Advertisment

ಕಾವೇರಿ ತೀರ್ಥೋದ್ಭವ.. ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ

ಕರುನಾಡ ಜೀವನದಿ ಕಾವೇರಿಯ ಉಗಮ ಸ್ಥಾನದಲ್ಲಿ ತೀರ್ಥೋದ್ಭವಾಗಿದೆ. ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ತೀರ್ಥೋದ್ಭವವಾಗಿದ್ದು, ಅಪಾರ ಭಕ್ತ ವೃಂದವು ಪವಿತ್ರ ತೀರ್ಥೋದ್ಭವ ಕ್ಷಣವನ್ನು ಕಣ್ತುಂಬಿಕೊಂಡಿದೆ.

author-image
Ganesh Kerekuli
KAVERI
Advertisment

ಕರುನಾಡ ಜೀವನದಿ ಕಾವೇರಿಯು ತೀರ್ಥೋದ್ಭವದಲ್ಲಿ ದೈವ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ  ತೀರ್ಥೋದ್ಭವ ಜರುಗಿದೆ. 

Advertisment

ಮಧ್ಯಾಹ್ನ 1:44 ಗಂಟೆಗೆ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋಧ್ಭವಾಗಿದೆ. ಇಂದು ಮುಂಜಾನೆಯಿಂದಲೇ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ‌  ನಾನಾ ಪೂಜಾ ಕೈಂಕರ್ಯಗಳು ನಡೆದವು. ಅರ್ಚಕರ ತಂಡ ಕೂಡ ಕಾವೇರಿ ಮಾತೆಗೆ ಭವ್ಯ ಸ್ವಾಗತ ಮಾಡಿದ್ದಾರೆ.

ಮಾತೆಯ ದರ್ಶನಕ್ಕೆ ಸಹಸ್ರ ಸಹಸ್ರ ಭಕ್ತರು ಆಗಮಿಸಿದ್ದ ಹಿನ್ನಲೆ ಯಾವುದೇ ರೀತಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಏಕಮುಖ ಸಂಚಾರದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ತೀರ್ಥಸ್ವರೂಪಿಣಿಯಾದ ಕಾವೇರಿ ಮಾತೆಯ ದರ್ಶನವನ್ನು ಅಪಾರ ಭಕ್ತರು ಪಡೆಯುತ್ತಿದ್ದಾರೆ. ಭಕ್ತರು ಕಾವೇರಿಯ ಪವಿತ್ರ ಕೊಳದಲ್ಲಿ ಮಿಂದೆದ್ದಿದ್ದಾರೆ. 

ಇದನ್ನೂ ಓದಿ:ರಘು ದೀಕ್ಷಿತ್‌ ಕೈ ಹಿಡಿಯುತ್ತಿರುವ ವಾರಿಜಶ್ರೀ ಯಾರು? ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Kaveri Theerthodbhava Kodagu
Advertisment
Advertisment
Advertisment