/newsfirstlive-kannada/media/media_files/2025/11/04/bgk_sugarcane-2025-11-04-07-37-26.jpg)
ರೈತ ಬೆಳೆಯೋ ಬೆಳೆಗೆ ನ್ಯಾಯಯುತ ಬೆಲೆ ಸಿಕ್ಕರೆ ಮಾತ್ರ ದೇಶ ಉದ್ಧಾರ ಆಗೋಕೆ ಸಾಧ್ಯ. ನಿತ್ಯ ಬಿಸಿಲು, ಮಳೆ, ಗಾಳಿ ಎನ್ನದೇ ಹೊಲದಲ್ಲಿ ಕೆಲಸ ಮಾಡಿ ಬೆಳೆ ಬೆಳೆಯೋ ರೈತನಿಗೆ ಅನ್ಯಾಯವಾಗುವ ಬೆಲೆ ಕೊಟ್ರೆ ಹೇಗೆ?. ಇದರ ವಿರುದ್ಧ ಬಾಗಲಕೋಟೆ, ಬೆಳಗಾವಿ ರೈತರು ಸಿಡಿದೆದ್ದಿದ್ದಾರೆ. ಕಬ್ಬಿಗೆ ಮಹಾರಾಷ್ಟ್ರದ ಮಾದರಿಯಂತೆ ಬಿಲ್ ನೀಡಿ ಅಂತ ಹೋರಾಟದ ಹಾದಿ ಹಿಡಿದಿದ್ದಾರೆ.
ರೈತ, ಅನ್ನಕೊಡುವ ದಾತ, ದೇಶದ ಬೆನ್ನೆಲುಬು.. ಆದ್ರೆ, ದೇಶದ ಬೆನ್ನಲುಬನ್ನೇ ಮುರಿಯುವ ಕೆಲಸ ಮಾಡಿದ್ರೆ ಹೇಗೆ? ಕಬ್ಬು ಬೆಳೆಗಾರರಿಗೆ ಸರ್ಕಾರ ಅನ್ಯಾಯ ಮಾಡ್ತಿದೆ ಅಂತ ಅನ್ನದಾತರು ಸಿಡಿದೆದ್ದಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತನಿಗೆ ಸಿಟ್ಟು ಬಂದ್ರೆ ಏನಾಗುತ್ತೆ ಅನ್ನೋದಕ್ಕೆ ಬಾಗಲಕೋಟೆಯಲ್ಲಿ ನಡೆದಿರೋ ಘಟನೆಯೇ ಸಾಕ್ಷಿಯಾಗಿದೆ.
/filters:format(webp)/newsfirstlive-kannada/media/media_files/2025/11/04/bgk_sugarcane_1-2025-11-04-07-37-38.jpg)
ಸಕ್ಕರೆ ಕಾರ್ಖಾನೆ ವಾಹನಗಳ ಮೇಲೆ ಕಲ್ಲು ತೂರಾಟ!
ಉತ್ತರ ಕರ್ನಾಟಕದಲ್ಲಿ ಕಬ್ಬಿನ ಕಿಚ್ಚು ಧಗಧಗಿಸಿದೆ. ಕಳೆದ 5 ದಿನಗಳಿಂದ ಅನ್ನದಾತರು ಪಟ್ಟು ಸಡಿಲಿಸದೇ ಹೋರಾಟದ ಹಾದಿ ತುಳಿದಿದ್ದಾರೆ. ಮಹಾರಾಷ್ಟ್ರದ ಮಾದರಿಯಲ್ಲಿ ಕಬ್ಬು ಬೆಳೆಗೆ ಬೆಲೆ ನಿಗದಿ ಮಾಡಿ ಅಂತ ಆಗ್ರಹಿಸ್ತಿದ್ದಾರೆ. ಆದ್ರೆ, ಬಾಗಲಕೋಟೆಯಲ್ಲಿ ಕಳೆದ 5 ದಿನಗಳಿಂದ ಮಾಡುತ್ತಿದ್ದ ಹೋರಾಟ ನಿನ್ನೆ ವಿಕೋಪಕ್ಕೆ ತಿರುಗಿತ್ತು.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿರೋ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಬಳಿ ಕಬ್ಬಿನ ಬಾಕಿ ಬಿಲ್ ಪಾವತಿ, ಕಬ್ಬಿನ ದರ ನಿಗದಿ ಮಾಡುವಂತೆ ರೈತರು ಪ್ರತಿಭಟನೆ ಮಾಡ್ತಿದ್ರು. ಆದ್ರೆ, ಇದ್ದಕ್ಕಿದ್ದಂತೆ ರೈತರು ಮಾಡ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿತ್ತು. ಆಕ್ರೋಶಿತ ರೈತರು ಸಕ್ಕರೆ ಕಾರ್ಖಾನೆಯ ಕಚೇರಿ, ಆವರಣದಲ್ಲಿ ನಿಂತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ರೈತರ ಕೋಪಾಗ್ನಿಗೆ ಬೊಲೆರೋ ವಾಹನ ಸೇರಿ ಹಲವು ವಾಹನಗಳ ಗಾಜುಗಳು ಪುಡಿ ಪುಡಿಯಾಗಿ ಹೋದ್ವು. ಕೂಡಲೇ ಸ್ಥಳಕ್ಕೆ ದಾವಿಸಿದ ಜಮಖಂಡಿ ಪೊಲೀಸರು ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು.
