಐಟಿ ತಂಡ ಬಯಲಿಗಳೆಯುತ್ತೋ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