/newsfirstlive-kannada/media/media_files/2025/11/24/kolara-husband-wife-2025-11-24-11-35-34.jpg)
ಅವಳು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದ ಹುಡುಗಿ. ಆತ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಆಟೋ ಓಡಿಸಿಕೊಂಡಿದ್ದವನು. ಇಬ್ಬರಿಗೂ ಮದುವೆ ಮಾಡಿದ್ರು, ಒಂದು ಹೆಣ್ಣು ಮಗು ಕೂಡಾ ಇತ್ತು. ಆದರೆ ಪದೇ ಪದೇ ತವರು ಮನೆಗೆ ಹೋಗಿ ಬರುತ್ತಿದ್ದ ತನ್ನ ಪತ್ನಿಯ ಮೇಲೆ ಅನುಮಾನ ಪಟ್ಟ ಪತಿ, ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.
ಅನುಮಾನಂ ಪೆದ್ದ ರೋಗಂ ಅನ್ನೋ ಗಾಧೆ ಮಾತೇ ಇದೆ. ಇದೇ ರೀತಿ ಕೋಲಾರ ಜಿಲ್ಲೆಯಲ್ಲಿ ಪತಿಯ ಅನುಮಾನಕ್ಕೆ ಪತ್ನಿಯ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ಈತನೇ ನೋಡಿ ಪತ್ನಿಯನ್ನು ಕೊಲೆ ಮಾಡಿದ ಪಾಪಿ ಪತಿ ಹೆಸರು, ಶಿವರಾಜ್​.
ಆರೋಪಿ ಶಿವರಾಜ್​ ಕೋಲಾರದ ಜನ್ನಘಟ್ಟ ಗ್ರಾಮವನು. ಕಳೆದ 8 ವರ್ಷಗಳ ಹಿಂದೆ ಬೆಂಗಳೂರಿನ ವಿಲ್ಸನ್​​ ಗಾರ್ಡನ್​ ನಿವಾಸಿ ಕಾವ್ಯಾಳನ್ನು ಮದುವೆ ಆಗಿದ್ದ. ಇಬ್ಬರ ದಾಂಪತ್ಯಕ್ಕೆ 7 ವರ್ಷದ ಹೆಣ್ಣು ಮಗು ಕೂಡ ಇದೆ. ಆದ್ರೆ ಪತ್ನಿ ಪದೇ ಪದೇ ತವರಿಗೆ ಹೋಗ್ತಾಳೆಂದು ಶಿವರಾಜ್​​ ಜಗಳ ಮಾಡ್ತಿದ್ದ.. ಜೊತೆಗೆ ತವರಿನಿಂದ ಹಣ ತರುವಂತೆಯೂ ಶಿವರಾಜ್​​ ಪತ್ನಿ ಕಾವ್ಯ ಜೊತೆ ಗಲಾಟೆ ಮಾಡ್ತಿದ್ದನಂತೆ..
ಇದನ್ನೂ ಓದಿ: ಸಿಂಧ್ ಪ್ರಾಂತ್ಯ ಮತ್ತೆ ಭಾರತಕ್ಕೆ ಮರಳುವ ಭರವಸೆ, ರಾಜನಾಥ್ ಸಿಂಗ್ ಹೇಳಿಕೆಗೆ ಪಾಕ್​ಗೆ ಕಂಗಾಲು..!
ಹಿರಿಯರು ಸಾಕಷ್ಟು ಬಾರಿ ರಾಜೀ ಪಂಚಾಯ್ತಿ ಮಾಡಿಸಿದ್ದರು, ಶಿವರಾಜ್​ಗೆ ಪತ್ನಿ ಮೇಲಿನ ಅನುಮಾನ ಕಡಿಮೆ ಆಗಿರಲಿಲ್ಲ. ಮೊನ್ನೆ ಕೂಡ ಶಿವರಾಜ್​ ಮತ್ತು ಕಾವ್ಯಾ ನಡುವೆ ಗಲಾಟೆ ಆಗಿದೆ. ಮಗಳು ಶಾಲೆಗೆ ಹೋದ ಬಳಿಕ ಪತಿ ಪತ್ನಿ ಜಗಳವಾಡಿದ್ದು, ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಪತಿ ಶಿವರಾಜ್​ ಪತ್ನಿಗೆ ಹೊಡೆದಿದ್ದಾನೆ. ಆಗ ಪತ್ನಿ ಕಾವ್ಯಾ ಕೂಡ ಶಿವರಾಜ್​​ಗೆ ಹೊಡೆಯಲು ಮುಂದಾಗಿದ್ದಾಳೆ. ಇದರಿಂದ ಕೋಪಗೊಂಡ ಪತಿ ಶಿವರಾಜ್​​, ಕಾವ್ಯಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕಥೆಕಟ್ಟಿದ್ದ ಆರೋಪಿ ಪತಿ
ಮಧ್ಯಾಹ್ನ ಹೊತ್ತಿಗೆ ಪತ್ನಿಯನ್ನು ಕೊಲೆ ಮಾಡಿದ್ದ ಶಿವರಾಜ್​​. ಏನೂ ಗೊತ್ತಿಲ್ಲದವನಂತೆ ಸಂಜೆವರೆಗೂ ಹೊರಗೆ ಸುತ್ತಾಡಿ. ಬಳಿಕ ಮನೆಗೆ ಬಂದಿದ್ದಾನೆ. ಬಳಿಕ ಹೆಂಡತಿ ಉಸಿರಾಡುತ್ತಿಲ್ಲ ಎಂದು ಅಕ್ಕಪಕ್ಕದ ಮನೆಯವರ ಮುಂದೆ ನಾಟಕವಾಡಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟು ನಾಲ್ಕೈದು ಗಂಟೆಯಾಗಿದೆ ಎಂದು ಹೇಳಿದಾಗ.. ಅನುಮಾನಗೊಂಡ ಕಾವ್ಯ ಪೊಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಪತಿ ಶಿವರಾಜ್​​ನನ್ನು ವಿಚಾರಣೆ ಮಾಡಿದ್ದು ವೇಳೆ ಕೊ* ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಆರೋಪಿಯನ್ನು ಕರೆದೊಯ್ದು ಸ್ಥಳಮಹಜರು ಪ್ರಕ್ರಿಯೆ ಮಾಡಿದ್ದಾರೆ.
ಒಟ್ಟಾರೆ.. ಅನುಮಾನಕ್ಕೆ ಇಡೀ ಕುಟುಂಬವೇ ನಾಶವಾಗಿದೆ. ನಂಬಿ ಬಂದಳವನ್ನು ಕೊ* ಮಾಡಿ ಶಿವರಾಜ್​ ಜೈಲು ಸೇರಿದ್ದಾನೆ. ಇತ್ತ ಏಳು ವರ್ಷದ ಹೆಣ್ಣುಮಗು, ಅಪ್ಪ-ಅಮ್ಮನನ್ನು ಕಳೆದು ಕೊಂಡು ಅನಾಥವಾಗಿದ್ದು ಮಾತ್ರ ದುರಂತ.
ಇದನ್ನೂ ಓದಿ: ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ- CJI ಸೂರ್ಯ ಕಾಂತ್ ಅವರ ಪ್ರಮುಖ 10 ತೀರ್ಪುಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us