ಕಬ್ಬು ಬೆಳೆಗಾಗರರ ಹೋರಾಟದ ವೇಳೆ ರೈತ ಆತ್ಮಹತ್ಯೆ ಯತ್ನ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲೂ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ಹೆಚ್ಚಾಗಿದೆ. ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಅನ್ನದಾತರು ಮೂಡಲಗಿ ತಾಲೂಕಿನ ಗುರ್ಲಾಪುರ ಬಳಿ ಕಳೆದ 5 ದಿನಗಳಿಂದ ಹೋರಾಟ ಮಾಡ್ತಿದ್ದಾರೆ. ಇನ್ನು, ರೈತರು ಪ್ರತಿಭಟನೆ ಮಾಡ್ತಿದ್ದ ಸ್ಥಳಕ್ಕೆ ಸಂಸದ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ರು. ರೈತರ ಅಹವಾಲನ್ನ ಆಲಿಸುವ ಕಾರ್ಯದಲ್ಲಿ ನಿರತರಾಗಿದ್ರು. ಜಗದೀಶ್ ಶೆಟ್ಟರ್ ಮಾತನಾಡುವ ವೇಳೆಯಲ್ಲೇ ರೈತನೊಬ್ಬ ಆತ್ನಹತ್ಯೆಗೆ ಯತ್ನಿಸಿದ ಪ್ರಸಂಗ ನಡೀತು. ಲಕ್ಕಪ್ಪ ಗುಣದಾರ್ ಎಂಬ ರೈತ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ. ಕೂಡಲೇ ರೈತ ಲಕ್ಕಪ್ಪನನ್ನು ಹಾರೂಗೇರಿ ಆಸ್ಪತ್ರೆಗೆ ಕರೆದೊಯ್ದ ರೈತರು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಲಕ್ಕಪ್ಪನ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಇದೆ.
/filters:format(webp)/newsfirstlive-kannada/media/media_files/2025/10/15/cm_siddaramaiah-2025-10-15-21-58-03.jpg)
ಸರ್ಕಾರ ಎಷ್ಟು ರೂಪಾಯಿ ಹೆಚ್ಚಿಗೆ ಮಾಡಬೇಕು?
ರೈತ ಲಕ್ಕಪ್ಪ ಚಿಕಿತ್ಸೆ ಪಡೆಯುತ್ತಿರೋ ಹಾರೂಗೇರಿ ಆಸ್ಪತ್ರೆಗೆ ಶಾಸಕ ಮಹೇಂದ್ರ ತಮ್ಮಣ್ಣವರ್ ಭೇಟಿ ನೀಡಿದ್ರು. ಲಕ್ಕಪ್ಪನ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಅಲ್ಲದೇ ರೈತನ ಆಸ್ಪತ್ರೆಯ ಖರ್ಚು ವೆಚ್ಚವನ್ನ ಭರಿಸೋದಾಗಿ ಭರವಸೆ ನೀಡಿದರು. ಅಲ್ಲದೇ ಸಿಎಂ ಜೊತೆ ಚರ್ಚಿಸಿ ಕಬ್ಬು ಬೆಳೆಗಾರರ ಸಮಸ್ಯೆ ಗೆ ಶೀಘ್ರವೇ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತನಾಡಿದರು.
ಇನ್ನು, ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ 3 ಸಾವಿರದ 500 ರೂಪಾಯಿ ಬೆಲೆ ನೀಡಲಾಗ್ತಿದೆ. ಕರ್ನಾಟಕದಲ್ಲಿ ಪ್ರತಿ ಟನ್‌ಗೆ 3 ಸಾವಿರದ 200 ರೂ ನಿಗಧಿ ಮಾಡಲಾಗಿದೆ. ಇದೀಗ ರೈತರ ಪ್ರತಿ ಟನ್‌ಗೆ 3 ಸಾವಿರದ 400 ರೂಪಾಯಿ ನೀಡಿ ಅಂತಾ ಬೇಡಿಕೆ ಇಟ್ಟಿದ್ದಾರೆ. ಸದ್ಯ ರೈತರು ಕಳೆದ 5 ದಿನಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಅನ್ನದಾತರ ಹೋರಾಟಕ್ಕೆ ಸರ್ಕಾರ ಮಣಿಯುತ್ತಾ?.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us