/newsfirstlive-kannada/media/media_files/2025/08/04/ksrtc_stop-2025-08-04-20-03-14.jpg)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಂಧಾನ ಸಭೆ ವಿಫಲವಾಗಿದ್ದು ನಾಳೆಯಿಂದಲೇ ಸಾರಿಗೆ ನೌಕರರು ಮುಷ್ಕರ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಹಿಂದಿನ ಬಾಕಿ ಹಾಗೂ ವೇತನ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿತ್ತು. ಆದರೆ ಸಭೆ ಯಶಸ್ವಿಯಾಗಲಿಲ್ಲ. ಇದರ ಬೆನ್ನಲ್ಲೇ ಮುಷ್ಕರ ಘೋಷಣೆ ಮಾಡಲಾಗಿದೆ. ಆದರೆ ಸರ್ಕಾರದ ನಡೆ ಏನಿರಬಹುದು ಎನ್ನುವ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಸಾರಿಗೆ ಇಲಾಖೆಗಳು ಮುಷ್ಕರ ಘೋಷಣೆ ಮಾಡಿರುವ ಕಾರಣ ಸಾರ್ವಜನಿಕರ ಪ್ರಯಾಣಕ್ಕೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಮುಂಜಾಗ್ರತೆ ಕೈಗೊಳ್ಳಲಿದೆ. 4 ನಿಗಮಗಳ ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರ ಬ್ರೇಕ್ ಹಾಕಿದ್ದು ಪ್ರತಿಭಟನೆ ಮಾಡದಂತೆ ಎಸ್ಮಾ ಜಾರಿ ಮಾಡಲಾಗಿದೆ. ಮುಷ್ಕರ ನಡೆಸದಂತೆ ತಾಕೀತು ಮಾಡಲಾಗಿದ್ದು ಜುಲೈನಿಂದ 6 ತಿಂಗಳು ಮುಷ್ಕರವನ್ನ ಮಾಡದಂತೆ ಕೆಎಸ್​ಆರ್​ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.
ನೌಕರರನ್ನ ನಿಯಂತ್ರಣ ಮಾಡಲು ಸರ್ಕಾರ ಎಸ್ಮಾವನ್ನ ಜಾರಿ ಮಾಡಿದೆ. ಈ ಮುಷ್ಕರದ ಒಂದು ವಾರಕ್ಕೂ ಮೊದಲೇ ಎಸ್ಮಾ ಜಾರಿ ಮಾಡಿದೆ. ಇದರಿಂದ ನೌಕರರು ಸರ್ಕಾರದ ನಿಯಮ, ನಿಬಂಧನೆಗಳನ್ನ ಮೀರುವಂತಿಲ್ಲ. ಇದರ ಜೊತೆಗೆ ರಾಜ್ಯದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಸರ್ಕಾರ, ಖಾಸಗಿ ಬಸ್​ಗಳ ವ್ಯವಸ್ಥೆ ಮಾಡುತ್ತದೆ ಎನ್ನಲಾಗಿದೆ.
ಇದನ್ನೂ ಓದಿ:https://newsfirstlive.com/state/minister-ramalinga-reddy-talk-about-transport-strike-9625696
/filters:format(webp)/newsfirstlive-kannada/media/media_files/2025/08/04/ksrtc_bus-2025-08-04-20-03-33.jpg)
ಖಾಸಗಿ ಬಸ್​ಗಳನ್ನ ಸಾರ್ವಜನಿಕರ ಸೇವೆಗಳಿಗೆ ಸರ್ಕಾರ ತೆಗೆದುಕೊಳ್ಳುತ್ತದೆ. ಇನ್ನು ಸಿಲಿಕಾನ್​ ಸಿಟಿಯಲ್ಲಿ ಮೆಟ್ರೋ ಟ್ರೈನ್​ಗಳನ್ನ ಹೆಚ್ಚಿನ ಸಮಯ ಓಡಿಸಲು ಯೋಜನೆ ಇದೆ. ಬಸ್​ಗಳು ಇರದ ಕಾರಣ ಮೆಟ್ರೋ ರೈಲುಗಳು ಸಂಚಾರ ಅಧಿಕಗೊಳ್ಳಲ್ಲಿದೆ. ಇದಕ್ಕಾಗಿ ಮೆಟ್ರೋ ಸಿಬ್ಬಂದಿ ವರ್ಗವನ್ನ ಮುಷ್ಕರ ದಿನ ಮಾತ್ರ ಹೆಚ್ಚಿಗೆ ಮಾಡುವುದು. ಪ್ರಯಾಣಕ್ಕೆ ಜನರಿಗೆ ತೊಂದರೆ ಆಗದಂತೆ ಇನ್ನು ಕೆಲವು ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಿದೆ.
ರಾಜ್ಯದಲ್ಲಿ ಕೆಎಸ್​ಆರ್​​ಟಿಸಿ, ಎನ್​​ಡಬ್ಲುಆರ್​​ಟಿಸಿ, ಕೆಕೆ​ಆರ್​​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳು ಒಟ್ಟು 23 ಸಾವಿರ ಬಸ್​ಗಳು ಬಂದ್ ಆಗಲಿವೆ. ಹೀಗಾಗಿ ಜನರಿಗೆ ಸಮಸ್ಯೆ ಆಗುವುದನ್ನು ತಡೆಯಲು ಖಾಸಗಿ ಬಸ್​ಗಳ ವ್ಯವಸ್ಥೆ ಮಾಡಲು ಸರ್ಕಾರ ಮುಂದಾಗಿದೆ. ಜೊತೆಗೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರದಲ್ಲಿ ಹೆಚ್ಚಾಗಲಿದ್ದು ಜನದಟ್ಟಣೆ ನಿಯಂತ್ರಣ ಮಾಡಲು ಹೆಚ್ಚಿನ ಸಿಬ್ಬಂದಿ ವರ್ಗ ಕೂಡ ಇರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us