/newsfirstlive-kannada/media/media_files/2026/02/18/kolara-mangalamukhi-2026-02-18-10-55-32.jpg)
ಬಂಗಾರಪೇಟೆ: ಮಹಾಶಿವರಾತ್ರಿ ಹಬ್ಬ ಮುಗಿದ ಬೆನ್ನಲ್ಲೇ ಕೋಲಾರ ಜಿಲ್ಲೆಯಲ್ಲಿ ಮೈಜುಮ್ ಎನಿಸುವ ಘಟನೆಯೊಂದು ನಡೆದಿದೆ. ಸ್ಮಶಾನದಲ್ಲಿ ಮಂಗಳಮುಖಿಯರು ಕಾಳಿ ಅವತಾರ ತಾಳಿ, ಪ್ರಾಣಿಯ ಕುತ್ತಿಗೆ ಕಚ್ಚಿ ರಕ್ತ ಕುಡಿದು ನಡೆಸಿದ ಭಯಾನಕ ಆಚರಣೆ ನೋಡುಗರ ಎದೆ ನಡುಗುವಂತೆ ಮಾಡಿದೆ.
ಸ್ಮಶಾನದಲ್ಲಿ ಕಾಳಿ ಪೂಜೆ..
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದಲ್ಲಿ ಈ ವಿಭಿನ್ನ ಹಾಗೂ ರೌದ್ರ ಆಚರಣೆ ನಡೆದಿದೆ. ಇಲ್ಲಿನ ಸೇಠ್ ಕಾಂಪೌಂಡ್ ಕುರುಮಾರಿಯಮ್ಮ ದೇವಾಲಯದ ಅರ್ಚಕರಾದ ಕೆ. ಕಮಲ್ ಅವರು ಸ್ವತಃ ಕಾಳಿ ವೇಷ ಧರಿಸಿ, ಮಂಗಳಮುಖಿಯರ ನೇತೃತ್ವದಲ್ಲಿ ಸ್ಮಶಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
/filters:format(webp)/newsfirstlive-kannada/media/media_files/2026/02/18/kolara-mangalamukhi-2-2026-02-18-10-55-47.jpg)
ರಕ್ತ ಕುಡಿದ ಪೂಜಾರಿ
ಶಕ್ತಿ ದೇವತೆಯನ್ನು ಒಲಿಸಿಕೊಳ್ಳುವ ಸಲುವಾಗಿ ಸ್ಮಶಾನದಲ್ಲಿ ಪ್ರಾಣಿ ಬಲಿ ನೀಡಲಾಯಿತು. ಈ ವೇಳೆ ಉಗ್ರ ಕಾಳಿಯ ಅವತಾರದಲ್ಲಿದ್ದ ಅರ್ಚಕ ಕಮಲ್, ಬಲಿ ನೀಡಲಾದ ಪ್ರಾಣಿಯನ್ನು ಕಚ್ಚಿ, ಅದರ ರಕ್ತವನ್ನು ಕುಡಿಯುವ ಮೂಲಕ ಆಕ್ರೋಶಭರಿತವಾಗಿ ಆಚರಣೆ ನಡೆಸಿದರು. ಈ ದೃಶ್ಯ ಕಂಡು ಅಲ್ಲಿ ನೆರೆದಿದ್ದವರು ಕ್ಷಣಕಾಲ ಬೆಚ್ಚಿಬಿದ್ದರು.
/filters:format(webp)/newsfirstlive-kannada/media/media_files/2026/02/18/kolara-mangalamukhi-1-2026-02-18-10-56-08.jpg)
ಸಾವಿರಾರು ಜನರ ಭಾಗಿ
ಪ್ರತಿ ವರ್ಷ ಮಹಾಶಿವರಾತ್ರಿ ಕಳೆದ ನಂತರ ಬರುವ ಅಮಾವಾಸ್ಯೆಯಂದು ಈ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಕತ್ತಲ ರಾತ್ರಿಯಲ್ಲಿ ಸ್ಮಶಾನದಲ್ಲಿ ನಡೆಯುವ ಈ ಪೂಜೆಯನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಂಗಳಮುಖಿಯರು ಮತ್ತು ಭಕ್ತರು ಈ ಶಕ್ತಿ ದೇವತೆಯ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟಿನಲ್ಲಿ ಬಂಗಾರಪೇಟೆಯ ಸ್ಮಶಾನದಲ್ಲಿ ನಡೆದ ಈ ರಕ್ತಸಿಕ್ತ ಪೂಜೆ ಮತ್ತು ಕಾಳಿ ಅವತಾರದ ಅಬ್ಬರ ಈಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: 50 ಕುಟುಂಬಕ್ಕೆ ಒಂದೇ ನಲ್ಲಿ! 5 ವರ್ಷವಾದರೂ ಹನಿ ನೀರು ಕಾಣದ ‘ಮನೆ ಮನೆಗೆ ಗಂಗೆ’
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us